Secret Of 100 Year Life - ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿ ದೀರ್ಘ (Long Life) ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಬಯಸುತ್ತಾನೆ, ಆದರೆ ಎಲ್ಲಾ ಜನರ ಈ ಆಸೆ ಈಡೇರುವುದಿಲ್ಲ. ಹೆಚ್ಚಿನ ಜನರು 70-80ರ ವಯಸ್ಸಿನಲ್ಲಿ ಅನಾರೋಗ್ಯ ಅಥವಾ ಇತರೆ ಕಾರಣಗಳಿಂದ ಮರಣ ಹೊಂದುತ್ತಾರೆ. 


COMMERCIAL BREAK
SCROLL TO CONTINUE READING

ಅಧ್ಯಯನದಲ್ಲಿ ಪತ್ತೆಯಾಗಿದೆ ದೀರ್ಘಾಯುಷ್ಯದ ರಹಸ್ಯ
ಕೆಲವರು 100 ವರ್ಷ ವಯಸ್ಸಿನವರೆಗೂ ಹೇಗೆ ಬದುಕುತ್ತಾರೆ?  ಎಂಬ ಪ್ರಶ್ನೆಗೆ ಇದೀಗ ಅಧ್ಯಯನವೊಂದರಲ್ಲಿ ಉತ್ತರ ಸಿಕ್ಕಿದೆ. ಈ ರಹಸ್ಯ ಯಾವುದು ಎಂಬುದನ್ನು ತಿಳಿದುಕೊಂಡು ನಾವೂ ಕೂಡ  ದೀರ್ಘ, ಸಂತೋಷ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗಲಿದೆ.


'ದಿ ಅಮೇರಿಕನ್ ಜರ್ನಲ್ ಆಫ್ ಲೈಫ್ ಸ್ಟೈಲ್ ಮೆಡಿಸಿನ್' ಅಧ್ಯಯನದ ಪ್ರಕಾರ,  ಪ್ರಪಂಚದ ಬ್ಲೂ ಝೋನ್ ಪ್ರದೇಶಗಳಲ್ಲಿನ ಜನರು ಸಾಮಾನ್ಯವಾಗಿ 100 ವರ್ಷ ವಯಸ್ಸಿನವರೆಗೆ ಬದುಕುತ್ತಾರೆ. ವಿಜ್ಞಾನಿಗಳು  ಈ ಪ್ರದೇಶದಲ್ಲಿ ವಾಸಿಸುವ ಜನರ ಆಹಾರ ಮತ್ತು ಜೀವನಶೈಲಿಯ (Lifestyle) ಬಗ್ಗೆ ಹಾಗೂ ಅವರ ದೀರ್ಘಾಯುಷ್ಯದ ರಹಸ್ಯವನ್ನು ತಿಳಿದುಕೊಳ್ಳಲು ಅಧ್ಯಯನ ನಡೆಸಿದ್ದಾರೆ. 


ನಿಯಮಿತವಾಗಿ ಹಸಿರು ಬೀನ್ಸ್ ಸೇವಿಸಿ
ಅಧ್ಯಯನದ ಪ್ರಕಾರ, ಬ್ಲೂ ಝೋನ್ ನಾಲ್ಲಿ ವಾಸಿಸುವ ಜನರ ಆಹಾರ ಮತ್ತು ಜೀವನಶೈಲಿ ಪ್ರಪಂಚದ ಇತರ ಭಾಗಗಳಿಗಿಂತ  ವಿಭಿನ್ನವಾಗಿದೆ ಎಂದು ಕಂಡುಬಂದಿದೆ. ಇದರ ಹೊರತಾಗಿಯೂ, ಅವರೆಲ್ಲರಲ್ಲಿ ಒಂದು ವಿಷಯ ಸಾಮಾನ್ಯವಾಗಿ ಕಂಡುಬಂದಿದೆ. ಅದೇನೆಂದರೆ, ಅವರು ನಿಯಮಿತವಾಗಿ ಬೀನ್ಸ್ ಅಂದರೆ ಹಸಿರು ಬೀನ್ಸ್ ಅನ್ನು ಸೇವಿಸುತ್ತಾರೆ. ರಾಜ್ಮಾ ಮತ್ತು ಲೋಭಿಯಾ ಕೂಡ ಈ ಬೀನ್ಸ್  ಪ್ರಕಾರಗಳಾಗಿವೆ. ಇದನ್ನು ಸೇವಿಸುವುದರಿಂದ, ಅವರು ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಫೈಬರ್ ಅನ್ನು ಪಡೆಯುತ್ತಾರೆ, ಇದು ದೇಹವನ್ನು ಫಿಟ್ ಆಗಿಡಲು ಅಗತ್ಯವಾಗಿರುತ್ತದೆ. ಮಹತ್ವದ  ವಿಷಯವೆಂದರೆ ಈ ಬೀನ್ಸ್ ನಲ್ಲಿ ಯಾವುದೇ ರೀತಿಯ ಕೊಬ್ಬಿನಾಂಶ ಇರುವುದಿಲ್ಲ. 


