ಮಕ್ಕಳನ್ನು Corona ಸೋಂಕಿನಿಂದ ರಕ್ಷಿಸುವ ಐದು Super Food

ಇಡೀ ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಕರೋನಾವೈರಸ್ ಅಟ್ಟಹಾಸ ಮುಂದುವರೆದಿದೆ. ದೇಶದಲ್ಲಿ ಆರಂಭವಾಗಿರುವ ಕರೋನಾ ಎರಡನೇ ಅಲೆಯು ಯುವಕರಿಗೆ ಹಾಗೂ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಕರೋನಾ ಸೋಂಕಿನಿಂದ ರಕ್ಷಿಸಲು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ.

Written by - Yashaswini V | Last Updated : Apr 12, 2021, 12:15 PM IST
  • ಮೊಳಕೆ ಕಾಳುಗಳನ್ನು (Sprouts) ಪೌಷ್ಠಿಕಾಂಶದ ಆಗರ ಎಂದು ಕರೆಯಲಾಗುತ್ತದೆ
  • ಎಲ್ಲಾ ರೀತಿಯ ದ್ವಿದಳ ಧಾನ್ಯಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ
  • ಹಲವು ಕಾಯಿಲೆಗಳಿಗೆ ಹಾಗಲಕಾಯಿ ಮದ್ದು ಎಂದು ಹೇಳಲಾಗುತ್ತದೆ
ಮಕ್ಕಳನ್ನು Corona ಸೋಂಕಿನಿಂದ ರಕ್ಷಿಸುವ ಐದು Super Food

ನವದೆಹಲಿ: ನಿರಂತರವಾಗಿ ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳು ಜನರ ನಿದ್ದೆ ಕೆಡಿಸಿದೆ. ಅದೇ ಸಮಯದಲ್ಲಿ ದೇಶದಲ್ಲಿ ಆರಂಭವಾಗಿರುವ ಕರೋನಾ ಎರಡನೇ ಅಲೆಯು ಯುವಕರಿಗೆ ಹಾಗೂ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಮಧ್ಯೆ ಶಾಲಾ-ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಮುಂದಿನ ಆದೇಶದವರೆಗೂ ಮುಚ್ಚುವಂತೆ ಹಲವು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಆದರೆ ಕೇವಲ ಶಾಲೆಗೆ ಕಳುಹಿಸದೇ ಇರುವುದರಿಂದ ಮಕ್ಕಳು ಸೇಫ್ ಆಗಿರುತ್ತಾರಾ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲ. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದಿರುವ ಹೊರತಾಗಿ ಅವರನ್ನು ಕರೋನಾ ಸೋಂಕಿನಿಂದ ರಕ್ಷಿಸಲು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ ಎಂದು ಹಲವು ತಜ್ಞರು ಸಲಹೆ ನೀಡಿದ್ದಾರೆ. 

ಡಾಕ್ಟರ್ ಏನ್ ಹೇಳ್ತಾರೆ?
ಸಾಂಕ್ರಾಮಿಕದ ಈ ಹಂತದಲ್ಲಿ ಮಕ್ಕಳ ಆಹಾರ ಮತ್ತು ಪಾನೀಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯ. ಮಕ್ಕಳಿಗೆ ಪೋಷಣಾಭರಿತ ಮತ್ತು ಅವರ ಪ್ರತಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವ ಆಹಾರವನ್ನು ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಹಣ್ಣುಗಳು ಮತ್ತು ತರಕಾರಿ (Vegetables)ಗಳನ್ನು ನೀಡುವುದು ಪ್ರಯೋಜನಕಾರಿಯಾಗಿದೆ ಎಂದು  ಐಎಂಎ ಅಧ್ಯಕ್ಷ ಡಿಆರ್ ಕೆಕೆ ಅಗರ್ವಾಲ್ ಅವರು ಹೇಳಿದ್ದಾರೆ.

ಮಕ್ಕಳಿಗೆ ಮೊಳಕೆ ಕಟ್ಟಿದ ಕಾಳುಗಳು, ಎಲ್ಲಾ ರೀತಿಯ ದ್ವಿದಳ ಧಾನ್ಯಗಳು, ಹಾಗಲಕಾಯಿ ಇತ್ಯಾದಿಗಳನ್ನು ನೀಡಬೇಕು. ಅಶ್ವಗಂಧ ಮತ್ತು ಗಿಲೋಯಿ ಅನ್ನು ಕೂಡ ಮಕ್ಕಳಿಗೆ ನೀಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ - Onion Benefits: ವೈದ್ಯರಿಂದ ದೂರ ಉಳಿಯಲು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಕಚ್ಚಾ ಈರುಳ್ಳಿ

