Foods To Avoid After Guava: ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಸಹ ಈ ಶೀತ ವಾತಾವರಣದಲ್ಲಿ ಸೀಬೆಹಣ್ಣನ್ನು ತಿನ್ನಲು ಇಚ್ಚಿಸುತ್ತಾರೆ. ಆದರೆ, ಸೀಬೆಹಣ್ಣಿನ ಸೇವನೆ ಬಳಿಕ ಕೆಲವು ಆಹಾರ ಪದಾರ್ಥಗಳ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸೀಬೆಹಣ್ಣು: ಸೀಬೆಹಣ್ಣಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಸೀಬೆಹಣ್ಣನ್ನು ಪೇರಲ ಎಂತಲೂ ಕರೆಯುತ್ತಾರೆ. ನಮ್ಮಲ್ಲಿ ಕೆಲವರು ಪೇರಲ ತಿಂದ ಬಳಿಕ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಈ ಸಣ್ಣ ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ಅಂತಹ ತಪ್ಪುಗಳು ಯಾವುವೆಂದರೆ...
ನೀರು: ಕೆಲವರು ಸೀಬೆಹಣ್ಣನ್ನು ತಿಂದ ತಕ್ಷಣ ನೀರನ್ನು ಕುಡಿಯುತ್ತಾರೆ. ಪೇರಲವು ತೂಕವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಆದರೆ, ಈ ಹಣ್ಣಿನೊಂದಿಗೆ ನೀರು ಕುಡಿಯುವುದರಿಂದ ಇದು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಮಾಡಬಹುದು.
ಹಾಲು: ಕೆಲವರು ಸೀಬೆಹಣ್ಣಿನೊಂದಿಗೆ ಇಲ್ಲವೇ ಸೀಬೆಹಣ್ಣನ್ನು ತಿಂದ ಕೂಡಲೇ ಹಾಲು ಕುಡಿಯುತ್ತಾರೆ. ಆದರೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು. ಮಾತ್ರವಲ್ಲ, ಉದರ ಸಂಬಂಧಿತ ಸಮಸ್ಯೆಗಳೂ ಕೂಡ ಹೆಚ್ಚಾಗಬಹುದು.
ಬಾಳೆಹಣ್ಣು: ಸೀಬೆಹಣ್ಣಿನೊಂದಿಗೆ ಅಪ್ಪಿತಪ್ಪಿಯೂ ಸಹ ಬಾಳೆಹಣ್ಣನ್ನು ಸೇವಿಸಬಾರದು. ಆರೋಗ್ಯ ತಜ್ಞರ ಪ್ರಕಾರ, ಒಂದೇ ಬಾರಿಗೆ ಹಲವ್ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಪೇರಲವನ್ನು ಸೇವಿಸುವಾಗ ಬಾಳೆಹಣ್ಣನ್ನು ಸೇವಿಸಬಾರದು ಎನ್ನಲಾಗುತ್ತದೆ.
ಮೊಸರು: ಪೇರಲ ಹಣ್ಣಿನೊಂದಿಗೆ ಮೊಸರು ಸೇವನೆಯಿಂದ ಇದು ಅತಿಸಾರದಂತಹ ಸಮಸ್ಯೆಗೆ ಕಾರಣವಾಗಬಹುದು.
ಮಜ್ಜಿಗೆ: ಸೀಬೆಹಣ್ಣನ್ನು ತಿಂದ ನಂತರ ಮಜ್ಜಿಗೆಯನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದು ಹೊಟ್ಟೆ ನೋವಿಗೂ ಕಾರಣವಾಗಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.