Pumpkin Seeds Health Benefits: ಕುಂಬಳಕಾಯಿಯನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ, ಉತ್ತರ ಭಾರತದಲ್ಲಿ ಅದರ ತರಕಾರಿ, ಭುಜಿಯಾ ಮತ್ತು ಹಲವಾ ತಯಾರಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಸಾಂಬಾರ್ ಅನ್ನು ತಯಾರಿಸಲಾಗುತ್ತದೆ. ಕುಂಬಳಕಾಯಿಯನ್ನುಬಳಸುವಾಗ ಅದರ ಬೀಜಗಳನ್ನು ನಾವು ಬಿಸಾಡುತ್ತೇವೆ. ಅದು ತಪ್ಪು, ಏಕೆಂದರೆ ಈ ಬೀಜಗಳು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಬೀಜಗಳಲ್ಲಿ ಅನೇಕ ರೀತಿಯ ಸಾವಯವ ರಾಸಾಯನಿಕಗಳು ಮತ್ತು ಪೋಷಕಾಂಶಗಳು ಕಂಡುಬರುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Butter Milk : 3 ವಾರಗಳಲ್ಲಿ ತೂಕವನ್ನು ಕಡಿಮೆಗೊಳಿಸುತ್ತೆ ಈ ಪಾನೀಯ


ಕುಂಬಳಕಾಯಿ ಬೀಜಗಳ ಪ್ರಯೋಜನಗಳು : 


ಕುಂಬಳಕಾಯಿಯಂತೆ, ಅದರ ಬೀಜಗಳಲ್ಲಿಯೂ ಪೋಷಕಾಂಶಗಳು ಹೇರಳವಾಗಿವೆ. ಫೈಬರ್, ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ವಿಟಮಿನ್ ಸಿ, ವಿಟಮಿನ್ ಕೆ, ಫಾಸ್ಫರಸ್, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ಇವುಗಳಲ್ಲಿ ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಗಳನ್ನು ನೀಡುತ್ತದೆ.  


1. ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ 


ಇಡೀ ಜಗತ್ತಿನಲ್ಲಿ ಹೃದ್ರೋಗಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯಕರ ವಸ್ತುಗಳನ್ನು ಸೇವಿಸುವುದು ಮುಖ್ಯವಾಗಿದೆ. ಹೃದಯಾಘಾತವನ್ನು ತಪ್ಪಿಸಲು, ನೀವು ಪ್ರತಿದಿನ ಸುಮಾರು 2 ಗ್ರಾಂ ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ಇದರಲ್ಲಿರುವ ಪೊಟಾಷಿಯಂ, ಫೈಬರ್ ಮತ್ತು ವಿಟಮಿನ್ ಸಿ ನಮ್ಮ ಹೃದಯವನ್ನು ಅಪಾಯದಿಂದ ರಕ್ಷಿಸುತ್ತದೆ.


ಇದನ್ನೂ ಓದಿ : ವೇಗವಾಗಿ ದೇಹ ತೂಕ ಕಳೆದುಕೊಳ್ಳಲು 20 ನಿಮಿಷಗಳ ಈ ಸೂಪರ್ ವರ್ಕೌಟ್ ಪ್ರಯತ್ನಿಸಿ


2. ಕೀಲು ನೋವು ನಿವಾರಿಸಲು ಸಹಾಯಕ


ವಯಸ್ಸಾದಂತೆ, ಕೀಲು ನೋವು ತುಂಬಾ ಕಾಡುತ್ತದೆ. ಸಂಧಿವಾತದಲ್ಲಿ ಪರಿಹಾರವನ್ನು ಪಡೆಯಲು, ನೀವು ಕುಂಬಳಕಾಯಿ ಬೀಜಗಳನ್ನು ಸೇವಿಸಬಹುದು, ಏಕೆಂದರೆ ಇದು ನೈಸರ್ಗಿಕ ಗಿಡಮೂಲಿಕೆಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.


3. ಆಯಾಸದಿಂದ ಪರಿಹಾರ


ಇತ್ತೀಚಿನ ದಿನಗಳಲ್ಲಿ, ಬಿಡುವಿಲ್ಲದ ಜೀವನಶೈಲಿ ಮತ್ತು ನಿದ್ರೆಯ ಕೊರತೆಯಿಂದಾಗಿ, ಜನರು ದಿನವಿಡೀ ಆಯಾಸವನ್ನು ಎದುರಿಸುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು, ಏಕೆಂದರೆ ಅದು ರಕ್ತ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಂತರ ನೀವು ಹೊಸ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.