ಬೆಂಗಳೂರು : ನಮ್ಮಲ್ಲಿ ಹೆಚ್ಚಿನವರು ಶೀತ ಹವಾಮಾನವನ್ನು ಇಷ್ಟಪಡುತ್ತಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಚಳಿಗಾಲ ಒಳ್ಳೆಯದಲ್ಲ. ಈ ಋತುವಿನಲ್ಲಿ  ಅನೇಕ ರೀತಿಯ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಅಸ್ತಮಾ, ಬ್ರಾಂಕೈಟಿಸ್, ಕೀಲು ನೋವು, ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿ ಸಮಸ್ಯೆಗಳು ಹೆಚ್ಚಾಗುತ್ತವೆ. ಚಳಿಗಾಲದಲ್ಲಿ ಅಧಿಕವಾಗಿ ಕಾಡುವ ಸಮಸ್ಯೆಗಳಲ್ಲಿ  ಸೈನಸ್ ಕೂಡಾ ಒಂದು. ಸೈನಸ್ ಸೋಂಕಿನಲ್ಲಿ, ಸೈನಸ್ ಮೆಂಬರೇನ್ ಊದಿಕೊಳ್ಳುತ್ತದೆ. ಇದರಿಂದಾಗಿ ಗಾಳಿಯ ಬದಲಿಗೆ ಕೀವು ಮತ್ತು ಕಫವು ಅದರಲ್ಲಿ ಸಂಗ್ರಹಗೊಳ್ಳುತ್ತದೆ.ಈ ಕಾರಣದಿಂದಾಗಿ, ನಮ್ಮ ಸೈನಸ್ ಗಳು  ಬ್ಲಾಕ್ ಆಗಿ ಮುಖ ಮತ್ತು ತಲೆಯಲ್ಲಿ ತೀವ್ರವಾದ ನೋವು ಕಾಣಿಸಲು ಆರಂಭಿಸುತ್ತದೆ. 


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ಅನೇಕ ಜನರು ಸೈನಸ್ ಸಮಸ್ಯೆಯಿಂದ ಬಳಲುತ್ತಾರೆ. ತಾಪಮಾನದಲ್ಲಿನ ಕುಸಿತವು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಇತರ ಅಂಗಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ   ರಕ್ತದೊತ್ತಡ ಹೆಚ್ಚುತ್ತದೆ. ಶುಷ್ಕ ವಾತಾವರಣವು ಸೈನಸ್ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. 


ಇದನ್ನೂ ಓದಿ : ಏಲಕ್ಕಿಯಿಂದ ರಕ್ತದೊತ್ತಡವನ್ನು ಹೀಗೆ ನಿಯಂತ್ರಿಸಿ!


ಚಳಿಗಾಲದಲ್ಲಿ ಸೈನಸ್ ಹೆಚ್ಚಾಗಿ ಬಾಧಿಸಲು ಕಾರಣ ? : 
ಒಣ ಗಾಳಿ:
ಮೂಗಿನ ಸಮಸ್ಯೆಗಳು ಹೆಚ್ಚಾಗುವಂತೆ ಮಾಡುವ ಮುಖ್ಯ ಕಾರಣಗಳಲ್ಲಿ ಇದು ಒಂದು. ಚಳಿಗಾಲದಲ್ಲಿ ಶೀತ ಮತ್ತು ಶುಷ್ಕ ಗಾಳಿಯು ಮೂಗಿನ ಒಳಗೆ ಕೂಡಾ ಡ್ರೈನೆಸ್ ಉಂಟು ಮಾಡುತ್ತದೆ. ಇದು ಸೈನಸ್ ಸಮಸ್ಯೆಗಳಿಗೆ ಕಾರಣವಾಗುತ್ತದೆ.


ಇಂಡೋರ್ ಅಲರ್ಜಿಗಳು: ಚಳಿಗಾಲದಲ್ಲಿ ಹೆಚ್ಚಿನ ಸಮಯವನ್ನು  ಮನೆಯ ಒಳಗೆಯೇ ಕಳೆಯುವುದರಿಂದ ಇಂಡೋರ್ ಅಲರ್ಜಿ‌ಗಳಾದ ಧೂಳಿನ ಹುಳಗಳು, ಸಾಕುಪ್ರಾಣಿಗಳಿಂದ ಉಂಟಾಗುವ ಅಲರ್ಜಿಯ ಅಪಾಯಕ್ಕೆ ತುತ್ತಾಗಬಹುದು.  ಇದು ಸೈನಸ್ ರೋಗಲಕ್ಷಣಗಳನ್ನು ಹೆಚ್ಚಿಸುತ್ತದೆ. 


ವೈರಲ್ ಸೋಂಕು: ಚಳಿಗಾಲದಲ್ಲಿ ಅನೇಕ ರೀತಿಯ ಸೋಂಕುಗಳು ಕಂಡು ಬರುತ್ತವೆ. ಈ ಋತುವಿನಲ್ಲಿ ಶೀತ ಮತ್ತು ಜ್ವರದಂತಹ ವೈರಲ್ ಸೋಂಕುಗಲ್ಕು ಹೆಚ್ಚಾಗಿ ಹರಡುತ್ತವೆ. ಈ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು, ನಿಯಮಿತವಾಗಿ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುವ ಮೂಲಕ ಸರಿಯಾದ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ ಮಾಡದಂತೆ ಎಚ್ಚರ ವಹಿಸಬೇಕು. 


