ಕೊಬ್ಬು ಕರಗಿಸಬೇಕಾದರೆ ನಿತ್ಯ ಹೀಗೆ ಸೇವಿಸಿ ತೊಗರಿಬೇಳೆ

ತೊಗರಿಬೇಳೆಯಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.

Written by - Ranjitha R K | Last Updated : Oct 19, 2021, 09:15 PM IST
  • ಬೇಳೆಕಾಳುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  • ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ.
  • ಮಾರುಕಟ್ಟೆಯಲ್ಲಿ ಹಲವು ವಿಧದ ಬೇಳೆಕಾಳುಗಳು ಲಭ್ಯವಿದೆ.
ಕೊಬ್ಬು ಕರಗಿಸಬೇಕಾದರೆ ನಿತ್ಯ ಹೀಗೆ ಸೇವಿಸಿ ತೊಗರಿಬೇಳೆ   title=
ಬೇಳೆಕಾಳುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. (file photo)

ನವದೆಹಲಿ : ಬೇಳೆಕಾಳುಗಳು ಆರೋಗ್ಯಕ್ಕೆ ತುಂಬಾ (health benefitsof dal)  ಪ್ರಯೋಜನಕಾರಿ.  ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ.  ಇದು ದೇಹದಲ್ಲಿನ ಅನೇಕ ರೀತಿಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಲವು ವಿಧದ ಬೇಳೆಕಾಳುಗಳು ಲಭ್ಯವಿದೆ.  ಅವುಗಳ ಪೈಕಿ ದೇಹ ತೂಕ ಕಡಿಮೆ ಮಾಡಬೇಕಾದರೆ,  ತೊಗರಿಬೇಳೆಯನ್ನು (benefits of toor dal) ಸೇವಿಸಬೇಕು. ಇದು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ತೂಕ ಕಳೆದುಕೊಳ್ಳಲು ಬಯಸುವವರು ತೊಗರಿ ಬೇಳೆಯನ್ನು ಈ ರೀತಿ ಸೇವಿಸಬೇಕು.  

ತೊಗರಿಬೇಳೆಯ ಪ್ರಯೋಜನಗಳು: 
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ : ತೊಗರಿಬೇಳೆಯಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (sugar level) ನಿಯಂತ್ರಿಸಲು ಸಹಾಯಕವಾಗಿದೆ.

ಇದನ್ನೂ ಓದಿ : Garlic For Health: ಬೆಳ್ಳುಳ್ಳಿ ತಿನ್ನುವುದರಿಂದ ಲಾಭ ಎಷ್ಟಿದೆಯೋ , ನಷ್ಟವೂ ಅಷ್ಟೇ ಇದೆ

ತೂಕ ನಷ್ಟಕ್ಕೆ ಸಹಾಯಕ : ತೊಗರಿಬೇಳೆಯಲ್ಲಿರುವ ಪ್ರೋಟೀನ್ ನಿಂದಾಗಿ, ಅದನ್ನು ತಿಂದ ನಂತರ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ. ಈ ಕಾರಣದಿಂದಾಗಿ ನೀವು ಹೆಚ್ಚುವರಿ ಏನನ್ನೂ ತಿನ್ನಲು ಸಾಧ್ಯವಾಗುವುದಿಲ್ಲ. ಇದು ತೂಕ ಇಳಿಸಿಕೊಳ್ಳಲು (weight lose) ಸಹಾಯ ಮಾಡುತ್ತದೆ.

ಜೀರ್ಣ ಕ್ರಿಯೆ ಸುಧಾರಿಸುತ್ತದೆ : ತೊಗರಿಬೇಳೆ  ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಜೀರ್ಣ ವ್ಯವಸ್ಥೆಯ  ನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ.  ಆದ್ದರಿಂದ, ನಿಮ್ಮ ಆಹಾರದಲ್ಲಿ (food) ಒಂದು ಬಟ್ಟಲು ತೊಗರಿಬೇಳೆಯನ್ನು ನಿತ್ಯ ಸೇವಿಸಿ. 

ಇದನ್ನೂ ಓದಿ : Benefits of Coconut Oil: ಈ ಕಾರಣಗಳಿಂದ ನೀವು ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಆಹಾರ ಸೇವಿಸಬೇಕು, ಇಲ್ಲಿವೆ ಐದು ಲಾಭಗಳು

ತೊಗರಿಬೇಳೆ ಯನ್ನು ಸೇವಿಸುವುದು ಹೇಗೆ ? 
ಕಿಚಡಿ ರೂಪದಲ್ಲಿ ತೊಗರಿಬೇಳೆಯನ್ನು ಸೇವಿಸಬಹುದು. ತೊಗರಿಬೇಳೆಯಿಂದ ಮಾಡಿದ ಕಿಚಡಿ ಹಗುರವಾದ ಮತ್ತು ಹೊಟ್ಟೆಗೆ ಹಿಟ್ ಎನಿಸುವ ಆಹಾರವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News