ಇದಲ್ಲದೇ, ನೀಲಿ ವಲಯಗಳ  (Blue Zones) ವಾಸಿಸುವ ಜನರಲ್ಲಿ ಹಸಿರು ಬೀನ್ಸ್ ಮತ್ತು ತರಕಾರಿಗಳನ್ನು ತಿನ್ನುವುದಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಕಂಡುಬಂದಿದೆ. ಇದರ ಜೊತೆಯಲ್ಲಿ, ಅವರು ನಿಯಮಿತವಾಗಿ ವಾಕಿಂಗ್, ವಾರಾಂತ್ಯದಲ್ಲಿ ವಿಶ್ರಾಂತಿ ಮತ್ತು ಒತ್ತಡ ಮುಕ್ತವಾಗಿರಲು ಮಧ್ಯಮ ಪ್ರಮಾಣದ ಮದ್ಯವನ್ನು ಸೇವಿಸುತ್ತಾರೆ. 


ಇದನ್ನೂ ಓದಿ-ಕೊಬ್ಬು ಕರಗಿಸಬೇಕಾದರೆ ನಿತ್ಯ ಹೀಗೆ ಸೇವಿಸಿ ತೊಗರಿಬೇಳೆ


ರೋಗಗಳಿಂದ ರಕ್ಷಿಸುತ್ತದೆ ಬೀನ್ಸ್
ವಿಜ್ಞಾನಿಗಳ ಪ್ರಕಾರ, ಬೀನ್ಸ್‌ನಲ್ಲಿ (Beans) ಪಾಲಿಫಿನಾಲ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಇದ್ದು, ಇದು ವಯಸ್ಸನ್ನು ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಉರಿಯೂತ ನಿವಾರಕ, ಆಂಟಿ ಡೈಯಾಬಿಟಿಕ್ ಆಗಿರುವುದರ ಜೊತೆಗೆ  ಇದು ಬೊಜ್ಜು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೀನ್ಸ್‌ನಲ್ಲಿರುವ ಸಾಕಷ್ಟು ಪ್ರಮಾಣದ ಫೈಬರ್ ಖಿನ್ನತೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-Garlic For Health: ಬೆಳ್ಳುಳ್ಳಿ ತಿನ್ನುವುದರಿಂದ ಲಾಭ ಎಷ್ಟಿದೆಯೋ , ನಷ್ಟವೂ ಅಷ್ಟೇ ಇದೆ


ನಿತ್ಯ ಅರ್ಧಗಂಟೆ ವಾಕ್ ಮಾಡಿ
ನೀವು ಕೂಡ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಬಯಸುತ್ತಿದ್ದರೆ, ನೀವು ನಿಮ್ಮ ಆಹಾರದಲ್ಲಿ ಬೀನ್ಸ್ ಅನ್ನು ಖಂಡಿತವಾಗಿ ಸೇರಿಸಿ ಎಂದು ಆಹಾರ ತಜ್ಞರು ಹೇಳುತ್ತಾರೆ. ಹಸಿರು ಬೀನ್ಸ್ ಜೊತೆಗೆ,  ಕಪ್ಪು ಬೀನ್ಸ್ ಮತ್ತು ಕೆಂಪು ಬೀನ್ಸ್ ಅನ್ನು ಅನ್ನು ಕೂಡ ಸೇರಿಸಿ. ಇದರೊಂದಿಗೆ, ನೀವು ನಿಯಮಿತವಾಗಿ ಸಲಾಡ್, ಹಸಿರು ತರಕಾರಿಗಳು (Green Vegetables), ಮಸೂರ ಮತ್ತು ಹಾಲು-ಮೊಸರನ್ನು ಸೇವಿಸಬೇಕು. ಅಲ್ಲದೆ, ವಾಕಿಂಗ್ ಮಾಡಲು ಪ್ರತಿದಿನ ಅರ್ಧ ಗಂಟೆ ಮೀಸಲಿರಿಸಬೇಕು.


ಇದನ್ನೂ ಓದಿ-Benefits of Coconut Oil: ಈ ಕಾರಣಗಳಿಂದ ನೀವು ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಆಹಾರ ಸೇವಿಸಬೇಕು, ಇಲ್ಲಿವೆ ಐದು ಲಾಭಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