ಒಂದೇ ತಿಂಗಳಲ್ಲಿ 5 ಕಿಲೋ ತೂಕ ಕಳೆದುಕೊಳ್ಳುವುದು ಗ್ಯಾರಂಟಿ ! ಈ ಸಿಂಪಲ್ ಟಿಪ್ಸ್ ಅನುಸರಿಸಿದರೆ ಸಾಕು

Weight Lose Tips : ಸಮರ್ಥನೀಯ ಮತ್ತು ಆರೋಗ್ಯಕರ ತೂಕ ನಷ್ಟಕ್ಕೆ ಕೆಲವು ಸಿಂಪಲ್ ಟಿಪ್ಸ್ ಅನುಸರಿಸಬೇಕಾಗುತ್ತದೆ. 

Weight Lose Tips : ಸರಿಯಾದ ಶಿಸ್ತು ಕ್ರಮ ಅನುಸರಿಸುತ್ತಾ ಬಂದರೆ ಮಾತ್ರ ಉತ್ತಮ ಫಿಟ್ನೆಸ್ ಅನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಒಂದು ತಿಂಗಳಲ್ಲಿ 4-5 ಕೆಜಿ ತೂಕವನ್ನು ಕಳೆದುಕೊಳ್ಳಬೇಕು ಎಂದು ನೀವು ಮನಸ್ಸು ಮಾಡಿದ್ದರೆ ಅದನ್ನು ಸಾಧಿಸುವುದು ಕೂಡಾ ಬಹಳ ಸುಲಭ. ಆದರೆ ನೆನಪಿಡಿ, ತೂಕ ಕಳೆದುಕೊಳ್ಳುವ ಭರದಲ್ಲಿ ಆಹಾರ ಸೇವಿಸದೇ ಇರುವುದು ಆರೋಗ್ಯವನ್ನು ಹಾಳು ಮಾಡಿ ಬಿಡುತ್ತದೆ. ಸಮರ್ಥನೀಯ ಮತ್ತು ಆರೋಗ್ಯಕರ ತೂಕ ನಷ್ಟಕ್ಕೆ ಕೆಲವು ಸಿಂಪಲ್ ಟಿಪ್ಸ್ ಅನುಸರಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕ್ಯಾಲೋರಿ ಭರಿತ ಆಹಾರಗಳನ್ನು ಕಡಿಮೆ ಮಾಡಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಗಳು ಮತ್ತು ಧಾನ್ಯಗಳ ಸೇವನೆಯನ್ನು ಹೆಚ್ಚಿಸಬೇಕು. ಈ ಆಹರ ಪದಾರ್ಥಗಳಲ್ಲಿ ಕಡಿಮೆ ಕ್ಯಾಲೋರಿ ಇರುವುದು ಮಾತ್ರವಲ್ಲದೆ, ಇದು ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.  

2 /6

ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಆಹಾರದಲ್ಲಿ ಏನು ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಅಲ್ಲದೆ ಯಾವ ಆಹಾರವನ್ನು ಎಷ್ಟು ತಿನ್ನುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಟಿವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಯಾವುದೇ ಕಾರಣಕ್ಕೂ ಆಹಾರ ಸೇವಿಸಬೇಡಿ.  

3 /6

ನಿಮ್ಮ ಯೋಜನೆಯಲ್ಲಿ  ಏರೋಬಿಕ್ ವ್ಯಾಯಾಮವನ್ನು ಸೇರಿಸಿ. ವಾರದಲ್ಲಿ ಎರಡು ದಿನ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮ (ಬ್ರಿಸ್ಕ್ ವಾಕ್ ಮತ್ತು ಸೈಕ್ಲಿಂಗ್) ಮಾಡಿ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. 

4 /6

ದಿನವಿಡೀ ನೀರು ಅಥವಾ ಗಿಡಮೂಲಿಕೆ ಚಹಾವನ್ನು ಕುಡಿಯಿರಿ. ಅನೇಕ ಬಾರಿ ಬಾಯಾರಿಕೆಯಾದಾಗಲೂ ನಾವು ಏನನ್ನಾದರೂ ತಿನ್ನಲು ಶುರು ಮಾಡುತ್ತೇವೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ.  

5 /6

ಪ್ಯಾಕೇಜ್ ಮಾಡಿದ ಆಹಾರ, ಸಿಹಿ ತಿಂಡಿಗಳು ಮತ್ತು ಸಕ್ಕರೆ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಿ. ಇವುಗಳಲ್ಲಿ ಕಡಿಮೆ ಪೋಷಣೆ ಮತ್ತು ಹೆಚ್ಚಿನ ಕ್ಯಾಲೋರಿಗಳಿರುತ್ತವೆ.

6 /6

ಒಳ್ಳೆಯ ನಿದ್ರೆ ಮಾಡಿ.ನಿದ್ರೆಯ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಅನಾರೋಗ್ಯಕರ ಆಹಾರವನ್ನು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿಸಿ ಮತ್ತು ಪ್ರತಿ ರಾತ್ರಿ 7-9 ಗಂಟೆಗಳ ಕಾಲ ಮಲಗಲು ಪ್ರಯತ್ನಿಸಿ.