Cholesterol Symptoms and Precautions : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತಿದೆ ಎಂದರೆ ಹೃದ್ರೋಗಗಳಿಗೆ ಆಹ್ವಾನ ನೀಡಿದಂತೆ. ಹೃದ್ರೋಗದ ಸಮಸ್ಯೆಗಳನ್ನು ತಪ್ಪಿಸಬೇಕೆಂದರೆ  ಸಮಯಕ್ಕೆ ಸರಿಯಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದಲ್ಲಿ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.  ಮುಖ್ಯವಾಗಿ ನಮ್ಮ ದೇಹದ ಕೆಲವು ಅಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗೆ ದೇಹದ ವಿವಿಧ ಅಂಗಗಳಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿರುವುದು ಅಧಿಕ ಕೊಲೆಸ್ಟ್ರಾಲ್ ನ  ಸಂಕೇತವಾಗಿರಬಹುದು. 


COMMERCIAL BREAK
SCROLL TO CONTINUE READING

ದೇಹದಲ್ಲಿ ಹೆಚ್ಚಾಗುತ್ತಿರುವ ಕೊಲೆಸ್ಟ್ರಾಲ್ ಅನ್ನು ಹೇಗೆ ಗುರುತಿಸುವುದು : 
ಕೊಲೆಸ್ಟ್ರಾಲ್‌ನಿಂದಾಗಿ ದೇಹದ ಕೆಲವು ಭಾಗಗಳಲ್ಲಿ ನೋವು  ಕಾಣಿಸಿಕೊಳ್ಳುತ್ತದೆ. ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಈ ನೋವಿಗೆ ಕಾರಣವಾಗಿರುತ್ತದೆ. ಸ್ನಾಯುಗಳಲ್ಲಿ ಬಿಗಿತ ಮತ್ತು ತೀವ್ರವಾದ ನೋವಿಗೂ ಕೊಲೆಸ್ಟ್ರಾಲ್ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ತೊಡೆಯ ಕೆಳಭಾಗ, ಮೊಣಕಾಲು ಮತ್ತು ಕಾಲುಗಳಲ್ಲಿ ನೋವು ಕಂಡು ಬರುತ್ತದೆ. ಕಾಲುಗಳ ಸ್ನಾಯುಗಳು ಗಟ್ಟಿಯಾಗುವುದರಿಂದ, ನಡೆಯುವಾಗಲೂ ಸಮಸ್ಯೆ ಉಂಟಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿರುವ ಲಕ್ಷಣಗಳು ಕಂಡು ಬಂದರೆ ತಕ್ಷಣ ಅದನ್ನು ನಿಯಂತ್ರಿಸುವತ್ತ ಗಮನ ಹರಿಸಿ. 


ಇದನ್ನೂ ಓದಿ ನಿತ್ಯ ಬಳಸುವ ಈ ವಸ್ತುಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗುವುದು.! ಏರಿಸಿಬಿಡುತ್ತದೆ ರಕ್ತದೊತ್ತಡ


ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಿ : 
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನಾವು ಮಾಡಬೇಕಾದ ಮೊದಲ ಕೆಲಸ ಎಂದರೆ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು. ಆಲ್ಕೋಹಾಲ್ ಮತ್ತು ಧೂಮಪಾನದಿಂದ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವಿರುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಅಪಾಯವನ್ನು ತಪಿಸಬೇಕಾದರೆ, ಮದ್ಯಪಾನ ಧೂಮಪಾನದಿಂದ ದೂರವಿರಿ.  


ಸೇವಿಸುವ ಆಹಾರದತ್ತ ಗಮನ ಹರಿಸಿ : 
ಸರಿಯಾದ ಆಹಾರ ಸೇವಿಸದೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಕಷ್ಟ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬೇಕಾದರೆ ಒಮೆಗಾ 3 ಕೊಬ್ಬಿನಾಮ್ಲಗಳು, ಆಂಟಿ-ಆಕ್ಸಿಡೆಂಟ್ ಗಳು,  ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. 


ತೂಕ ನಿಯಂತ್ರಣ :
ಸ್ಥೂಲಕಾಯತೆಯಿಂದಾಗಿಯೂ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬೇಕಾದರೆ ಮೊದಲು ತೂಕವನ್ನು ನಿಯಂತ್ರಿಸುವುದು ಅವಶ್ಯಕ. ಇದಕ್ಕಾಗಿ ಕೊಬ್ಬಿನ ಅಂಶ ಅಧಿಕವಾಗಿರುವ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಹೆಚ್ಚು ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು  ಆಹಾರವಾಗಿ ಸೇವಿಸಿ. 


ಇದನ್ನೂ ಓದಿ : Drinking Water After Fruits: ಹಣ್ಣುಗಳನ್ನು ತಿಂದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ


ದೈಹಿಕ ಚಟುವಟಿಕೆ : 
ದೈಹಿಕ ಚಟುವಟಿಕೆಯು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪ್ರತಿದಿನ ವ್ಯಾಯಾಮ ಮಾಡಿ. ಯೋಗ ಮಾಡುವುದರಿಂದ ಹೃದಯಡ ಆರೋಗ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಲಘು ವ್ಯಾಯಾಮದಿಂದಲೂ ಕೊಲೆಸ್ಟ್ರಾಲ್ ಅನ್ನು  ನಿಯಂತ್ರಣ ಮಾಡಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.