Raghav Chadha Eye Disease : ರಾಜ್ಯಸಭೆಯ ಕಿರಿಯ ಸಂಸದ, ಎಎಪಿ ಪಕ್ಷದ ನಾಯಕ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಪತಿ ರಾಘವ್ ಚಡ್ಡಾ   ಗಂಭೀರ ಕಣ್ಣಿನ ಕಾಯಿಲೆ, ರೆಟಿನಾ ಡಿಟ್ಯಾಚ್‌ಮೆಂಟ್‌ನಿಂದ ಬಳಲುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅದರ ಚಿಕಿತ್ಸೆಗಾಗಿ ಅವರು ವಿಟ್ರೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದಕ್ಕಾಗಿ ಅವರು ಶೀಘ್ರದಲ್ಲೇ ಬ್ರಿಟನ್‌ಗೆ ತೆರಳಲಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣೆಗೂ ಮುನ್ನ ರಾಘವ್ ವಿದೇಶಕ್ಕೆ ಹೋಗುತ್ತಿರುವ ಸುದ್ದಿ ಕೇಳಿ ಬಿಜೆಪಿ ರಾಜಕಾರಣಿಗಳು ವ್ಯಂಗ್ಯವಾಡುತ್ತಿದ್ದಾರೆ. ಆದರೆ, ರಾಘವ್ ಚಡ್ಡಾ ಬಳಲುತ್ತಿರುವ ಕಾಯಿಲೆಗೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಇಲ್ಲವಾದರೆ ಸಂಪೂರ್ಣವಾಗಿ ದೃಷ್ಠಿ ಹೀನವಾಗುವ ಭಯ ಕಾಡುತ್ತದೆ. 


ಇದನ್ನೂ ಓದಿ : ಈ ಪುಡಿಯನ್ನು ಈ ರೀತಿ ಸೇವಿಸಿದರೆ ರಾತ್ರಿ ಬೆಳಗಾಗುವುದರೊಳಗೆ ದೇಹದಿಂದ ಹೊರ ಬೀಳುತ್ತದೆ ಕೆಟ್ಟ ಕೊಲೆಸ್ಟ್ರಾಲ್


ಏನಿದು ರೆಟಿನಾ ಡಿಟಾಚ್ಮೆಂಟ್ ? : 
ನ್ಯಾಷನಲ್ ಐ ಇನ್‌ಸ್ಟಿಟ್ಯೂಟ್ ಪ್ರಕಾರ, ರೆಟಿನಾ ಡಿಟಾಚ್ಮೆಂಟ್ ಕಣ್ಣಿನ ಸಮಸ್ಯೆಯಾಗಿದ್ದು, ಇದರಲ್ಲಿ ರೆಟಿನಾ ತನ್ನ ಸ್ಥಳದಿಂದ ಹೊರಹೋಗುತ್ತದೆ. ಇದರಲ್ಲಿ, ರೆಟಿನಾದ ಜೀವಕೋಶಗಳು ರಕ್ತ ಅಪಧಮನಿಗಳಿಂದ ಬೇರ್ಪಡುತ್ತವೆ.   ರೆಟಿನಾ ಡಿಟಾಚ್ಮೆಂಟ್  ನಲ್ಲಿ 3 ವಿಧಗಳಿವೆ: ರೆಗ್ಮಾಟೊಜೆನಸ್,ಟ್ರಾಕ್ಷನಲ್ ಮತ್ತು ಏಕ್ಸುಡೆಟಿವ್. ಪ್ರತಿಯೊಂದು ವಿಧವು ವಿಭಿನ್ನ ಸಮಸ್ಯೆಗಳಿಂದ ಉಂಟಾಗುತ್ತದೆ.  ಅದು ರೆಟಿನಾವನ್ನು ನಿಮ್ಮ ಕಣ್ಣಿನ ಹಿಂಭಾಗದಿಂದ ದೂರ ಸರಿಯುವಂತೆ ಮಾಡುತ್ತದೆ.


