ಬೆಂಗಳೂರು : Artificial Ripening Of Mangoes : ಸಿಹಿ,ರಸಭರಿತ ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಹಣ್ಣುಗಳ ರಾಜ ಮಾವು ರಾಸಾಯನಿಕಗಳ ಪ್ರಭಾವಕ್ಕೆ ಒಳಗಾಗಿದೆ.ಮಾವು ಬೇಗನೆ ಹಣ್ಣಾಗಲು ಮತ್ತು ರಸಭರಿತವಾಗಿ ಕಾಣಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ.ಈ ರಾಸಾಯನಿಕಗಳು  ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾವಿನ ಹಣ್ಣುಗಳನ್ನು ಖರೀದಿಸುವಾಗ, ರಾಸಾಯನಿಕ ಮುಕ್ತ ಮಾವಿನಹಣ್ಣುಗಳನ್ನು ಗುರುತಿಸುವುದು ಬಹಳ ಮುಖ್ಯ. ಏಕೆಂದರೆ ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳಲ್ಲಿ  ಹೆಚ್ಚಾಗಿ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವನ್ನು ಹೊಂದಿರುತ್ತವೆ.ಇದು ಹೊಟ್ಟೆಯ ಗ್ಯಾಸ್, ಹೊಟ್ಟೆ ಉಬ್ಬರ, ಮತ್ತು ಅತಿಸಾರಕ್ಕೆ ಕಾರಣವಾಗಬಹುದು.


COMMERCIAL BREAK
SCROLL TO CONTINUE READING

ಅನೇಕ ಅಧ್ಯಯನಗಳ ಪ್ರಕಾರ, ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣಿನ ಅತಿಯಾದ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.ಈ ಮಾವಿನಹಣ್ಣುಗಳು ಕಡಿಮೆ ಮಟ್ಟದ ವಿಟಮಿನ್‌ಗಳು ಮತ್ತು ಖನಿಜಗಳನ್ನು ಹೊಂದಿರಬಹುದು ಮತ್ತು ಹೆಚ್ಚಿನ ಪ್ರಮಾಣದ ಹಾನಿಕಾರಕ ವಿಷವನ್ನು ಹೊಂದಿರಬಹುದು. ಇದು ಹೃದ್ರೋಗ, ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು.ಕೆಲವೊಮ್ಮೆ ಕೀಟನಾಶಕಗಳಿಂದ ಚರ್ಮದ ಅಲರ್ಜಿಯ ಅಪಾಯವೂ ಕಾಡುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣಿಗೆ ಹೋಲಿಸಿದರೆ ರಾಸಾಯನಿಕವಾಗಿ ಮಾಗಿದ ಮಾವಿನಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳ ಪ್ರಮಾಣ ಕಡಿಮೆ. ಮಾವಿನ ಹಣ್ಣುಗಳನ್ನು ರಾಸಾಯನಿಕವಾಗಿ ಮಾಗಿಸಲಾಗಿದೆಯೇ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. 


ಇದನ್ನೂ ಓದಿ : ರಾತ್ರಿ ಊಟದ ಬಳಿಕ ಚಿಟಿಕೆಯಷ್ಟು ಜೀರಿಗೆ ಸೇವಿಸಿದರೆ ಸಿಗುವ ಪ್ರಯೋಜನ ಅಷ್ಟಿಷ್ಟಲ್ಲ


1.ಬಣ್ಣದಿಂದ ಗುರುತಿಸಿ : 
ಸಾಮಾನ್ಯವಾಗಿ ಎಲ್ಲರೂ ಮಾವಿನ ಹಣ್ಣಿನ ಬಣ್ಣ ನೋಡಿಯೇ ಖರೀದಿಸಲಾಗುತ್ತದೆ.ಈ ಬಣ್ಣದಿಂದಲೇ ರಾಸಾಯನಿಕವನ್ನು ಕಂಡುಹಿಡಿಯಬಹುದು.ಮಾವು ನೈಸರ್ಗಿಕವಾಗಿ ಹಣ್ಣಾಗಿದ್ದರೆ ಅದರ ಬಣ್ಣ ತಿಳಿ ಹಳದಿ ಮತ್ತು ಹಸಿರು ಬಣ್ಣದ್ದಾಗಿರುತ್ತದೆ. ರಾಸಾಯನಿಕ ಬಳಸಿ ಹಣ್ಣಾಗಿಸಿದ್ದರೆ   ಮಾವಿನ ಹಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದ್ರೆ ಅದರ ಮೇಲೆ ಹಸಿರು ಪ್ಯಾಚ್ ಕಾಣಿಸುತ್ತವೆ. 


