Frozen Meat Side Effects: ಫ್ರಿಡ್ಜ್ ನಲ್ಲಿಟ್ಟಿರುವ ಮಾಂಸವನ್ನು ತಿನ್ನುವ ಮೊದಲು ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

Frozen Meat Side Effects:ಫ್ರಿಜ್ ನಲ್ಲಿ ಇರಿಸಿದ ಮಾಂಸವನ್ನು ತಿನ್ನುವುದರಿಂದ, ಬ್ಯಾಕ್ಟೀರಿಯಾಗಳು ಅದರೊಳಗೆ ಸೇರಿರುವ ಅಪಾಯವಿರುತ್ತದೆ.  ಹಸಿ ಮಾಂಸವನ್ನು ಯಾವಾಗಲೂ ಒಂದು ಬಾಕ್ಸ್ ನಲ್ಲಿ ಹಾಕಿ, ಫ್ರಿಜ್‌ನಲ್ಲಿ ಅತ್ಯಂತ ಕೆಳಗೆ ಅಂದರೆ ಹೆಚ್ಚು ತಂಪಾಗಿರುವ ಭಾಗದಲ್ಲಿ  ಇರಿಸಬೇಕು.

Written by - Ranjitha R K | Last Updated : Jul 24, 2021, 01:40 PM IST
  • ನೀವು ಮಟನ್ , ಚಿಕನ್ ಡೀಪ್ ಫ್ರೀಜರ್ ನಲ್ಲಿಟ್ಟು ತಿನ್ನುತ್ತೀರಾ?
  • ಫ್ರಿಜ್ ನಲ್ಲಿ ನಾನ್ ವೆಜ್ ಎಷ್ಟು ದಿನ ಇಡಬಹುದು?
  • ಫ್ರಿಜ್ ನಲ್ಲಿಟ್ಟಿದ್ದ ಆಹಾರ ಬೇಯಿಸಿದ ನಂತರ ಎಷ್ಟು ಸಮಯದೊಳಗೆ ತಿನ್ನಬೇಕು?
Frozen Meat Side Effects: ಫ್ರಿಡ್ಜ್ ನಲ್ಲಿಟ್ಟಿರುವ ಮಾಂಸವನ್ನು ತಿನ್ನುವ ಮೊದಲು ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ title=
ನೀವು ಮಟನ್ , ಚಿಕನ್ ಡೀಪ್ ಫ್ರೀಜರ್ ನಲ್ಲಿಟ್ಟು ತಿನ್ನುತ್ತೀರಾ? (photo india.com)

ನವದೆಹಲಿ : Frozen Meat Side Effects: ಮಾಂಸವನ್ನು ಕೆಡದಂತೆ ಡೀಪ್ ಫ್ರೀಜರ್‌ನಲ್ಲಿ ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಮಟನ್ , ಚಿಕನ್ ತಿನ್ನಬೇಕು ಅನ್ನಿಸಿದಾಗ ಮತ್ತೆ ಮತ್ತೆ ಮಾರುಕಟ್ಟೆಗೆ ಹೋಗುವ ಅಗತ್ಯ ಬೀಳುವುದಿಲ್ಲ.  ಫ್ರಿಡ್ಜ್ ನಲ್ಲಿಟ್ಟಿರುವ ಮಾಂಸವನ್ನು ತೆಗೆದು ತಮಗೆ ಬೇಕಾದ ಡಿಶ್ ಮಾಡಿಕೊಳ್ಳಬಹುದು. ಆದರೆ,   ಆದರೆ ಮಾಂಸವನ್ನು ಫ್ರಿಜ್ ನಲ್ಲಿ ಇಟ್ಟು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ (Side effects of frozen meat) ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.  ಮಾಂಸವನ್ನು ಫ್ರಿಜ್‌ನಲ್ಲಿ ದೀರ್ಘಕಾಲ ಇಡುವುದರಿಂದ ಅನೇಕ ಅನಾನುಕೂಲತೆಗಳಾಗುತ್ತವೆ. 

