ನವದೆಹಲಿ: ನವಜಾತ ಶಿಶುಗಳನ್ನು ಚುಂಬಿಸುವುದು ಸರಿಯಲ್ಲ. ತಾಯಂದಿರು ಮಾತ್ರವಲ್ಲ ಬೇರೆ ಯಾರೂ ಕೂಡ ಶಿಶುಗಳಿಗೆ ಚುಂಬಿಸುವುದು ಸರಿಯಲ್ಲ. ಶಿಶುಗಳ ಲಾಲನೆ-ಪಾಲನೆ ಮಾಡುವ ತಾಯಂದಿರು ಈ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು.


COMMERCIAL BREAK
SCROLL TO CONTINUE READING

ಶಿಶುಗಳನ್ನು ಚುಂಬಿಸಬಾರದು: ಶಿಶುಗಳು ತುಂಬಾ ಮುದ್ದಾಗಿರುತ್ತವೆ ಮತ್ತು ಬಹುತೇಕರೂ ಅವುಗಳ ಕಡೆಗೆ ಆಕರ್ಷಿತರಾಗಿರುತ್ತಾರೆ. ಸಣ್ಣ ಪಾದ, ಮುದ್ದಾದ ನಗು, ದುಂಡುಮುಖದ ಕೆನ್ನ ಹೀಗೆ ಅವುಗಳನ್ನು ನೋಡಿದ ಯಾರೇ ಆದರೂ ಮಗುವನ್ನು ಮುದ್ದಾಡಬೇಕೆಂದು ಅನಿಸುತ್ತದೆ. ಆದರೆ ಗಮನವಿರಲಿ, ಅವುಗಳನ್ನು ನಿಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಅಥವಾ ಕೆನ್ನೆಗೆ ಚುಂಬಿಸುವುದು ಅಪಾಯಕಾರಿ. ಚುಂಬನವು ವಾತ್ಸಲ್ಯವನ್ನು ತೋರಿಸುವ ಒಂದು ಮಾರ್ಗವಾಗಿದೆ. ಇದರಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ನೀವು ನವಜಾತ ಶಿಶುವಿನ ಪೋಷಕರಾಗಿದ್ದರೆ, ಈಗ ನಾವು ನೀಡವು ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮ್ಮ ಮಗುವನ್ನು ಚುಂಬಿಸಬಾರದು ಅಂತಾ ಎಲ್ಲರಿಗೂ ಹೇಳುವುದು ಸರಿಯಲ್ಲದಂತೆ ಕಂಡರೂ ನೀವು ಅದನ್ನು ನಂಬಲೇಬೇಕು. ಬೇರೆಯವರು ನಿಮ್ಮ ಮಗುವಿಗೆ ಚುಂಬಿಸುವುದು ಸರಿಯಲ್ಲ. ನಿಮ್ಮ ಮಗುವಿನ ಸುರಕ್ಷತೆಗಾಗಿ ನೀವು ಮತ್ತು ನಿಮ್ಮ ಸಂಗಾತಿ ಸಹ ಈ ರೀತಿ ಮಾಡಬಾರದು.  


ಇದನ್ನೂ ಓದಿ: Blood Sugar Level Control: ಬೆಳಗಿನ ಉಪಹಾರದ ಜೊತೆಗೆ ಈ ಚಟ್ನಿ ಸೇವಿಸಿದರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್


ನವಜಾತ ಶಿಶುಗಳನ್ನು ಏಕೆ ಚುಂಬಿಸಬಾರದು?: ನವಜಾತ ಶಿಶುಗಳು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಮೊದಲ ಕೆಲವು ವಾರಗಳಲ್ಲಿ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಿರ್ಣಾಯಕ. ಯಾವುದೇ ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ತಗುಲುವ ಸಾಧ್ಯತೆ ಇರುವುದರಿಂದ ಅದರ ಜೀವಕ್ಕೆ ಅಪಾಯವಿರುತ್ತದೆ. ನಮ್ಮ ಕೈಗಳು ಸಾವಿರಾರು ರೋಗಕಾರಕಗಳಿಗೆ ನೆಲೆಯಾಗಿರುವುದರಿಂದ ಮಕ್ಕಳನ್ನು ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಅದರಂತೆ ನಮ್ಮ ಮುಖದಲ್ಲಿ ಸಹ ಲಕ್ಷಾಂತರ ಸೂಕ್ಷ್ಮ ಜೀವಿಗಳಿರುತ್ತವೆ. ನಾವು ಚುಂಬಿಸಿದಾಗ ಈ ವೈರಸ್‌ಗಳು ಚಿಕ್ಕಮಗುವಿನ ಚರ್ಮಕ್ಕೆ ವರ್ಗಾವಣೆಯಾಗುತ್ತವೆ.


