Reflexology For Diabetes : ಮಧುಮೇಹ ಯಾವ ವಯಸ್ಸಿನಲ್ಲಿ ಬೇಕಾದರೂ ನಮ್ಮ ಕಾಡಬಹುದು. ಇಲ್ಲಿಯವರೆಗೆ ವಿಜ್ಞಾನಿಗಳು ಮಧುಮೇಹಕ್ಕೆ ಚಿಕಿತ್ಸೆಯನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ. ಮಧುಮೇಹ ಹೊಂದಿರುವ ರೋಗಿಗಳು ತಮ್ಮ ಆಹಾರ, ಪಾನೀಯ ಮತ್ತು ಜೀವನಶೈಲಿಯ ಮೇಲೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.  ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾದರೆ ಅನೇಕ ಇತರ ಕಾಯಿಲೆಗಳ ಅಪಾಯಕ್ಕೂ ಅದು ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು  ರಿಫ್ಲೆಕ್ಸೋಲಜಿ ಎಂದು ಕರೆಯಲ್ಪಡುವ ಮಸಾಜ್ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಇದು ರಕ್ತ ಪರಿಚಲನೆ ಸುಧಾರಿಸುವುದಲ್ಲದೆ, ಒತ್ತಡವನ್ನು ನಿವಾರಿಸುವಲ್ಲಿ ಕೂಡಾ ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ರಿಫ್ಲೆಕ್ಸೋಲಜಿ  ಹೇಗೆ ಕೆಲಸ ಮಾಡುತ್ತದೆ ? : 
ಆಕ್ಯುಪ್ರೆಶರ್ ಅನ್ನೋದನ್ನು ನೀವು ಕೇಳಿರಬಹುದು. ರಿಫ್ಲೆಕ್ಸೋಲಜಿ ಕೂಡಾ ಇದೇ ಈ ತತ್ವದ ಮೇಲೆ ಕೆಲಸ ಮಾಡುತ್ತದೆ. ನಮ್ಮ ಪಾದದ ಅಡಿಭಾಗ  ದೇಹದ ನಿರ್ದಿಷ್ಟ ಭಾಗಗಳಿಗೆ ಸಂಪರ್ಕವನ್ನು ಹೊಂದಿದೆ.  ಹಾಗಾಗಿ ಪಾದ ಅಡಿ ಭಾಗದಲ್ಲಿ ಒತ್ತಡ ಹಾಕಿದರೆ  ಅದು ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ.  ಪಾದಗಳ ಅಡಿಭಾಗವನ್ನು 5 ವಲಯಗಳಾಗಿ ವಿಂಗಡಿಸಲಾಗಿದೆ. ಇದು ಕಾಲ್ಬೆರಳುಗಳಿಂದ ಹಿಮ್ಮಡಿಯವರೆಗೆ ಇರುತ್ತದೆ. ಆದರೆ ದೇಹದ ಭಾಗವನ್ನು 10 ವಲಯಗಳಾಗಿ ವಿಂಗಡಿಸಲಾಗಿದೆ. ಅದರ ಮೇಲೆ ರಿಫ್ಲೆಕ್ಸೋಲಜಿ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Worst Hair Oil: ಈ ನಾಲ್ಕು ವಿಧದ ಎಣ್ಣೆಯನ್ನು ತಪ್ಪಿಯೂ ಕೂದಲಿಗೆ ಹಚ್ಚಬಾರದು..!


ಮಧುಮೇಹದ ಮೇಲೆ ರಿಫ್ಲೆಕ್ಸೋಲಜಿಯ ಪರಿಣಾಮ : 
19 ನೇ ಶತಮಾನದ ಸಿದ್ಧಾಂತದ ಪ್ರಕಾರ, ರಿಫ್ಲೆಕ್ಸೋಲಜಿ ನಮ್ಮ ನರಕೋಶಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತದೆ. ನಮ್ಮ ಪಾದದ ಅಡಿಭಾಗಕ್ಕೆ ನಿಧಾನವಾಗಿ ಒತ್ತಡವನ್ನು ಹಾಕಿದರೆ ನರಗಳು ಉತ್ತೇಜನಗೊಳ್ಳುತ್ತವೆ.  ಈ ಕಾರಣದಿಂದಾಗಿ, ದೇಹವು ಸಾಕಷ್ಟು ವಿಶ್ರಾಂತಿ ಪಡೆಯುತ್ತದೆ. ಇದು ಮನಸ್ಸು, ಉಸಿರಾಟ ಮತ್ತು ರಕ್ತ ಪರಿಚಲನೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಪಾದಗಳ ಮೇಲೆ ಮಸಾಜ್ ಮಾಡಿದಾಗ, ಅದು ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ. ಮಾತ್ರವಲ್ಲ  ಒತ್ತಡ ಕೂಡಾ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡಾ ನಿಯಂತ್ರಣಕ್ಕೆ ಬರುತ್ತದೆ. 


[[{"fid":"248437","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


 ಪ್ರೆಶರ್ ಪಾಯಿಂಟ್ ಮೇಲೆ ಹಾಕುವ ಒತ್ತಡ ಬಹಳ ಮುಖ್ಯ : 
ಹೆಚ್ಚಿನ ರಿಫ್ಲೆಕ್ಸೋಲಾಜಲಿಸ್ಟ್  ಪಾದಗಳ ಈ  ಪ್ರೆಶರ್ ಪಾಯಿಂಟ್ ಗಳ ಮೇಲೆ  ಒತ್ತಡವನ್ನು ಹಾಕುವುದರಿಂದ ಕಾರ್ಬೋಹೈಡ್ರೇಟ್ ಚಯಾಪಚಯ ಕ್ರಿಯೆಗೆ ಕಾರಣವಾದ ದೇಹದ ಅಂಗವನ್ನು ನಿಯಂತ್ರಿಸಲಾಗುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.  ರಿಫ್ಲೆಕ್ಸೋಲಜಿಯಿಂದಾಗಿ, ಮೇದೋಜ್ಜೀರಕ ಗ್ರಂಥಿ ಮತ್ತು ಪಿತ್ತಜನಕಾಂಗವು ಉತ್ತೇಜನಗೊಳ್ಳುತ್ತವೆ  ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.  ಇದರಿಂದಾಗಿ ಸಕ್ಕರೆ ಮಟ್ಟವು ಸಾಮಾನ್ಯವಾಗಲು ಪ್ರಾರಂಭವಾಗುತ್ತದೆ.


ಇದನ್ನೂ ಓದಿ : Weight Loss Tips: ಈ ಚಹಾವನ್ನು ಕುಡಿದರೆ ನಿಮ್ಮ ತೂಕ ಫಾಸ್ಟಾಗಿ ಕರಗುತ್ತದೆ..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