ಬೆಂಗಳೂರು : ತಲೆನೋವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮಿನ ಜೊತೆಗೆ ತಲೆನೋವಿನ ಸಮಸ್ಯೆ ಕೂಡಾ ಬಾಧಿಸುತ್ತದೆ. ಕೆಲವು  ಮನೆಮದ್ದುಗಳನ್ನು ಬಳಸುವ ಮೂಲಕ ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಈ ಮನೆಮದ್ದುಗಳ ಸಹಾಯದಿಂದ ಆಗಾಗ ಬರುವ ತಲೆನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ತಲೆನೋವಿನಿಂದ ಮುಕ್ತಿ ಪಡೆಯುವುದು ಹೇಗೆ?
ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು, ಈ ಕೆಳಗಿನ ಸುಲಭವಾದ ಮನೆಮದ್ದುಗಳನ್ನು ಬಳಸಬಹುದು. 


ಸೇಬು ಮತ್ತು ಉಪ್ಪು : 
ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ಸೇಬು ಮತ್ತು ಉಪ್ಪನ್ನು ಒಟ್ಟಿಗೆ ಸೇವಿಸಿ. ಸೇಬು ಮತ್ತು ಉಪ್ಪನ್ನು ಒಟ್ಟಿಗೆ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದಕ್ಕಾಗಿ, 1 ಸೇಬನ್ನು ಕತ್ತರಿಸಿಕೊಂಡು  ಅದಕ್ಕೆ ಉಪ್ಪು ಉದುರಿಸಿ ತಿನ್ನಿ. ಇದರಿಂದ ತಲೆನೋವಿನಿಂದ ಮುಕ್ತಿ ಪಡೆಯಬಹುದು. 


ಇದನ್ನೂ ಓದಿ : ಎಳನೀರು ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾ ಬಳಸಿದರೆ ಎದುರಾಗುವುದು ಈ ಸಮಸ್ಯೆ


ಲವಂಗದಿಂದ ತಲೆನೋವು ನಿವಾರಣೆ :
ಲವಂಗದ ಸಹಾಯದಿಂದ, ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಲವಂಗದಲ್ಲಿರುವ ಗುಣಗಳು ತಲೆನೋವನ್ನು ನಿವಾರಿಸುವಲ್ಲಿ ಪರಿಣಾಮಕಾರಿ. ಇದಕ್ಕಾಗಿ ಕೆಲವು ಲವಂಗ ಮೊಗ್ಗುಗಳನ್ನು ತೆಗೆದುಕೊಂದು ಅದನ್ನು ಪ್ಯಾನ್ ಮೇಲೆ ಬಿಸಿ ಮಾಡಿ. ಲವಂಗದ ಪರಿಮಳ ಬರಲು ಆರಂಭವಾದಾಗ ಅದನ್ನು ಕರವಸ್ತ್ರದಲ್ಲಿ ಕಟ್ಟಿಕೊಳ್ಳಿ.  ನಂತರ ಪದೇ ಪದೇ ಇದರ ವಾಸನೆ ನೋಡುತ್ತಾ ಇರಿ. ಹೀಗೆ ಮಾಡಿದರೆ ತಲೆನೋವು ಕಡಿಮೆಯಾಗುವುದು.  


ಬಿಸಿ ನಿಂಬೆ ಪಾನಕ :
ತಲೆನೋವು ಕಡಿಮೆ ಮಾಡಲು, ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯಿರಿ. ಇದರಿಂದ ಸಾಕಷ್ಟು ಲಾಭವಾಗುವುದು. ಇದಕ್ಕಾಗಿ 1 ಗ್ಲಾಸ್ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಸೇವಿಸಿ. ಹೀಗೆ ಮಾಡಿದರೆ ತಲೆನೋವಿನಿಂದ ಮುಕ್ತಿ  ಸಿಗುವುದು. 


ತುಳಸಿ ಮತ್ತು ಶುಂಠಿ :
ತುಳಸಿ ಮತ್ತು ಶುಂಠಿಯ ರಸದ ಮಿಶ್ರಣವು ತಲೆನೋವು ನಿವಾರಿಸಲು ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ತುಳಸಿ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಂಡು ರಸ ತೆಗೆದುಕೊಳ್ಳಿ. ಈಗ ಈ ರಸವನ್ನು ಸ್ವಲ್ಪ ಬಿಸಿ ಮಾಡಿ ಸೇವಿಸಿ. ಇದರಿಂದ ತಲೆನೋವಿನಿಂದ  ಪರಿಹಾರ ಸಿಗುತ್ತದೆ. 


ಇದನ್ನೂ ಓದಿ :  Hair Care : ಖಾಲಿ ಹೊಟ್ಟೆಯಲ್ಲಿ ಈ ಡ್ರೈಫ್ರೂಟ್ಸ್‌ ಸೇವಿಸಿದರೆ, ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತದೆ!


ಲವಂಗದ ಎಣ್ಣೆಯಿಂದ ಮಸಾಜ್ ಮಾಡಿ :
ತಲೆನೋವನ್ನು ಹೋಗಲಾಡಿಸಲು ಲವಂಗದ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ. ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಲವಂಗದ ಎಣ್ಣೆಯನ್ನು ಹಣೆಯ ಮೇಲೆ ಹಚ್ಚಿ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ತಲೆನೋವಿನಿಂದ ಮುಕ್ತಿ ಪಡೆಯಬಹುದು. 


ತಲೆನೋವಿನ ಸಮಸ್ಯೆಗಳನ್ನು ಕಡಿಮೆ ಮಾಡಲು, ಮೇಲೆ ಹೇಳಿದ ಪರಿಹಾರಗಳು ಪರಿಣಾಮಕಾರಿಯಾಗಿರುತ್ತವೆ. ಆದರೆ ನೋವು ತೀವ್ರವಾಗಿದ್ದರೆ ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.