Hair Care : ಖಾಲಿ ಹೊಟ್ಟೆಯಲ್ಲಿ ಈ ಡ್ರೈಫ್ರೂಟ್ಸ್‌ ಸೇವಿಸಿದರೆ, ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತದೆ!

Hair Care Tips : ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಜೊತೆಗೆ ಕೂದಲಿನ ಆರೈಕೆಯೂ ಬಹಳ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರ ಕೂದಲು ಅವರ ವಯಸ್ಸಿಗೆ ಮುಂಚೆಯೇ ಬಿಳಿಯಾಗಲು ಪ್ರಾರಂಭಿಸುತ್ತದೆ.

Written by - Channabasava A Kashinakunti | Last Updated : Jan 18, 2023, 11:12 PM IST
  • ಕೂದಲಿನ ಆರೈಕೆಯೂ ಬಹಳ ಮುಖ್ಯವಾಗಿದೆ
  • ಜನರ ಕೂದಲು ವಯಸ್ಸಿಗೆ ಮುಂಚೆಯೇ ಬಿಳಿಯಾಗಲು ಪ್ರಾರಂಭ
  • ಉತ್ತಮ ಕೂದಲು ಬೆಳವಣಿಗೆಗೆ ಬಾದಾಮಿ ಸೇವನೆ
Hair Care : ಖಾಲಿ ಹೊಟ್ಟೆಯಲ್ಲಿ ಈ ಡ್ರೈಫ್ರೂಟ್ಸ್‌ ಸೇವಿಸಿದರೆ, ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತದೆ! title=

Hair Care Tips : ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಜೊತೆಗೆ ಕೂದಲಿನ ಆರೈಕೆಯೂ ಬಹಳ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರ ಕೂದಲು ಅವರ ವಯಸ್ಸಿಗೆ ಮುಂಚೆಯೇ ಬಿಳಿಯಾಗಲು ಪ್ರಾರಂಭಿಸುತ್ತದೆ. ಹೀಗಾಗಿ, ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಇಂತಹ ಪರಿಸ್ಥಿತಿಯಲ್ಲಿ ಕೂದಲು ಉದ್ದವಾಗಲು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಅನ್ನು ಆಹಾರದಲ್ಲಿ ಸೇವಿಸಬೇಕು. ಅವುಗಳು ಯಾವವು?

ಉತ್ತಮ ಕೂದಲು ಬೆಳವಣಿಗೆಗೆ ಬಾದಾಮಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ, ಆದ್ದರಿಂದ ನೆನೆಸಿದ ಬಾದಾಮಿಯನ್ನು ಪ್ರತಿದಿನ ತಿನ್ನಬೇಕು.

ವಾಲ್‌ನಟ್ಸ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ನಿಮ್ಮ ಕೂದಲು ನಿರ್ಜೀವ ಮತ್ತು ದುರ್ಬಲವಾಗಿದ್ದರೆ, ನೀವು ಪ್ರತಿದಿನ ವಾಲ್‌ನಟ್ಸ್ ಸೇವಿಸಬೇಕು.

ಹಲಸಿನ ಬೀಜಗಳನ್ನು ಸೇವಿಸುವುದು ಕೂದಲಿಗೆ ತುಂಬಾ ಒಳ್ಳೆಯದು. ಇದಕ್ಕೆ ನೀವು ಹಲಸಿನ ಬೀಜಗಳನ್ನು ಪುಡಿಮಾಡಿ ನೀರಿನಲ್ಲಿ ಬೆರೆಸಿ ಅಥವಾ ಸಲಾಡ್‌ನಲ್ಲಿ ಹಲಸಿನ ಬೀಜಗಳನ್ನು ಬೆರೆಸಿ ಸೇವಿಸಬಹುದು.

ಗೋಡಂಬಿ ಸೇವಿಸುವುದರಿಂದ ಕೂದಲು ದಟ್ಟವಾಗಿ ಕಪ್ಪಾಗುತ್ತದೆ. ಅದಕ್ಕೆ, ಪ್ರತಿದಿನ 5 ಗೋಡಂಬಿಗಳನ್ನು ಸೇವಿಸಿ.

ಪಿಸ್ತಾ ತಿನ್ನುವುದು ನಿಮ್ಮ ಇಡೀ ದೇಹಕ್ಕೆ ಪ್ರಯೋಜನಕಾರಿ, ಆದರೆ ನೀವು ಪ್ರತಿದಿನ 5 ಪಿಸ್ತಾ ಸೇವಿಸಿದರೆ, ನಿಮಗೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News