ಶಿಶುಗಳ ಜೀವಕ್ಕೆ ಅಪಾಯವನ್ನುಂಟು ಮಾಡುವ ವೈರಸ್!: ಶಿಶುಗಳು ವಿಶೇಷವಾಗಿ HSV -1ಗೆ ಗುರಿಯಾಗುತ್ತವೆ. ಇದನ್ನು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಎಂದು ಕರೆಯಲಾಗುತ್ತದೆ. ಈ ವೈರಸ್ ವಯಸ್ಕರಲ್ಲಿ ಬಾಯಿ ಮತ್ತು ತುಟಿಗಳ ಸುತ್ತ ಹುಣ್ಣುಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ವಯಸ್ಕರಲ್ಲಿ ನಿರ್ದಿಷ್ಟ ರೋಗಲಕ್ಷಣಗಳನ್ನು ಸಹ ತೋರಿಸುವುದಿಲ್ಲ. ಆದರೆ ಶಿಶುಗಳಿಗೆ ಇದು ಮಾರಕವಾಗಬಹುದು. ಕೆಲವು ಜನರು ತಮ್ಮ ತುಟಿಗಳ ಸುತ್ತಲೂ ಶೀತದ ಹುಣ್ಣುಗಳನ್ನು ಹೊಂದಿರುತ್ತಾರೆ. ಅವರು ಚುಂಬಿಸಿದಾಗ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. 40ರ ಹರೆಯದ ಹೊತ್ತಿಗೆ ಶೇ.90ಕ್ಕಿಂತಲೂ ಹೆಚ್ಚು ಜನರು ಈ ನಿರ್ದಿಷ್ಟ ವೈರಸ್‌ಗೆ ತುತ್ತಾಗುತ್ತಾರೆ. ಇದು ನವಜಾತ ಶಿಶುಗಳಿಗೆ ಹರಡಬಹುದು. ವೈರಸ್ ಸೋಂಕಿತ ವ್ಯಕ್ತಿಯು ಮಗುವಿನ ಕೈಗಳನ್ನು, ಅದರ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೂ ಸಹ ವೈರಸ್ ಹಾನಿಯುಂಟು ಮಾಡುತ್ತದೆ. ಇದು ಮುಂದೆ ಸೋಂಕಿಗೆ ಕಾರಣವಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ವೈರಸ್ ವೇಗವಾಗಿ ಮಗುವಿಗೆ ಹರಡುತ್ತದೆ. ಇದು ಮೆದುಳು ಮತ್ತು ಬೆನ್ನುಹುರಿಯಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ.


ಇದನ್ನೂ ಓದಿ: Peanut Jaggery Health Tips: ಶೇಂಗಾ ಬೆಲ್ಲ ತಿನ್ನುವುದರಿಂದ ದೇಹಕ್ಕಿದೆ ಇಷ್ಟೊಂದು ಅದ್ಭುತ ಲಾಭ


ನೀವು ಏನು ಮಾಡಬೇಕು..?: ಮೊದಲ ಕೆಲವು ತಿಂಗಳುಗಳು ಶಿಶುಗಳಿಗೆ ಬಹಳ ಸೂಕ್ಷ್ಮವಾಗಿರುತ್ತದೆ. ಈ ವೇಳೆ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಯಾರಾದರೂ ಸಹ ಮಗುವಿನಿಂದ ದೂರವಿರಬೇಕು. ಯಾರಾದರೂ ಮಗು ಸ್ಪರ್ಶಿಸಲು ಅಥವಾ ಅವರ ತೋಳುಗಳಲ್ಲಿ ಹಿಡಿದಿಡಲು ಬಯಸಿದರೆ ಅವರಿಗೆ ನೀವು ಕೆಲ ವಿಷಯಗಳನ್ನು ಹೇಳಲೇಬೇಕು. ಅವರು ಮೊದಲು ತಮ್ಮ ಕೈಗಳನ್ನು ಸರಿಯಾಗಿ ತೊಳೆಯಬೇಕು. ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸುವುದು ಪರಿಣಾಮಕಾರಿ ಮಾರ್ಗ. ಆರಂಭಿಕ ತಿಂಗಳುಗಳಲ್ಲಿ ನಿಮ್ಮ ಮಗುವನ್ನು ಜನನೀಬಿಡ ಸ್ಥಳಗಳಿಗೆ ಕರೆದೊಯ್ಯುವುದನ್ನು ತಪ್ಪಿಸಬೇಕು. ಅಲ್ಲದೆ ನಿಮ್ಮ ಮನೆಯಲ್ಲಿ ಹೆಚ್ಚಿನ ಅತಿಥಿಗಳು ಮಗುವನ್ನು ಮುಟ್ಟಲು ಅಥವಾ ಚುಂಬಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.