ನವದೆಹಲಿ :  ರೂಪಾಂತರಿ ಕರೋನಾ ವೈರಸ್ (Coronavirus) ಬಗ್ಗೆ ಎಚ್ಚರದಿಂದಿರುವ ಸಮಯ ಬಂದಿದೆ.  ಲಂಡನ್ ಹೈಸ್ಪೀಡ್ ವೈರಸ್ ಈಗ ಭಾರತಕ್ಕೂ ಬಂದಿದೆ.  ಬೆಂಗಳೂರು, ಶಿವಮೊಗ್ಗ, ಹೈದರಾಬಾದ್, ಪುಣೆ ಅಲ್ಲದೆ ಉತ್ತರ ಪ್ರದೇಶದ ಮೀರತ್ ನಲ್ಲಿಯೂ ರೂಪಾಂತರಿ ಕರೋನಾ ವೈರಸ್ ಕಂಡು ಬಂದಿರುವುದು ದೃಢ ಪಟ್ಟಿದೆ. 


COMMERCIAL BREAK
SCROLL TO CONTINUE READING

ಮೀರತ್ ನಲ್ಲಿ ಬ್ರಿಟನ್ ನಿಂದ ಹಿಂದಿರುಗಿರುವ ಕುಟುಂಬದ 2 ವರ್ಷದ ಮಗುವಿನಲ್ಲಿ ರೂಪಾಂತರಿ ಕರೋನಾ ವೈರಸ್ (COVID Newstrain) ಪತ್ತೆಯಾಗಿದೆ. ಆದರೆ, ಮಗುವಿನ ತಾಯಿ ತಂದೆ ಇಬ್ಬರ ರಿಪೋರ್ಟ್ ನೆಗೆಟಿವ್ ಬಂದಿದೆ.  ಲಂಡನ್ ವೈರಸ್ ಮಕ್ಕಳಿಗೆ ಮಾರಕವಾಗಲಿದೆಯೇ ಎಂಬ ಆತಂಕ ಇದೀಗ ಕಾಡತೊಡಗಿದೆ. 
ಮೀರತ್ ಗೆ ಅಗಮಿಸಿರುವ ಬ್ರಿಟನ್ (Britain) ಕುಟುಂಬದ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. 100 ಜನರ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 70 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ.  ಕೊರೋನಾ (COVID-19) ಸಂಕ್ರಾಮಿತರ ಮೇಲೆ ನಿಗಾ ಇರಿಸಲಾಗಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


 
 ALSO READ : ಬೆಂಗಳೂರಿಗೂ ಬಂತು ರೂಪಾಂತರಿ ಕರೋನಾ : ತಾಯಿ ಮಗು ಸೇರಿ ಮೂವರಲ್ಲಿ ಸೋಂಕು ಪತ್ತೆ


ನಿಮಗಿದು ತಿಳಿದಿರಲಿ
ಲಂಡನ್ ವೈರಸ್ ಸೂಪರ್ ಸ್ಪೀಡ್ ನಲ್ಲಿ ಹರಡುತ್ತದೆ. ರೂಪಾಂತರಿತ ವೈರಸ್ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅದೆಷ್ಟು ಮಾರಕ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮಕ್ಕಳಲ್ಲಿ ಇದು ವ್ಯಾಪಕವಾಗಿ ಹರಡಬಹುದೆಂಬ ಆತಂಕ ವ್ಯಕ್ತವಾಗಿದೆ. ಆದರೆ, ಸಂಶೋಧನೆಯಲ್ಲಿ ಅದಿನ್ನೂ ದೃಢ ಪಟ್ಟಿಲ್ಲ. 
ರೂಪಾಂತರಿತ ವೈರಸ್ ಬಗ್ಗೆ ತಜ್ಞರು ಏನು ಹೇಳುತ್ತಾರೆ.


