Garlic For Health: ಬೆಳ್ಳುಳ್ಳಿ ತಿನ್ನುವುದರಿಂದ ಲಾಭ ಎಷ್ಟಿದೆಯೋ , ನಷ್ಟವೂ ಅಷ್ಟೇ ಇದೆ

 Benefits And Side Effects Of Garlic : ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವಂಥಹ ವಸ್ತುವಾಗಿದೆ. ಇದನ್ನು ಸಾಮಾನ್ಯವಾಗಿ ಒಗ್ಗರಣೆಗೆ ಬಳಸಲಾಗುತ್ತದೆ.

Written by - Ranjitha R K | Last Updated : Oct 19, 2021, 08:14 PM IST
  • ಹಸಿ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
  • ಬೆಳ್ಳುಳ್ಳಿ ಔಷಧೀಯ ಗುಣಗಳಿಂದ ತುಂಬಿದೆ.
  • ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Garlic For Health:  ಬೆಳ್ಳುಳ್ಳಿ  ತಿನ್ನುವುದರಿಂದ ಲಾಭ ಎಷ್ಟಿದೆಯೋ , ನಷ್ಟವೂ ಅಷ್ಟೇ ಇದೆ  title=
ಹಸಿ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (file photo)

ನವದೆಹಲಿ : Benefits And Side Effects Of Garlic : ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವಂಥಹ ವಸ್ತುವಾಗಿದೆ. ಇದನ್ನು ಸಾಮಾನ್ಯವಾಗಿ ಒಗ್ಗರಣೆಗೆ ಬಳಸಲಾಗುತ್ತದೆ. ಇದು ಯಾವುದೇ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಹಸಿ ಬೆಳ್ಳುಳ್ಳಿ ಆರೋಗ್ಯಕ್ಕೆ (Benefits of garlic) ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಳ್ಳುಳ್ಳಿ ಔಷಧೀಯ ಗುಣಗಳಿಂದ ತುಂಬಿದೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬಯೋಟಿಕ್, ಆ್ಯಂಟಿ ವೈರಲ್, ಆ್ಯಂಟಿ ಫಂಗಲ್, ಮ್ಯಾಂಗನೀಸ್, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳಂತಹ ಗುಣಗಳಿದ್ದು, ಇದು ನಮ್ಮ ದೇಹವನ್ನು ಹಲವು ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಪ್ರಯೋಜನಗಳು ಎಷ್ಟಿವೆಯೋ ಅಷ್ಟೇ (Side effects of garlic) ಅನಾನುಕೂಲತೆಗಳು ಕೂಡಾ ಇವೆ. 

ಬೆಳ್ಳುಳ್ಳಿ ತಿನ್ನುವುದರಿಂದಾಗುವ ಲಾಭಗಳು: 
1. ರೋಗನಿರೋಧಕ ಶಕ್ತಿ: ಕಚ್ಚಾ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ  (Immunity) ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ.   ಬಲವಾದ ರೋಗನಿರೋಧಕ ಶಕ್ತಿ ದೇಹವನ್ನು ಅನೇಕ ವೈರಲ್ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಜೇನುತುಪ್ಪದೊಂದಿಗೆ (Honey) ಬೆಳ್ಳುಳ್ಳಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಇದನ್ನೂ  ಓದಿ : Benefits of Coconut Oil: ಈ ಕಾರಣಗಳಿಂದ ನೀವು ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಆಹಾರ ಸೇವಿಸಬೇಕು, ಇಲ್ಲಿವೆ ಐದು ಲಾಭಗಳು

2. ಕೊಲೆಸ್ಟ್ರಾಲ್: ಬೆಳ್ಳುಳ್ಳಿಯ (Garlic) ಸೇವನೆಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಆಗಿರುವ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

3. ರಕ್ತದೊತ್ತಡ:ನೀವು ರಕ್ತದೊತ್ತಡದ ರೋಗಿಯಾಗಿದ್ದರೆ ಬೆಳ್ಳುಳ್ಳಿ ನಿಮಗೆ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿರುವ  ಬಯೋಆಕ್ಟಿವ್ ಸಲ್ಫರ್ ಸಂಯುಕ್ತ, ಎಸ್-ಅಲ್ಲೈಲ್ಸಿಸ್ಟೈನ್, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ತಿನ್ನುವುದರಿಂದಾಗುವ ಅನಾನುಕೂಲಗಳು: 
1.ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆಸಿಡಿಟಿಯಿಂದ ಹೊಟ್ಟೆ ನೋವು, ವಾಯುವಿಗೆ ಕಾರಣವಾಗುತ್ತದೆ.  ಇಂತಹ ಪರಿಸ್ಥಿತಿಯಲ್ಲಿ, ಬೆಳ್ಳುಳ್ಳಿಯನ್ನು (Side effects of garlic) ಸೇವಿಸುವುದರಿಂದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಆಮ್ಲೀಯತೆಯ ಸಮಸ್ಯೆಯಲ್ಲಿ ಬೆಳ್ಳುಳ್ಳಿಯ ಸೇವನೆಯು ಹಾನಿಕಾರಕವಾಗಿದೆ. 

ಇದನ್ನೂ  ಓದಿ : Beauty Tips: ಗುಲಾಬಿ ದಳದ ಪುಡಿ ಬಳಸುವುದರಿಂದ ಸಿಗುತ್ತೆ ಈ 4 ಅದ್ಭುತ ಸೌಂದರ್ಯ ಪ್ರಯೋಜನ

2.ಯಾರಿಗಾದರೂ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಅವರು ಬೆಳ್ಳುಳ್ಳಿಯನ್ನು ಬಳಸಬಾರದು. ಏಕೆಂದರೆ ಬೆಳ್ಳುಳ್ಳಿ ತಿನ್ನುವುದರಿಂದ ಬಾಯಿಯ ವಾಸನೆ ಮತ್ತಷ್ಟು ಹೆಚ್ಚಾಗುತ್ತದೆ.

3. ತಲೆನೋವಿನ ಸಮಸ್ಯೆ ಇದ್ದರೆ, ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಬೇಡಿ. ಹಸಿ ಬೆಳ್ಳುಳ್ಳಿಯನ್ನು ಅಧಿಕವಾಗಿ ಸೇವಿಸುವುದರಿಂದ ತಲೆನೋವು ಉಂಟಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News