ರೆಟಿನಲ್ ಡಿಟ್ಯಾಚ್ಮೆಂಟ್ ಲಕ್ಷಣಗಳು : 
ಸಾಮಾನ್ಯವಾಗಿ, ಮೈನರ್ ರೆಟಿನಾ ಡಿಟಾಚ್ಮೆಂಟ್ ಸಂದರ್ಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಆದರೆ, ರೆಟಿನಾವು ತನ್ನ ಸ್ಥಳದಿಂದ ಹೆಚ್ಚಿನ ಕೋನದಲ್ಲಿ ದೂರ ಹೋದರೆ, ಅದು ದೃಷ್ಟಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ಕಣ್ಣುಗಳಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.


ಇದನ್ನೂ ಓದಿ : ಈ ಪುಟ್ಟ ಕಾಯಿಯನ್ನು ಈ ರೀತಿ ಸೇವಿಸಿದರೆ ತಕ್ಷಣವೇ ಇಳಿದು ಬಿಡುವುದು ಬ್ಲಡ್ ಶುಗರ್! ತಿನ್ನುವ ಸಮಯ ಇದಾಗಿರಬೇಕು


ದೃಷ್ಟಿ  ಹೀನವಾಗಬಹುದು : 
ರೆಟಿನಾ  ಡಿಟ್ಯಾಚ್ಮೆಂಟ್  ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸುವುದು ಬಹಳ ಮುಖ್ಯ. ಏಕೆಂದರೆ ಇದು ಒಂದು ರೀತಿಯ ತುರ್ತು ಪರಿಸ್ಥಿತಿ. ಸಕಾಲಿಕವಾಗಿ ಚಿಕಿತ್ಸೆ ಸಿಗದೇ ಹೋದರೆ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ಇದಕ್ಕಾಗಿ ವಿಟ್ರೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವಾಗಿರುತ್ತದೆ. 


ವಿಟ್ರೆಕ್ಟಮಿ ಶಸ್ತ್ರಚಿಕಿತ್ಸೆ ಎಂದರೇನು? :
ಜಾನ್ಸ್ ಹಾಪ್ಕಿನ್ಸ್ ಪ್ರಕಾರ, ವಿಟ್ರೆಕ್ಟಮಿ ಎನ್ನುವುದು ರೆಟಿನಾ ಮತ್ತು ವಿಟ್ರೆಸ್‌ಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಕಣ್ಣಿನ ಶಸ್ತ್ರಚಿಕಿತ್ಸೆಯಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ವಿಟ್ರಿಯಸ್ ಅನ್ನು ತೆಗೆದುಹಾಕಿ ಇದಕ್ಕೆ ಬೇರೆಯೇ ಪರಿಹಾರ ನೀಡಲಾಗುತ್ತದೆ. ವಿಟ್ರಿಯಸ್ ಕಣ್ಣಿನ ಮಧ್ಯಭಾಗವನ್ನು ತುಂಬುವ ಜೆಲ್ ತರಹದ ವಸ್ತುವಾಗಿದೆ.


ಇದನ್ನೂ ಓದಿ : ಮಧುಮೇಹಿಗಳಿಗೆ ಅಮೃತ ಈ ರಸ.. ನಿತ್ಯ ಈ ಹೂವಿನ ಗಿಡದ ಎಲೆಗಳ ರಸ ಕುಡಿದರೆ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತೆ!


ಈ ಕಣ್ಣಿನ ಸಮಸ್ಯೆ ಏಕೆ ಬರುತ್ತದೆ?:
ರೆಟಿನಾದ  ಡಿಟ್ಯಾಚ್ಮೆಂಟ್ ಗೆ ಹಲವು ಕಾರಣಗಳಿವೆ.  ವಯಸ್ಸು ಮತ್ತು ಕಣ್ಣಿನ ಗಾಯ ಇದರ ಹಿಂದಿನ ಸಾಮಾನ್ಯ ಕಾರಣ. ಯಾರಿಗೆ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ಇದು ಅನುವಂಶಿಕ ಅಂಶಗಳು ಮತ್ತು ಮಧುಮೇಹದಂತಹ ಕಾಯಿಲೆಗಳಿಂದಾಗಿಯೂ ಎದುರಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.