ನಿಮ್ಮ ಆರೋಗ್ಯ ಹೇಗಿದೆ ಅಂತ ನಿಮ್ಮ ಚರ್ಮವೇ ಹೇಳುತ್ತದೆ! ಹೇಗೆ ಗೊತ್ತಾ?
ಚರ್ಮವು ನಿಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿ
ಚರ್ಮವು ನಿಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದ್ದು, ಒತ್ತಡದ ಬದುಕು ಕೂಡ ಚರ್ಮದ ಸಮಸ್ಯೆಯನ್ನುಂಟು ಮಾಡುತ್ತದೆ. ಕೊರೋನಾ ಸಾಂಕ್ರಾಮಿಕ ಸಂದರ್ಭ ದಲ್ಲಿ ಆರ್ಥಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು, ಸಾಕಷ್ಟು ಜನರು ಒತ್ತಡದಲ್ಲಿಯೇ ಜೀವನ ನಡೆಸುವಂತಾಗಿ ಹೋಗಿದೆ.
ವ್ಯಕ್ತಿಯೊಬ್ಬ ಒತ್ತಡಕ್ಕೊಳಗಾದಾಗ ದೇಹದ ಹಾರ್ಮೋನ್ ನಲ್ಲಿಯೂ ಏರುಪೇರಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಒತ್ತಡದಿಂದ ಮನುಷ್ಯನಿಗೆ ಎದುರಾಗುವ ಚರ್ಮ(Skin) ಸಮಸ್ಯೆಗಳು ಈ ಕೆಳಕಂಡಂತಿವೆ...
ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover
ದದ್ದುಗಳಾಗುವುದು: ದದ್ದುಗಳ ಲಕ್ಷಣಗಳು ಕೆಲವು ನಿಮಿಷಗಳ ಕಾಲ ಇರಬಹುದು. ದೀರ್ಘಕಾಲದ ದದ್ದುಗಳಾದರೆ ಆಗ ಲಕ್ಷಣಗಳು ತಿಂಗಳುಗಳ ಅಥವಾ ವರ್ಷಗಳ ತನಕ ಇರಬಹುದು.ಕೆಲ ಔಷಧಿಗಳು, ಆಹಾರ, ಹಾಗೂ ಒತ್ತಡದಿಂದಾಗಿ ಚರ್ಮದಲ್ಲಿ ಈ ಸಮಸ್ಯೆಯುಂಟಾಗುತ್ತದೆ. ಈ ದದ್ದು ಸಮಸ್ಯೆಗಳಾದಾಗ ನವೆಯಾಗುವುದು, ದದ್ದಾಗಿರುವ ಭಾಗದಲ್ಲಿ ಚರ್ಮ ಕೆಂಪಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು 24 ಗಂಟೆಗಳಲ್ಲಿ ವಾಸಿಯಾಗುವುದುಂಟು. ಕೆಲವೊಮ್ಮೆ ದದ್ದುಗಳು ಬಣ್ಣ ಹಾಗೂ ಗಾತ್ರಗಳನ್ನು ಬದಲಾಯಿಸುವುದುಂಟು.
ಚಳಿಗಾಲದಲ್ಲಿ ಕಡ್ಡಾಯವಾಗಿ ತಿನ್ನಬೇಕು 'ಮೂಲಂಗಿ'! ಯಾಕೆ ಗೊತ್ತಾ?
ನಿರ್ಜಲೀಕರಣ ಮತ್ತು ಕಾಂತಿಹೀನ ಚರ್ಮ: ವಿಶ್ರಾಂತಿಯಿಲ್ಲದೆ ಸುದೀರ್ಘವಾಗಿ ಕೆಲಸ ಮಾಡುವುದು, ಸೂಕ್ತ ಸಮಯಕ್ಕೆ ನಿದ್ರೆ ಮಾಡದಿರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೆಲಸದ ಒತ್ತಡದಲ್ಲಿ ದೇಹಕ್ಕೆ ಅಗತ್ಯವಿರುವ ನೀರು, ಆರೋಗ್ಯಕರ ಆಹಾರ ಹಾಗೂ ಆರೋಗ್ಯಕರ ರೀತಿಯಲ್ಲಿ ನಿದ್ರೆ ಮಾಡುವುದನ್ನೇ ಮರೆ ಹೋಗಿದ್ದಾರೆ. ಇದರಿಂದ ಚರ್ಮದ ಕಾಂತಿ ಕೂಡ ಕುಂದುತ್ತಿದೆ.
