Weight Loss Tips: ಈ ಚಹಾವನ್ನು ಕುಡಿದರೆ ನಿಮ್ಮ ತೂಕ ಫಾಸ್ಟಾಗಿ ಕರಗುತ್ತದೆ..!

ಕೆಲವು ಚಹಾಗಳು ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಕಾರಿಯಾಗಿವೆ. ಈ ಪೈಕಿ ಮೆಂತ್ಯ ಚಹಾ ನಿಮ್ಮ ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ.

Written by - Puttaraj K Alur | Last Updated : Jul 11, 2022, 03:52 PM IST
  • ನೀವು ಸರಿಯಾದ ಪ್ರಮಾಣದಲ್ಲಿ ಮೆಂತ್ಯ ಚಹಾ ಸೇವಿಸಿದರೆ ಬೇಗನೆ ತೂಕ ಕಳೆದುಕೊಳ್ಳುತ್ತೀರಿ
  • ನೀವು ಸದಾ ಫಿಟ್ ಆಗಿರಲು ಪ್ರತಿದಿನ ಮೆಂತ್ಯ ಚಹಾ ಸೇವಿಸುವುದನ್ನು ರೂಢಿಸಿಕೊಳ್ಳಿರಿ
  • ಮೆಂತ್ಯ ಚಹಾ ನಿಮ್ಮ ಸಕ್ಕರೆಮಟ್ಟ ನಿಯಂತ್ರಿಸುವುದರ ಜೊತೆಗೆ ಮಧುಮೇಹದ ಅಪಾಯ ಕಡಿಮೆಗೊಳಿಸುತ್ತದೆ
Weight Loss Tips: ಈ ಚಹಾವನ್ನು ಕುಡಿದರೆ ನಿಮ್ಮ ತೂಕ ಫಾಸ್ಟಾಗಿ ಕರಗುತ್ತದೆ..! title=
ಮೆಂತ್ಯ ಚಹಾದ ಆರೋಗ್ಯಕರ ಪ್ರಯೋಜನಗಳು

ನವದೆಹಲಿ: ಅನೇಕರು ಇಂದು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೇಗಾದರೂ ಮಾಡಿ ತೂಕ ಕಳೆದುಕೊಳ್ಳಬೇಕೆಂದು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ತೂಕ ನಷ್ಟಗೊಳಿಸಲು ಅನೇಕ ಮನೆಮದ್ದುಗಳನ್ನು ಟ್ರೈ ಮಾಡಿದರೂ ಪ್ರಯೋಜನವಾಗಿರುವುದಿಲ್ಲ. ಹೀಗಾಗಿ ನಿಮ್ಮ ತೂಕವನ್ನು ಕಡಿಮೆ ಮಾಡುವ ಕೆಲವು ಚಹಾಗಳಿವೆ. ಈ ಪೈಕಿ ಮೆಂತ್ಯ ಚಹಾ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

ಮೆಂತ್ಯ ಚಹಾವನ್ನು ನೀವು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಬೇಗನೆ ತೂಕವನ್ನು ಕಳೆದುಕೊಳ್ಳುತ್ತೀರಿ. ನೀವು ಸದಾ ಫಿಟ್ ಆಗಿರಲು ಈ ಚಹಾ ಕುಡಿಯುವುದರಿಂದ ಅನೇಕ ಪ್ರಯೋಜನ ಪಡೆಯಬಹುದು. ವಾಸ್ತವವಾಗಿ ಮೆಂತ್ಯವು ಆಂಟಾಸಿಡ್‌ಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಆಸಿಡ್ ರಿಫ್ಲೆಕ್ಸ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮೆಂತ್ಯ ಚಹಾವು ಹೊಟ್ಟೆಯ ಹುಣ್ಣುಗಳನ್ನು ತೊಡೆದುಹಾಕಲು ಸಹ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: Blood Pressure ನಿಯಂತ್ರಣಕ್ಕೆ ಸಹಕಾರಿ ಪರಂಗಿ, ಇತರ ಲಾಭಗಳನ್ನು ತಿಳಿದುಕೊಳ್ಳಲು ವರದಿ ಓದಿ

ಮೆಂತ್ಯ ಚಹಾವನ್ನು ಹೇಗೆ ತಯಾರಿಸುವುದು?

ಮೆಂತ್ಯ ಚಹಾ ಮಾಡಲು ಒಂದು ಚಮಚ ಮೆಂತ್ಯ ಪುಡಿಯನ್ನು ತೆಗೆದುಕೊಂಡು ಅದನ್ನು ಬಿಸಿನೀರಿನೊಂದಿಗೆ ಬೆರೆಸಬೇಕು. ನಂತರ ಮೆಂತ್ಯವನ್ನು ತಗ್ಗಿಸಿ ಪಾನೀಯಕ್ಕೆ ನಿಂಬೆ ಸೇರಿಸಬೇಕು. ಬೇಕಿದ್ದರೆ ರಾತ್ರಿ ಮೆಂತ್ಯವನ್ನು ನೆನೆಯಲು ಹಾಕಿ ಬೆಳಗ್ಗೆ ತುಳಸಿ ಎಲೆ ಹಾಕಿ ನೀರಿನಲ್ಲಿ ಕುದಿಸಬೇಕು. ಚೆನ್ನಾಗಿ ಕುದಿಸಿದ ಬಳಿಕ ಚಹಾವನ್ನು ಸೋಸಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.

ಮೆಂತ್ಯ ಚಹಾದಿಂದ ಸಕ್ಕರೆಮಟ್ಟ ನಿಯಂತ್ರಣ

ಮೆಂತ್ಯ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ಇದನ್ನು ಬಳಸಬಹುದು. ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವುದನ್ನು ತಡೆಯುತ್ತದೆ. ನೀವು ಸೇವಿಸುವ ಸಾಮಾನ್ಯ ಚಹಾ ಅಥವಾ ಕಾಫಿಯ ಬದಲಿಗೆ ಮೆಂತ್ಯ ಚಹಾ ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: Weight Loss By Black Pepper: ಕರಿಮೆಣಸಿನಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ, ಹೇಗೆ ಇಲ್ಲಿ ತಿಳಿದುಕೊಳ್ಳಿ

ಮೆಂತ್ಯ ಚಹಾ ಈ ರೀತಿ ತೂಕ ಕಡಿಮೆ ಮಾಡುತ್ತದೆ

ಮೆಂತ್ಯದಲ್ಲಿ ನಾರಿನಂಶ ಹೇರಳವಾಗಿದ್ದು, ಮಲಬದ್ಧತೆಗೆ ಪರಿಹಾರ ನೀಡುತ್ತದೆ. ಇದಲ್ಲದೇ ಮೆಂತ್ಯ ಚಹಾ ಕುಡಿಯುವುದರಿಂದ ಕಲ್ಲುಗಳ ಸಮಸ್ಯೆ ದೂರವಾಗುತ್ತದೆ. ಮೆಂತ್ಯ ತೂಕ ನಷ್ಟದ ಜೊತೆಗೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಮತ್ತು ಫಿಟ್ ಆಗಿರಲು ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಮೆಂತ್ಯ ಚಹಾವನ್ನು ಸೇರಿಸಿಕೊಳ್ಳುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News