ರುಚಿ ಹೆಚ್ಚಿಸಲು ನಾವೆಲ್ಲ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತೇವೆ, ಆದರೆ ಇದು ಅಡುಗೆಗೆ ಮಾತ್ರ ಉಪಯೋಗವಿಲ್ಲ, ಇದನ್ನ ಮುಖದ ಸೌಂದರ್ಯಕ್ಕಾಗಿ ಕೂಡ ಬಳಸಬಹುದು. ಹೌದು, ಮುಖದ ಮೇಲೆ ಕಲೆಗಳನ್ನು ತೆಗೆದುಹಾಕಲು ಬೆಳ್ಳುಳ್ಳಿ ತುಂಬಾ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ-ಆಕ್ಸಿಡೆಂಟ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದು ಮುಖದ ಮೇಲಿನ ಡೆಡ್ ಸ್ಕಿನ್ ಮತ್ತೆ ಮೊಡವೆ ತೆಗೆದು ಹಾಕಲು ಬೆಳ್ಳುಳ್ಳಿ ಪೇಸ್ಟ್ ಕ್ರಿಮ್ ರೀತಿ ಕೆಲಸ ಮಾಡುತ್ತದೆ.


COMMERCIAL BREAK
SCROLL TO CONTINUE READING

ಚರ್ಮದ ಸಮಸ್ಯೆಗಳಿಗೆ ಬೆಳ್ಳುಳ್ಳಿ ಬಳಸಬಹುದು ಹೇಗೆ?


ಇದನ್ನೂ ಓದಿ : Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು


ಮೊಡವೆ ಮತ್ತು ಅದರ ಕ್ಲೇಗಳನ್ನ ಕಡಿಮೆ ಮಾಡಲು : 


ಬೆಳ್ಳುಳ್ಳಿ(Garlic)ಯನ್ನು ಕತ್ತರಿಸಿ ಅದನ್ನ ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಹಿಸುಕಿ ರಸವನ್ನು ಹೊರತೆಗೆದು ಮೊಡವೆ ಪ್ರದೇಶದ ಮೇಲೆ ಹಚ್ಚಿ.ಈ ಪೇಸ್ಟ್ ಅನ್ನು ಅಚ್ಚಿದ ನಂತರ ಸುಮಾರು 5 ರಿಂದ 10 ನಿಮಿಷಗಳ ಕಾಲ ಬಿಟ್ಟು ಆಮೇಲೆ ನೀರಿನಿಂದ ತೊಳೆದುಕೊಳ್ಳಿ. ಇದನ್ನೂ ಕೆಲವು ದಿನಗಳವರೆಗೆ ಬಳಸುವ ಮೂಲಕ ನಿಮ್ಮ ಮುಖದ ಮೊಡವೆ ಮತ್ತು ಅದರ ಕಲೆಗಳು  ಕಡಿಮೆಯಾಗುತ್ತವೆ.


ಚರ್ಮ ಸ್ವಚ್ಛಗೊಳಿಸಲು ಬೆಳ್ಳುಳ್ಳಿ : 


ಒಂದು ಮೊಗ್ಗು ಬೆಳ್ಳುಳ್ಳಿಯನ್ನು ಅರ್ಧ ಟೊಮೆಟೊ(Tomato)ದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಇದು ನಿಮ್ಮ ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Frozen Meat Side Effects: ಫ್ರಿಡ್ಜ್ ನಲ್ಲಿಟ್ಟಿರುವ ಮಾಂಸವನ್ನು ತಿನ್ನುವ ಮೊದಲು ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ


ಚರ್ಮದ ಸುಕ್ಕು ಗಟ್ಟುವ ಸಮಸ್ಯೆಗೆ ಬೆಳ್ಳುಳ್ಳಿ :


ನೀವು ಬೆಳಿಗ್ಗೆ ಜೇನುತುಪ್ಪ ಮತ್ತು ನಿಂಬೆ ರಸದ ಜೊತೆ ಬೆಳ್ಳುಳ್ಳಿ ಬೆರೆಸಿ ಸೇವಿಸಿದರೆ, ಚರ್ಮ(Skin)ದ ಸುಕ್ಕುಗಳನ್ನು ಕಡಿಮೆಯಾಗುತ್ತದೆ. ಸಿಪ್ಪೆ ತೆಗೆದು ಬೆಳ್ಳುಳ್ಳಿ ಮೊಗ್ಗು ಕತ್ತರಿಸಿ ಬೆಳಿಗ್ಗೆ ಎದ್ದ ಕೂಡಲೇ ನಿಂಬೆ ರಸ ಮತ್ತು ಜೇನುತುಪ್ಪದ ನೀರಿನ ಜೊತೆ ಸೇವಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