2.ಗುರುತು ನೋಡಿ :
ಮಾವಿನ ಹಣ್ಣಿನ ಮೇಲಿನ ಗುರುತುಗಳು ಅದರ ರಾಸಾಯನಿಕ ಕಲಬೆರಕೆಯ ಸುಳಿವನ್ನು ನೀಡುತ್ತದೆ. ಕೆಲವು ಮಾವಿನಹಣ್ಣುಗಳ ಸಿಪ್ಪೆಯಲ್ಲಿ ನೀಲಿ, ಕಪ್ಪು ಅಥವಾ ಬಿಳಿ ಗುರುತುಗಳನ್ನು ಹೊಂದಿರುತ್ತವೆ. ಅಂತಹ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ. ಇದು ರಾಸಾಯನಿಕಗಳಿಂದಲೇ ಸಂಭವಿಸುತ್ತದೆ.


3.ಬಕೆಟ್ ಟೆಸ್ಟ್ ಮಾಡಿ : 
ಮಾವು ಖರೀದಿಸಿದ ನಂತರವೂ, ಹಲವಾರು ಸರಳ ಪರೀಕ್ಷೆಗಳನ್ನು ಮಾಡುವ ಮೂಲಕ ರಾಸಾಯನಿಕವನ್ನು ಕಂಡುಹಿಡಿಯಬಹುದು.ಮನೆಗೆ ತಂದ ಮಾವಿನ ಹಣ್ಣನ್ನೆಲ್ಲ ನೀರು ತುಂಬಿದ ಬಕೆಟ್ ಗೆ ಹಾಕಿ. ನೈಸರ್ಗಿಕವಾಗಿ ಹಣ್ಣಾಗಿರುವ ಮಾವು ನೀರಿನಲ್ಲಿ ಮುಳುಗಿ ಬಿಡುತ್ತವೆ. ಆದರೆ ರಾಸಾಯನಿಕವಾಗಿ ಹಣ್ಣಾಗಿಸಿದ ಮಾವು ನೀರಿನಲ್ಲಿ ತೇಲುತ್ತದೆ. 


ಇದನ್ನೂ ಓದಿ :   ಹೃದಯದ ಆರೋಗ್ಯವನ್ನು ಕಾಪಾಡುತ್ತೇ ಈ ಹಸಿರು ತರಕಾರಿ, ಆಹಾರದಲ್ಲಿ ಈ ರೀತಿ ಶಾಮೀಲುಗೊಳಿಸಿ!


4.ಕಟ್ ಮಾಡಿ ನೋಡಿ : 
ಮಾವನ್ನು ಕತ್ತರಿಸಿದ ನಂತರ,ತಿರುಳಿನ ಬಣ್ಣವು ಏಕರೂಪದ ಹಳದಿಯಾಗಿದ್ದರೆ ಅದು ನೈಸರ್ಗಿಕವಾಗಿ ಹಣ್ಣಾಗುತ್ತದೆ.ಮಾವಿನ ಅಂಚುಗಳು ಗಾಢವಾಗಿದ್ದರೆ ಮತ್ತು ಮಧ್ಯದಲ್ಲಿರುವ ತಿರುಳು ತಿಳಿ ಬಣ್ಣದ್ದಾಗಿದ್ದರೆ ಅದು ರಾಸಾಯನಿಕ ಬಳಕೆಯ  ಸಂಕೇತವಾಗಿದೆ.


5.ಪರಿಮಳ :
ಮಾವಿನ ಪರಿಮಳ ಬಹಳ ಮುಖ್ಯ.ರಾಸಾಯನಿಕ ಬಳಸಿ ಮಾಗಿದ ಮಾವಿನಹಣ್ಣಿನ ಪರಿಮಳ ಬಹಳ ಕಡಿಮೆ.ಕೆಲವೊಮ್ಮೆ ಸುಗಂಧವೇ ಇರುವುದಿಲ್ಲ.ಆದರೆ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ವಿಪರೀತ ಪರಿಮಳ ಹೊಂದಿರುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.