ಇದನ್ನೂ ಓದಿ : ಈ ಮೂರು ಕಾರಣದಿಂದಾಗಿಯೇ ಮುಂಜಾನೆ ಬ್ಲಡ್ ಶುಗರ್ ಹೆಚ್ಚಾಗುತ್ತದೆ !


ದುರ್ಬಲ ರೋಗನಿರೋಧಕ ವ್ಯವಸ್ಥೆ: ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರೆ ನಿಮ್ಮಲ್ಲಿ ಸೈನಸ್ ಸೋಂಕು ಹೆಚ್ಚಾಗುವಂತೆ ಮಾಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ. ಇದಕ್ಕಾಗಿ ಹಣ್ಣುಗಳು, ತರಕಾರಿಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಒತ್ತಡದ ಮಟ್ಟವನ್ನು ನಿರ್ವಹಿಸುವುದು ಮತ್ತು ಸಾಕಷ್ಟು ನಿದ್ರೆ  ಮಾಡುವುದು ಕೂಡ ಅಗತ್ಯ. 


ಸೈನಸ್ ಸಮಸ್ಯೆಗೆ ಪರಿಹಾರ ಏನು ? : 
ಸ್ಟೀಮ್ : ಸ್ಟೀಮ್ ತೆಗೆದುಕೊಳ್ಳುವುದರಿಂದ ಮೂಗಿನ ಒಅಳಗಿನ ಶುಷ್ಕ ಸ್ಥಿತಿಯನ್ನು ಹೋಗಲಾಡಿಸಿ ಬ್ಲಾಕ್ ಆಗಿರುವುದನ್ನು ತೆರವು ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಶವರ್ ತೆಗೆದುಕೊಳ್ಳಬಹುದು, ಅಥವಾ ಬಿಸಿ ನೀರನ್ನು ಬೌಲ್ ನಲ್ಲಿ ಹಾಕಿ ನಿಮ್ಮ ತಲೆಯನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಮೂಲಕ ಸ್ಟೀಮ್ ತೆಗೆದುಕೊಳ್ಳಬಹುದು.ಹೀಗೆ ಸ್ಟೀಮ್ ತೆಗೆದುಕೊಳ್ಳುವ ನೀರಿಗೆ ನೀಲಗಿರಿ ಅಥವಾ ಪುದಿನಾ ಎಣ್ಣೆ ಸೇರಿಸಿದರೆ ಪರಿಹಾರ ಚೆನ್ನಾಗಿರುತ್ತದೆ.  


ಶುಚಿತ್ವ: ನಿಮ್ಮ ವಾಸದ ಸ್ಥಳ, ಕ್ಗಳಿಗೆ ಬಳಸುವ ಕಂಬಳಿ, ಸುತ್ತಮುತ್ತಲಿನ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ನಿಉಯಮಿತವಾಗಿ ಡಸ್ಟಿಂಗ್ ಮಾಡುತ್ತಿದ್ದು, ಧೂಳು ಕುಲಿತುಕೊಲ್ಲದಂತೆ ನೋಡಿಕೊಳ್ಳಿ. ಹಾಸಿಗೆಗಳಿಗೆ ಅಲರ್ಜಿನ್ ಪ್ರೂಫ್ ಕವರ್‌ಗಳನ್ನು ಬಳಸುವುದನ್ನು ಮರೆಯಬೇಡಿ. 


ಇದನ್ನೂ ಓದಿ : Sweet Potato: ಆರೋಗ್ಯದ ನಿಧಿ ಸಿಹಿಗೆಣಸು ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ


 ಬಿಸಿ ನೀರಿನ ಕಾವು : ನಿಮ್ಮ ಮುಖಕ್ಕೆ  ಬಿಸಿ ನೀರಿನ ಕಾವು  ನೀಡುವುದರಿಂದ  ಸೈನಸ್ ನೋವು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಸಿ ಕೆಲವು ನಿಮಿಷಗಳ ಕಾಲ ಅದನ್ನು ನಿಮ್ಮ ಮೂಗು ಮತ್ತು ಕೆನ್ನೆಯ ಮೇಲೆ ಇರಿಸಿ. ಸೈನಸ್ ಬ್ಲಾಕ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.


 ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು : ಹರ್ಬಲ್ ಟೀಗಳು,  ರಸಂ  ಅಥವಾ ಬಿಸಿ  ನೀರಿನಿಂದ ತಯಾರಿಸಿದ ನಿಂಬೆ ಜ್ಯೂಸ್, ಸೂಪ್ ಇವುಗಳನ್ನು ಸೇವಿಸುವ ಮೂಲಕ  ಸೈನಸ್ ಬ್ಲೋಕೆಜ್ ಅನ್ನು ಕಡಿಮೆ ಮಾಡಬಹುದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದು ದೇಹವನ್ನು ಹೈಡ್ರೇಟ್ ಆಗಿದುವುದು ಬಹಳ ಮುಖ್ಯ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.