Health Tipes: ʼಸಿಗಡಿʼ ಸಮುದ್ರದಲ್ಲಿ ಸಿಗುವ ಮೀನಿನ ಜಾತಿಯ ಉತ್ತಮ ಆಹಾರವಾಗಿದೆ. ಆದರೆ ಇದು ಮೀನನಲ್ಲ. ಹಳ್ಳಗಳಲ್ಲಿ ಇದು ಸಿಗುತ್ತದೆ.  ಕರಾವಳಿ, ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಸೇವಿಸುವ ಆಹಾರವಾಗಿದೆ. ಮಂಗಳೂರು ಕಡೆಗಳಲ್ಲಿ ಗಂಜಿ ಜೊತೆಯಲ್ಲಿ ಸಿಗಡಿ ಮೀನು ಪಲ್ಯ ಸಾಮಾನ್ಯ. 
 
ಸಿಗಡಿ ಮೀನು ಪಲ್ಯ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಉಪಯುಕ್ತ ಆಹಾರವಾಗಿದೆ. ಸಿಗಡಿಯಲ್ಲಿ ಅತಿ ಕಡಿಮೆ ಕ್ಯಾಲೋರಿ,  ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ 3 ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?


ಸಿಗಡಿ ಪ್ರಯೋಜನಗಳು


ತೂಕ ಇಳಿಕೆಗೆ ಸಹಕಾರಿ
ಸಿಗಡಿಯಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ದೇಹದ ಕೊಬ್ಬು ಕರಗಿಸಿ ತೂಕ ಇಳಿಕೆ ಮಾಡುವಲ್ಲಿ ಸಹಕರಿಸುತ್ತದೆ. 


ಕ್ಯಾನ್ಸರ್ ನಿಯಂತ್ರಣ
ಈ ಮೀನಿನಲ್ಲಿ ಸೆಲೆನಿಯಮ್‌ ಅಂಶ ಹೇರಳವಾಗಿರುವುದರಿಂದ  ದೇಹದಲ್ಲಿ ಆವರಿಸುವ ಕ್ಯಾನ್ಸರ್ ಕೋಶಗಳನ್ನು ತಡೆದು ಮಾರಣತಿಂಕ ರೋಗದ ವಿರುದ್ದ ಹೋರಾಡುತ್ತದೆ. ಪ್ರಪಂಚದಾದ್ಯಂತ ಹೆಚ್ಚಿತ್ತಿರುವ ಕ್ಯಾನ್ಸರ್ ನಿಯಂತ್ರಣಕ್ಕೆ ಇದು ಉತ್ತಮ ಆಹಾರವಾಗಿದೆ. 


ಇದನ್ನೂ ಓದಿ:  Remedies For Headache: ತಲೆನೋವಿಗೆ ಕಾರಣಗಳು; ಅದರ ಪರಿಹಾರಕ್ಕಾಗಿ ಮನೆಮದ್ದುಗಳು !


ಮೂಳೆಗಳ ಆರೋಗ್ಯ  ಸಹಕಾರಿ
ಸಿಗಡಿಯು ಕ್ಯಾಲ್ಸಿಯಂನಿಂದ ಕೂಡಿದೆ. ಇದರ ಸೇವನೆಯಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡಿ ಮೂಳೆ, ಸ್ನಾಯುಗಳನ್ನು ಬಲ ಪಡಿಸುತ್ತದೆ. 


ಮಿದುಳಿನ ವೃದ್ಧಿ 
https://zeenews.india.com/kannada/health/turmeric-is-the-cure-for-all-diseases-138759ಮೀನಿನ ಸೇವನೆಯಿಂದ ಮಿದುಳಿನ ವೃದ್ಧಿ ಹೇಗೆ ಸಹಕರಿಸುತ್ತದೋ ಹಾಗೆ ಸಿಗಡಿ ಸಹ ಉತ್ತಮ ಆಹಾರವಾಗಿದೆ.