ಈ ಮನೆಮದ್ದು ಬಳಸಿ Kidney Stone ಸಮಸ್ಯೆಯನ್ನು ನಿವಾರಿಸಿ
ಈ ಸಮಸ್ಯೆಯಿಂದ ದೂರ ಉಳಿಯಲು ಹೆಚ್ಚೆಚ್ಚು ನೀರು ಹಾಗೂ ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ಸೂಕ್ತ ರೀತಿಯಲ್ಲಿ ಸಮತೋಲಿತ ಆಹಾರ ಸೇವನೆಯಿಂದ ಚರ್ಮದ ಕಾಂತಿಯನ್ನು ಮತ್ತೆ ಪಡೆಯಬಹುದಾಗಿದೆ. ಪ್ರತಿನಿತ್ಯ 8-10 ಲೀಟರ್ ನೀರನ್ನು ಕುಡಿಯಲು ಪ್ರಯತ್ನಿಸಿ. ಪ್ರತೀ ರಾತ್ರಿ 8 ಗಂಟೆಗಳು ನಿದ್ರೆ ಮಾಡುವುದು ಆರೋಗ್ಯವನ್ನು ಉತ್ತಮವಾಗಿರುವಂತೆ ಮಾಡುತ್ತದೆ.
ಹಲವು ರೋಗಗಳಿಗೆ ರಾಮಬಾಣ ಚಿಕಿತ್ಸೆ Marigold Flower, ಇಲ್ಲಿವೆ 10 ಲಾಭಗಳು
ರೊಸಾಸಿಯಾ (ಮುಖದಲ್ಲಿ ಮೊಡವೆ ರೀತಿಯ ಗುಳ್ಳೆ): ಹದಿಹರೆಯದ ವಯಸ್ಸಿನಲ್ಲಿ ಮೊಡವೆ ಸಮಸ್ಯೆಗಳು ಬರುವುದು ಸಾಮನ್ಯ. ಆದರೆ ಕೆಲವರಲ್ಲಿ ಮುಖದಲ್ಲಿ ಕೆಂಪು-ಕೆಂಪು ಗುಳ್ಳೆಗಳು ಏಳುತ್ತವೆ, ಅವುಗಳು ಕೂಡ ನೋಡಲು ಮೊಡವೆ ರೀತಿಯಲ್ಲಿ ಇರುವುದರಿಂದ ನಾವು ಅದನ್ನು ಮೊಡವೆ ಎಂದೇ ಭಾವಿಸುತ್ತೇವೆ. ಆದರೆ ಮೊಡವೆ ರೀತಿಯಲ್ಲಿ ಕಾಣುವ ಅವುಗಳು ಮೊಡವೆಯಲ್ಲ, ಬದಲಿಗೆ ಅವುಗಳು ರೊಸಾಸಿಯಾ(Rosacea) ಆಗಿರುತ್ತವೆ.
Breastfeeding ಮಾಡುವ ತಾಯಿಗೆ ಈ ಆಹಾರಗಳು ಅತ್ಯಗತ್ಯ, ಮಗುವಿಗೆ ಸಹ ಪ್ರಯೋಜನಕಾರಿ
ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು. ಕೆಲವೊಂದು ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು. ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು.
ನೀವು Weight ಕಡಿಮೆ ಮಾಡಲು ಬಯಸಿದರೆ ಈ ತರಕಾರಿಗಳಿಂದ ದೂರವಿರಿ
ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಕೆಲ ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು. ಸೂರ್ಯನ ಬೆಳಕಿಗೆ ಹೆಚ್ಚು ಹೋಗದಂತೆ, ಧೂಳು ಬೀಳದಂತೆ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಮಾಡದೆ, ಸಾವಯವ ಆಹಾರ ಹೆಚ್ಚಾಗಿ ಸೇವನೆ ಮಾಡುವ ಮೂಲಕ ಹಾಗೂ ದಿನದಲ್ಲಿ 8 ತಾಸು ನಿದ್ದೆ, ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ.
ನಿಮಗೂ Throat Infection ಸಮಸ್ಯೆ ಇದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ
ಇಸುಬು (ಎಸ್ಜಿಮಾ): ಮನುಷ್ಯನ ದೇಹದಲ್ಲಿ ಅತಿ ದೊಡ್ಡ ಅವಯವ (ಅಂಗ) ಚರ್ಮ. ಇದು ದೇಹದ ಹೊರ ಭಾಗಗಳನ್ನು ಕಾಪಾಡುವ ರಕ್ಷಣಾ ಕವಚ. ಆದರೆ ಅಂಥ ರಕ್ಷಣಾ ಕವಚಕ್ಕೆ ಅನೇಕ ರೀತಿಯ ಸೋಂಕು ಉಂಟಾಗುವುದು ಸಹಜ. ಇವುಗಳ ಪೈಕಿ ಎಸ್ಜಿಮಾ (ಇಸುಬು) ಕೂಡ ಒಂದು. ಒಂದು ಅಧ್ಯಯನದ ಪ್ರಕಾರ ಪ್ರಪಂಚದಲ್ಲಿ ಅಂದಾಜು 230 ಮಿಲಿಯನ್‌ನಷ್ಟು ಜನರು ಎಸ್ಜಿಮಾದಿಂದ ಬಳಲುತ್ತಿದ್ದಾರೆ.