ಮೊಳಕೆಯೊಡೆದ ಧಾನ್ಯವು ಶಕ್ತಿಯನ್ನು ನೀಡುತ್ತದೆ :
ಮೊಳಕೆ ಕಾಳುಗಳನ್ನು (Sprouts) ಪೌಷ್ಠಿಕಾಂಶದ ಆಗರ ಎಂದು ಕರೆಯಲಾಗುತ್ತದೆ. ಮೊಳಕೆಯೊಡೆದ ಧಾನ್ಯಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಇದು ದೇಹವನ್ನು ನಿರ್ವಿಷಗೊಳಿಸಲು (Body Detox) ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸರಿಯಾದ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಇದ್ದು ಇದು ಮಕ್ಕಳನ್ನು ಆರೋಗ್ಯಕರವಾಗಿಸುತ್ತದೆ. 

ಬೇಳೆಕಾಳುಗಳು ಸಹ ಮುಖ್ಯ :
ಎಲ್ಲಾ ರೀತಿಯ ದ್ವಿದಳ ಧಾನ್ಯಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಮಕ್ಕಳಿಗೆ (Children) ಸೂಪ್ ರೀತಿ ಕುಡಿಯಲು ಬೇಳೆ ತಿಳಿ ಸಾರನ್ನು ಅಥವಾ ರಸಂ ಅನ್ನು ನೀಡಬಹುದು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ರೋಗ ನಿರೋಧಕ (Immunity) ಶಕ್ತಿಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ -  Food Storage Tips: ಬೇಸಿಗೆಯಲ್ಲಿ ಈ ವಸ್ತುಗಳನ್ನು ಫ್ರಿಜ್‌ನಲ್ಲಿ ದೀರ್ಘಕಾಲ ಇಡಬೇಡಿ

ತೊಗರಿ ಬೇಳೆ ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಇದು ಆಂಟಿ-ಮೈಕ್ರೋಬಿಯಲ್ ಮತ್ತು ಆಂಟಿ-ಇನ್ಫ್ಲಮೇಟರಿ ಗುಣಗಳನ್ನು ಹೊಂದಿದೆ. ಇದು ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ. ಇದು ದೇಹದ ವಿಷವನ್ನು ತೆಗೆದುಹಾಕುವ ಗುಣಗಳನ್ನು ಹೊಂದಿವೆ. ಇದರ ಸೇವನೆಯು ದೇಹದ ವಿಷಕಾರಿ ಅಂಶಗಳಲ್ಲಿ ಇಳಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ಮಕ್ಕಳಿಗೆ ತಪ್ಪದೇ ತಿನ್ನಿಸಿ ಹಾಗಲಕಾಯಿ:
ಹಲವು ಕಾಯಿಲೆಗಳಿಗೆ ಹಾಗಲಕಾಯಿ ಮದ್ದು ಎಂದು ಹೇಳಲಾಗುತ್ತದೆ. ಡಯಾಬಿಟಿಸ್ ರೋಗಿಗಳಿಗೆ ಹಾಗಲಕಾಯಿ ಸೇವನೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ಪ್ರತಿಜೀವಕ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಸಮೃದ್ಧವಾಗಿದ್ದು ವಿಟಮಿನ್-ಸಿ ಮತ್ತು ವಿಟಮಿನ್-ಎ ಸಹ ಕಂಡು ಬರುವುದರಿಂದ ಮಕ್ಕಳಿಗೆ ಹಾಗಲಕಾಯಿ ತಿನ್ನುವ ಅಭ್ಯಾಸ ಬೆಳೆಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವಿಟಮಿನ್ ಎ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಹಾಗಳಕಾಯನ್ನು ನಿಯಮಿತವಾಗಿ ತಿನ್ನುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣ, ಹುಳಿ ತೇಗು, ಹೊಟ್ಟೆಯ ಹುಳುಗಳು ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ - Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್

ಅಶ್ವಗಂಧ: 


ಅಶ್ವಗಂಧ ಒಂದು ಅದ್ಭುತವಾದ ಮೂಲೆಕೆಯಾಗಿದ್ದು ಇದನ್ನು ಸರ್ವರೋಗಕ್ಕೂ ಮನೆಮದ್ದು ಎಂದು ಪರಿಗಣಿಸಲಾಗಿದೆ. ಮಕ್ಕಳಿಗೆ ಆಗಾಗ್ಗೆ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತಿದ್ದರೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಕೊರತೆಯಿಂದಾಗಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಶ್ವಗಂಧ ನಿಮಗೆ ಸಹಕಾರಿಯಾಗಲಿದೆ. ಅಶ್ವಗಂಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ  ಇದು ರಕ್ತವನ್ನು ಶುದ್ಧೀಕರಿಸುತ್ತದೆ. ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಇದು ರಕ್ತದ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು, ಮಾರಕ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News