ಫ್ರಿಜ್ ನಲ್ಲಿ ಇರಿಸಿದ ಮಾಂಸವನ್ನು ತಿನ್ನುವುದರಿಂದ, ಬ್ಯಾಕ್ಟೀರಿಯಾಗಳು (Bacteria) ಅದರೊಳಗೆ ಸೇರಿರುವ ಅಪಾಯವಿರುತ್ತದೆ.  ಹಸಿ ಮಾಂಸವನ್ನು ಯಾವಾಗಲೂ ಒಂದು ಬಾಕ್ಸ್ ನಲ್ಲಿ ಹಾಕಿ, ಫ್ರಿಜ್‌ನಲ್ಲಿ ಅತ್ಯಂತ ಕೆಳಗೆ ಅಂದರೆ ಹೆಚ್ಚು ತಂಪಾಗಿರುವ ಭಾಗದಲ್ಲಿ  ಇರಿಸಬೇಕು. ಇದರಿಂದ ಅದು ಇತರ ಆಹಾರ (Food) ಪದಾರ್ಥಗಳಿಂದ ದೂರವಿರುತ್ತದೆ. ಅಲ್ಲದೆ,  ಫ್ರಿಜ್‌ನಲ್ಲಿ ಹಸಿ ಮಾಂಸವನ್ನು ಬೇಯಿಸಿದ ಪದಾರ್ಥಗಳಿಂದ ದೂರ ಇಡಬೇಕು. ಅಷ್ಟು ಮಾತ್ರವಲ್ಲ,  Frozen Meat  ಅನ್ನು ಫ್ರಿಜ್ ನಿಂದ ಹೊರ ತೆಗೆದು ಬೇಯಿಸಿದ ೨೪ ಗಂಟೆಗಳ ಒಳಗೆ ಸೇವಿಸಬೇಕು. 

ಇದನ್ನೂ ಓದಿ : Food For Strong Bones: ದುರ್ಬಲ ಮೂಳೆಗಳನ್ನು ಬಲಿಷ್ಠಗೊಳಿಸುವ ಪ್ರಮುಖ ಆಹಾರಗಳಿವು

ಮಾಂಸವನ್ನು ಫ್ರಿಜ್‌ನಲ್ಲಿ ದೀರ್ಘಕಾಲ ಇಟ್ಟುಕೊಳ್ಳುವುದರಿಂದ ಅದನ್ನು ಸೇವಿಸಿದ ನಂತರ ಫುಡ್ ಪಾಯಿಸನಿಂಗ್ (food poisoning) ಆಗುವ ಅಪಾಯ ಹೆಚ್ಚಾಗಿರುತ್ತದೆ. ಇದಲ್ಲದೆ, ಮಾಂಸವನ್ನು ಫ್ರಿಜ್ ನಲ್ಲಿ ಹಲವಾರು ದಿನಗಳವರೆಗೆ ಇಡುವುದರಿಂದ ಅದರ ರುಚಿಯೂ ಬದಲಾಗುತ್ತದೆ.

ಹಸಿ ಮಾಂಸವನ್ನು ಫ್ರಿಜ್‌ನಲ್ಲಿ ಒಂದು ದಿನಕ್ಕಿಂತ ಹೆಚ್ಚು ಸಮಯದವರೆಗೆ ಇಡಬಾರದು. ಬೇಯಿಸಿದ ಮಾಂಸವನ್ನು ಫ್ರಿಜ್ ನಲ್ಲಿ ಇಡಬಹುದು. ಆದರೆ  ಅದನ್ನು ಫ್ರಿಜ್ ನಲ್ಲಿಡುವಾಗ ಅದು ಬಿಸಿಯಾಗಿರಬಾರದು  ಎನ್ನುವುದು ನೆನಪಿರಲಿ. 

ಇದನ್ನೂ ಓದಿ : How To Remove Unwanted Facial Hairs: ಮುಖದ ಮೇಲಿನ ಅನಗತ್ಯ ಕೂದಲಿನ ಚಿಂತೆ ಬಿಡಿ, ಇದನ್ನೊಮ್ಮೆ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News