Online Medicine: ಆನ್‌ಲೈನ್‌ನಲ್ಲಿ ಔಷಧಿ ಖರೀದಿಸುವವರೇ ಎಚ್ಚರ..!
Online Medicine Effect: ನಿಮಾನ್ಸ್ ಸಂಸ್ಥೆ ಅಧ್ಯಯನದ ಪ್ರಕಾರ ಬೆಂಗಳೂರಿನ ಯುವಜನರು ಆನ್‌ಲೈನ್‌ನಲ್ಲಿ ಹೆಚ್ಚಾಗಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದಾರೆ. ಇದನ್ನು ‘ಸೈಬರ್ ಕಾಂಡ್ರಿಯಾಸಿಸ್’ ಎಂದು ಕರೆಯಲಾಗುತ್ತದೆ.
ಬೆಂಗಳೂರು: ಆರೋಗ್ಯ ಸಮಸ್ಯೆಗೆ ಕೆಲವೊಂದು ಬಾರಿ ನೇರವಾಗಿ ವೈದ್ಯರನ್ನು ಭೇಟಿ ಮಾಡಿ ಔಷಧಿ ಪಡೆದರೆ ಕೆಲವೊಂದು ಬಾರಿ ವೈದ್ಯರ ಸಲಹೆಗಳು ಅಥವಾ ದಾದಿಯರು ನೀಡಿದ ಔಷಧಿಗಳಿಂದ ಆರೋಗ್ಯಕ್ಕೆ ಪರಿಣಾಮಕಾರಿಯಾಗಿರುವುದನ್ನು ಕಾಣಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಮಾರ್ಡನ್ ಯುಗದಲ್ಲಿ ಯುವ ಪೀಳಿಗೆ ವಿದ್ಯಾರ್ಥಿಗಳು ಫುಲ್ ಅಪ್ಡೇಟ್ ಆಗಿ ಏನೇ ಆದ್ರೂ ,ಏನೇ ಡೌಟ್ ಇದ್ರೂ ಕೇಳೊದು ಗೂಗಲ್ ..ಇದೇ ಇವಾಗ ಮತ್ತೊಂದು ಟೆಕ್ ಗೀಳಿಗೆ ಕಾರಣವಾಗಿದೆ..
ನಿಮಾನ್ಸ್ ಸಂಸ್ಥೆ ಅಧ್ಯಯನದ ಪ್ರಕಾರ ಬೆಂಗಳೂರಿನ ಯುವಜನರು ಆನ್‌ಲೈನ್‌ನಲ್ಲಿ ಹೆಚ್ಚಾಗಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದಾರೆ. ಇದನ್ನು ‘ಸೈಬರ್ ಕಾಂಡ್ರಿಯಾಸಿಸ್’ ಎಂದು ಕರೆಯಲಾಗುತ್ತದೆ.ಈ ಅಧ್ಯಯನದಲ್ಲಿ ಬೆಂಗಳೂರಿನ 356 ಕಾಲೇಜು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಈ ಪೈಕಿ, 48.6% ವಿದ್ಯಾರ್ಥಿಗಳಲ್ಲಿ ಸೈಬರ್ ಕಾಂಡ್ರಿಯಾಸಿಸ್ ಕಾಣಿಸಿಕೊಂಡಿದೆ..
ಇದನ್ನೂ ಓದಿ: ಮಾಧ್ಯಮಗಳಲ್ಲಿ ಪ್ರಚಾರದ ಪ್ರಸಾರಕ್ಕೆ ಅನುಮತಿ ಕಡ್ಡಾಯ: ಉಲ್ಲಂಘನೆ ಆದ್ರೆ ಕಾನೂನು ಕ್ರಮ
ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು. ಸೈಬರ್ ಕಾಂಡ್ರಿಯಾಸಿಸ್ ಹರಡುವಿಕೆಯ ಕುರಿತು ಬೆಂಗಳೂರಿನಲ್ಲಿ ಇದು ಮೊದಲ ಅಧ್ಯಯನವಾಗಿದೆ. ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ ನಿರ್ಮಲಾ ರವ್ರ ತಂಡ ಅಧ್ಯಯನ ಮಾಡಿದೆ.ಅಧ್ಯಯನವು ಸ್ಮಾರ್ಟ್ ಫೋನ್ ಚಟ ಮತ್ತು ಭಾಗವಹಿಸುವವರಲ್ಲಿ ಆರೋಗ್ಯದ ಆತಂಕದ ಬಗ್ಗೆ ವಿವರಿಸಿದೆ.
ಇದನ್ನೂ ಓದಿ: ಅಮೂಲ್ ವಿರುದ್ಧ ಕಿಡಿ, ಕನ್ನಡಿಗರಿಂದ ಸೇವ್ ನಂದಿನಿ ಅಭಿಯಾನ
ಸೈಬರ್ ಕಾಂಡ್ರಿಯಾಸಿಸ್ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತೊಂದರೆ ಅನುಭವಿಸುವುದರ ಜೊತೆಗೆ, ವ್ಯಕ್ತಿಯು ಪೂರ್ವಗ್ರಹ ಪೀಡಿತರಾಗಬಹುದು ಹಾಗೂ ವೈದ್ಯರನ್ನು ಬದಲಾಯಿಸಬಹುದು ಅಥವಾ ವೈದ್ಯರೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಅವರು ಸ್ವಯಂ-ರೋಗನಿರ್ಣಯ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.