1. ರೂಪಾಂತರಿತ ವೈರಸ್ ಅತಿ ವೇಗವಾಗಿ ಹರಡುತ್ತದೆ. ಅದೆಷ್ಟು ಮಾರಕ ಅನ್ನುವುದು ಇನ್ನೂ ದೃಢ ಪಟ್ಟಿಲ್ಲ
2. ತಜ್ಞರ ಪ್ರಕಾರ ವೇಗವಾಗಿ ಹರಡುವ ವೈರಸ್ ಗಳು ಸಾಮಾನ್ಯವಾಗಿ ಕಡಿಮೆ ಮಾರಕ ಗುಣ ಹೊಂದಿರುತ್ತವೆ. ಮಾರಕ ವೈರಸ್ ಗಳು ಎಂದಿಗೂ ವೇಗವಾಗಿ ಹರಡುವುದಿಲ್ಲ. ಯಾಕೆಂದರೆ, ಮಾರಕ ಗುಣ ಹೊಂದಿರುವ ವೈರಸ್ ಗಳು ತಮಗೆ ಬೆಳೆಯಲು ಅವಕಾಶ ಕೊಟ್ಟ ದೇಹವನ್ನೇ ಮೊದಲು ಮುಗಿಸಿಬಿಡುತ್ತವೆ. ಹಾಗಾಗಿ, ವೇಗವಾಗಿ ಹರಡುವ ವೈರಸ್ ಯಾವತ್ತಿಗೂ ಕಡಿಮೆ ಮಾರಕವಾಗಿರುತ್ತದೆ. 
3. ಕೋವಿಡ್ ವೈರಸ್ ಹಳೆಯದ್ದೇ, ಅದರ ಹರಡುವ ಗುಣ ಮಾತ್ರ ಬದಲಾಗಿದೆ. ಹಾಗಾಗಿ, ಗಾಬರಿಯಾಗಬೇಕಾದ ಅವಶ್ಯಕತೆ ಏನಿಲ್ಲ. ಸಾಮಾಜಿಕ ಅಂತರ, (Social Distancing) ಮಾಸ್ಕ್, (Mask) ಧರಿಸುವುದು ಪದೇ ಪದೇ ಮುಖ, ಕೈ ತೊಳೆಯುವುದರ ಮೂಲಕ ಇದರಿಂದ ಪಾರಾಗಬಹುದು. 
4. ಕರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದರಿಂದ ರೂಪಾಂತರಿತ ಕರೋನಾದಿಂದಲೂ ಪಾರಾಗಬಹುದು.


 ALSO READ : Coronavirus : Corona Strain: ಬೆಂಗಳೂರಿನ ಬಳಿಕ ಶಿವಮೊಗ್ಗಕ್ಕೂ ಶಾಕ್


ನಿನ್ನೆಯಷ್ಟೇ ಬ್ರಿಟನ್ ನಿಂದ ವಾಪಾಗಿರುವ ಬೆಂಗಳೂರಿನ (Bengaluru) ಮೂವರಲ್ಲಿಯೂ ರೂಪಾಂತರಿ ಕರೋನಾ ಸೋಂಕು ಪತ್ತೆಯಾಗಿತ್ತು. ಇಲ್ಲಿಯೂ ತಾಯಿ ಮಗುವಿನಲ್ಲಿ ರೂಪಾಂತರಿ ಕರೋನಾದ ಸೋಂಕು ಪತ್ತೆಯಾಗಿದೆ. ಇದೀಗ ಶಿವಮೊಗ್ಗದ ನಾಲ್ವರಲ್ಲಿಯೂ ಹೊಸ ಕರೋನಾ ಸೋಂಕು ಪತ್ತೆಯಾಗಿದೆ. ಇಲ್ಲಿವರೆಗೆ ರಾಜ್ಯದ 7 ಮಂದಿಯಲ್ಲಿ ರೂಪಾಂತರಿ ಕರೋನಾ ಸೋಂಕು ಕಂಡುಬಂದಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.