ಎಳನೀರು ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾ ಬಳಸಿದರೆ ಎದುರಾಗುವುದು ಈ ಸಮಸ್ಯೆ

How Harmful Are Plastic Straws: ಈ ಪ್ಲಾಸ್ಟಿಕ್ ಸ್ಟ್ರಾ  ಪರಿಸರಕ್ಕೆ ಎಷ್ಟು ಹಾನಿಕಾರಕವೋ ಆರೋಗ್ಯಕ್ಕೂ ಅಷ್ಟೇ ಮಾರಕ. ಎಳನೀರನ್ನು ಪ್ಲಾಸ್ಟಿಕ್ ಸ್ಟ್ರಾ ಬಳಸಿ ಕುಡಿದರೆ  ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

Written by - Ranjitha R K | Last Updated : Jan 19, 2023, 12:47 PM IST
  • ಎಳನೀರು ಬಾಯಿಗೂ ರುಚಿ, ಜೀವಕ್ಕೂ ಸಂಪು.
  • ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ.
  • ಪ್ಲಾಸ್ಟಿಕ್ ಸ್ಟ್ರಾಗಳ ಅನಾನುಕೂಲತೆಗಳು
ಎಳನೀರು ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾ ಬಳಸಿದರೆ ಎದುರಾಗುವುದು ಈ ಸಮಸ್ಯೆ  title=

How Harmful Are Plastic Straws : ಎಳನೀರು ಬಾಯಿಗೂ ರುಚಿ, ಜೀವಕ್ಕೂ ಸಂಪು. ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ. ಆದರೆ ಎಳನೀರು ಕುಡಿಯಲು ಬಹುತೇಕ ಮಂದಿ ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಾರೆ. ಈ ಪ್ಲಾಸ್ಟಿಕ್ ಸ್ಟ್ರಾ  ಪರಿಸರಕ್ಕೆ ಎಷ್ಟು ಹಾನಿಕಾರಕವೋ ಆರೋಗ್ಯಕ್ಕೂ ಅಷ್ಟೇ ಮಾರಕ. ಎಳನೀರನ್ನು ಪ್ಲಾಸ್ಟಿಕ್ ಸ್ಟ್ರಾ ಬಳಸಿ ಕುಡಿದರೆ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ಪ್ಲಾಸ್ಟಿಕ್ ಸ್ಟ್ರಾಗಳ ಅನಾನುಕೂಲತೆಗಳು
ದೇಹ ಸೇರುತ್ತವೆ ರಾಸಾಯನಿಕ ವಸ್ತುಗಳು :
ಪ್ಲಾಸ್ಟಿಕ್ ವಸ್ತುಗಳನ್ನು ಅನೇಕ ಹಾನಿಕಾರಕ ರಾಸಾಯನಿಕಗಳ ಸಹಾಯದಿಂದ ತಯಾರಿಸಲಾಗುತ್ತದೆ. ಈ ವಸ್ತುಗಳು ಶಾಖದ ಸಂಪರ್ಕಕ್ಕೆ ಬಂದಾಗ, ಅದರ ರಾಸಾಯನಿಕಗಳು ಹೊರಬರುತ್ತವೆ. ಎಳನೀರು ಕುಡಿಯುವಾಗ, ಈ ರಾಸಾಯನಿಕಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ.  ಇದು ತುಂಬಾ ಅಪಾಯಕಾರಿ. ಈ ರಾಸಾಯನಿಕಗಳು ಹಾರ್ಮೋನ್ ಮಟ್ಟದಲ್ಲಿ ಕೆಟ್ಟ ಪರಿಣಾಮ ಬೀರಿ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ : Hair Care : ಖಾಲಿ ಹೊಟ್ಟೆಯಲ್ಲಿ ಈ ಡ್ರೈಫ್ರೂಟ್ಸ್‌ ಸೇವಿಸಿದರೆ, ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತದೆ!

ಹಲ್ಲುಗಳಿಗೆ ಹಾನಿ :
ಪ್ಲಾಸ್ಟಿಕ್ ಸ್ಟ್ರಾಗಳ ಸಹಾಯದಿಂದ ಯಾವುದೇ ಪಾನೀಯವನ್ನು ಸೇವಿಸಿದಾಗ, ಅದರ ಹಾನಿಕಾರಕ ಸಂಯುಕ್ತಗಳು ನಮ್ಮ ಹಲ್ಲು ಮತ್ತು ದಂತಕವಚವನ್ನು ಸ್ಪರ್ಶಿಸುತ್ತವೆ. ಇದು ಹಲ್ಲುಗಳಲ್ಲಿ ಹುಳುಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹಲ್ಲುಗಳು ದುರ್ಬಲವಾಗುತ್ತವೆ ಮಾತ್ರವಲ್ಲ, ಅಸಹನೀಯ ನೋವು  ಕಾಣಿಸಿಕೊಳ್ಳುತ್ತದೆ. 

ತೂಕ ಹೆಚ್ಚಾಗುವ ಅಪಾಯ :
ಪ್ಲಾಸ್ಟಿಕ್ ಸ್ಟ್ರಾ ವಾಸನೆ ಕೂಡಾ ಕೆಟ್ಟದಾಗಿರುತ್ತದೆ. ಸ್ಟ್ರಾ  ತಯಾರಿಸುವಾಗ ಬಳಸುವ ರಾಸಾಯನಿಕವೇ ಈ ವಾಸನೆಗೆ ಕಾರಣ. ಎಳ ನೀರು ಅಥವಾ ಇತರ ಜ್ಯೂಸ್ ಅನ್ನು  ಸ್ಟ್ರಾ ಮೂಲಕ ಸೇವಿಸುವಾಗ ರಾಸಾಯನಿಕಗಳ ಕಾರಣ ಹೆಚ್ಚು ಹಸಿವಾಗಲುಆರಂಭವಾಗುತ್ತದೆ. ಹೀಗಾದಾಗ ಹೆಚ್ಚು ಆಹಾರವನ್ನು ಸೇವಿಸುತ್ತೀರಿ. ಇದು ಕ್ರಮೇಣ ತೂಕ ಹೆಚ್ಚಲು ಕಾರಣವಾಗುತ್ತದೆ. 

ಇದನ್ನೂ ಓದಿ : ಲೈಂಗಿಕ ಕ್ರಿಯೆ ನಡೆಸಲು ಗಂಡು/ಹೆಣ್ಣಿಗೆ ಸರಿಯಾದ ವಯಸ್ಸು ಎಷ್ಟು ಗೊತ್ತಾ..!

ತುಟಿಗಳಿಗೆ ಹಾನಿ :
ಎಳನೀರನ್ನು ಸ್ಟ್ರಾ ಮೂಲಕ ಕುಡಿಯುವಾಗ, ಅದನ್ನು ಬೇಗ ಬೆಗನೇ ಕುಡಿಯಲು ಪ್ರಯತ್ನಿಸುತ್ತೇವೆ. ಅದರ ಕೆಟ್ಟ ಪರಿಣಾಮ ತುಟಿಗಳ ಮೇಲೆ ಬೀಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬೇಗನೆ ವಯಸ್ಸಾದ ಲಕ್ಷಣಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪರಿಹಾರಗಳನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News