ನೋಟಿನ ಬಳಕೆ ಮೂಲಕ ಕೊರೊನಾ ಹರಡುತ್ತಾ? ಇಲ್ಲಿದೆ ಮಹತ್ವದ ಸಂಗತಿ
ಎಸ್ಜಿಮಾ ಅಂದರೆ ಚರ್ಮವು ಉರಿಯೂತಕ್ಕೆ ಗುರಿಯಾಗುವುದರಿಂದ ಆ ಭಾಗದ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿ ನವೆ ಶುರುವಾಗುವುದು. ಅವು ಕ್ರಮೇಣ ನೀರಿನ ಗುಳ್ಳೆಗಳಾಗಿ ಮಾರ್ಪಾಡಾಗಿ ಅವುಗಳಿಂದ ದ್ರವ ಪದಾರ್ಥ ಸೋರುತ್ತದೆ. ಆನಂತರ ಈ ಭಾಗವೆಲ್ಲ ಮಚ್ಚೆಯಾಗಿ ಕಾಣಿಸಿಕೊಳ್ಳುವುದಕ್ಕೆ ಎಸ್ಜಿಮಾ ಎನ್ನುತ್ತಾರೆ. ಎಸ್ಜಿಮಾದಲ್ಲಿ ಎಷ್ಟೋ ವಿಧಗಳಿದ್ದರೂ ಸಾಮಾನ್ಯವಾಗಿ 'ಅಟೊಪಿಕ್ ಡರ್ಮಟೈಟಿಸ್' ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಚಿಕ್ಕಮಕ್ಕಳಲ್ಲಿ ಶೇ.65 ಮತ್ತು ದೊಡ್ಡವರಲ್ಲಿ ಶೇ.85ರಷ್ಟು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಜೀವನದುದ್ದಕ್ಕೂ ಇರುತ್ತದೆ.
Alert...! ಸಿಗರೇಟ್ ಸೇದುವ ಚಟ ಇರುವವರು ಈ ಸಂಶೋಧನಾ ವರದಿ ತಪ್ಪದೆ ಓದಿ
ಮುಖ್ಯವಾಗಿ ಒಣ ಚರ್ಮವಿರುವವರಲ್ಲಿ ಎಸ್ಜಿಮಾ ಹೆಚ್ಚಾಗಿ ಕಂಡುಬರುತ್ತದೆ. ಧೂಳು, ವಾತಾವರಣದಲ್ಲಿ ಬದಲಾವಣೆ, ಹೂವಿನ ಪರಾಗ, ಸೋಪು, ಡಿಟರ್ಜೆಂಟ್, ಕೆಲವು ಆಹಾರ ಪದಾರ್ಥ (ಉದಾ: ಕೆಲವು ಹಣ್ಣು, ತರಕಾರಿಗಳು), ಹಾಲಿನ ಉತ್ಪನ್ನಗಳು, ಮೊಟ್ಟೆ, ಸೋಯಾ, ಸೌಂದರ್ಯ ಸಾಧನ ಸಾಮಗ್ರಿ, ಕೈಗಡಿಯಾರಗಳು, ಕೆಲವು ಆಭರಣಗಳು, ಸುಗಂಧ ದ್ರವ್ಯಗಳು, ಬೆವರು, ಉಣ್ಣೆ ಉಡುಪು ಮತ್ತು ಕೆಲವು ನವೆ ಉಂಟು ಮಾಡುವ ವಸ್ತುಗಳು ಕೂಡ ಎಸ್ಜಿಮಾವನ್ನು ಪ್ರೇರೇಪಿಸುತ್ತದೆ. ಕೆಲವು ವಿಧದ ಬ್ಯಾಕ್ಟೀರಿಯಾ, ವೈರಸ್, ಫಂಗಸ್‌ನಂತಹ ಅಂಶಗಳು, ಮಾನಸಿಕ ಒತ್ತಡ ಮತ್ತು ಹಾರ್ಮೋನ್ ವ್ಯತ್ಯಾಸ ಕೂಡ ಎಸ್ಜಿಮಾ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಇಂತಹ ಸಮಸ್ಯೆ ಎದುರಾದಾಗ ಚರ್ಮ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.