Disadvantages Of Triphala: ತೂಕ ಇಳಿಕೆ ಮಾಡುವ ಈ ಚೂರ್ಣವನ್ನು ನೀವು ಸರಿಯಾಗಿ ಸೇವಿಸದಿದ್ದರೆ ಆರೋಗ್ಯಕ್ಕೆ ಭಾರಿ ಹಾನಿ

Side Effects Of Triphala: ತ್ರಿಫಲಾವನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸದೆ ಹೋದರೆ ಇದರಿಂದ ಆರೋಗ್ಯಕ್ಕೆ ಹಲವು ಹಾನಿಗಳು ಉಂಟಾಗುವ ಸಾಧ್ಯತೆಗಳಿವೆ. ಹಾಗಾದರೆ ಬನ್ನಿ ಇಂದು ನಾವು ತ್ರಿಫಲಾವನ್ನು ಯಾವಾಗ ಮತ್ತು ಯಾವ ರೀತಿಯಲ್ಲಿ ಸೇವಿಸಿದರೆ ಲಾಭ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.  

Written by - Nitin Tabib | Last Updated : Jul 11, 2022, 03:38 PM IST
  • ತ್ರಿಫಲಾ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ,
  • ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭ ಸಿಗುತ್ತದೆ.
  • ಆದರೆ ಇದನ್ನು ಅತಿಯಾಗಿ ಸೇವಿಸುವುದು ಅಥವಾ ತಪ್ಪಾದ ರೀತಿಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಕೂಡ ಉಂಟಾಗುತ್ತದೆ.
Disadvantages Of Triphala: ತೂಕ ಇಳಿಕೆ ಮಾಡುವ ಈ ಚೂರ್ಣವನ್ನು ನೀವು ಸರಿಯಾಗಿ ಸೇವಿಸದಿದ್ದರೆ ಆರೋಗ್ಯಕ್ಕೆ ಭಾರಿ ಹಾನಿ title=
Side Effects Of Eating Triphala

Side Effects Of Eating Triphala: ತ್ರಿಫಲಾ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭ ಸಿಗುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದು ಅಥವಾ ತಪ್ಪಾದ ರೀತಿಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಕೂಡ ಉಂಟಾಗುತ್ತದೆ. ಯಾವುದೇ ಪದಾರ್ಥವನ್ನು ಸೇವಿಸುವ ಪ್ರಮಾಣ ಮತ್ತು ಅದರ ವಿಧಾನ ತಿಳಿದಿರುವುದು ತುಂಬಾ ಮುಖ್ಯ, ಆದರೆ ಅದನ್ನು ಸರಿಯಾಗಿ ಬಳಸದಿದ್ದಾಗ ಅದು ದೇಹಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಇಂದು ನಾವು ನಿಮಗೆ ತ್ರಿಫಲಾವನ್ನು ಅತಿಯಾಗಿ ಸೇವಿಸುವುದರಿಂದ ಅಥವಾ ಅದನ್ನು ಸರಿಯಾಗಿ ಸೇವಿಸದೆ ಇರುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗಾದರೆ ಬನ್ನಿ ತ್ರಿಫಲಾ ಸೇವನೆಯಿಂದಾಗುವ ಅಡ್ಡಪರಿಣಾಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ತೂಕ ಇಳಿಕೆಗೆ ಪ್ರಯೋಜನಕಾರಿ
ನೀವು ತ್ರಿಫಲವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಅದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ವರದಿಗಳ ಪ್ರಕಾರ, ಸ್ಥೂಲಕಾಯ ಹೊಂದಿರುವ ವ್ಯಕ್ತಿಗಳು ನಿತ್ಯ 10 ಗ್ರಾಂ ತ್ರಿಫಲಾ ಸೇವಿಸುವುದರಿಂದ ಅವರ ತೂಕ, ಸೊಂಟದ ಭಾಗದ ಕೊಬ್ಬು ಹಾಗೂ ಪೃಷ್ಠ ಭಾಗದ ಕೊಬ್ಬು ಗಣನೀಯವಾಗಿ ಇಳಿಕೆಯಾಗಿದೆ ಎನ್ನಲಾಗಿದೆ.

ತ್ರಿಫಲಾದ ಅಡ್ಡಪರಿಣಾಮಗಳು
ತ್ರಿಫಲ ತಿಂದಾಗ ಅನೇಕರಿಗೆ ಅತಿಸಾರ, ಹೊಟ್ಟೆನೋವಿನಂತಹ ಸಮಸ್ಯೆಗಳಿದ್ದವು. ಮತ್ತೊಂದೆಡೆ, ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ತ್ರಿಫಲವನ್ನು ಸೇವಿಸುವುದು ಸರಿಯಲ್ಲ. ವ್ಯಕ್ತಿಯು ಯಾವುದೇ ಒಂದು ದೀರ್ಘಕಾಲದ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ತ್ರಿಫಲವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇದು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇನ್ನೊಂದೆಡೆ ಯಾರಾದರೂ ಹುಳಿ ಪದಾರ್ಥಗಳಿಂದ ಅಲರ್ಜಿಯನ್ನು ಹೊಂದಿದ್ದರೆ ಅಥವಾ ಚರ್ಮದ ಅಲರ್ಜಿಯನ್ನು ಹೊಂದಿದ್ದರೆ, ಅವರು ತ್ರಿಫಲಾ ಸೇವನೆಯನ್ನು ತಪ್ಪಿಸಬೇಕು ಎನ್ನಲಾಗಿದೆ.

ಇದನ್ನೂ ಓದಿ-Weight Loss By Black Pepper: ಕರಿಮೆಣಸಿನಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ, ಹೇಗೆ ಇಲ್ಲಿ ತಿಳಿದುಕೊಳ್ಳಿ

ತ್ರಿಫಲಾವನ್ನು ಹೇಗೆ ಬಳಸಬೇಕು
ತ್ರಿಫಲಾ ಕ್ಯಾಪ್ಸುಲ್, ಚೂರ್ಣ, ಜ್ಯೂಸ್ ಅಥವಾ ಟ್ಯಾಬ್ಲೆಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆಹಾರವನ್ನು ತಿನ್ನುವ ಮೊದಲು ಬೆಚ್ಚಗಿನ ನೀರಿನಲ್ಲಿ ಬೆರೆಸಿ ನೀವು ಖಾಲಿ ಹೊಟ್ಟೆಯಲ್ಲಿ ತ್ರಿಫಲಾವನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ-Blood Pressure ನಿಯಂತ್ರಣಕ್ಕೆ ಸಹಕಾರಿ ಪರಂಗಿ, ಇತರ ಲಾಭಗಳನ್ನು ತಿಳಿದುಕೊಳ್ಳಲು ವರದಿ ಓದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News