ಚಳಿಗಾಲದಲ್ಲಿ ಕಡ್ಡಾಯವಾಗಿ ತಿನ್ನಬೇಕು 'ಮೂಲಂಗಿ'! ಯಾಕೆ ಗೊತ್ತಾ?

ವಿಶೇಷ ರಕ್ಷಣೆಯನ್ನು ನೀಡುವ ತರಕಾರಿಗಳಲ್ಲಿ ಮೂಲಂಗಿಯೂ ಒಂದು

Last Updated : Nov 29, 2020, 05:31 PM IST
  • ವಿಶೇಷ ರಕ್ಷಣೆಯನ್ನು ನೀಡುವ ತರಕಾರಿಗಳಲ್ಲಿ ಮೂಲಂಗಿಯೂ ಒಂದು
  • ಮಧುಮೇಹದ ಅಪಾಯ ಕಡಿಮೆ ಮಾಡುವುದು
  • ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ
ಚಳಿಗಾಲದಲ್ಲಿ ಕಡ್ಡಾಯವಾಗಿ ತಿನ್ನಬೇಕು 'ಮೂಲಂಗಿ'! ಯಾಕೆ ಗೊತ್ತಾ? title=

ಇದೀಗ ಸರಿಯಾಗಿ ಚಳಿಗಾಲದ ಆರಂಭವಾಗಿದೆ. ಇಂತಹ ಸಮಯದಲ್ಲಿ ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಅವಶ್ಯವಾಗಿ ಸವಿಯಬೇಕು. ಅವು ನಮ್ಮ ದೇಹದ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಯಾವುದೇ ಸೋಂಕು ತಗುಲದಂತೆ ರಕ್ಷಿಸುತ್ತವೆ. ಅಂತಹ ವಿಶೇಷ ರಕ್ಷಣೆಯನ್ನು ನೀಡುವ ತರಕಾರಿಗಳಲ್ಲಿ ಮೂಲಂಗಿಯೂ ಒಂದು.

ಮಧುಮೇಹದ ಅಪಾಯ ಕಡಿಮೆ ಮಾಡುವುದು: ಮೂಲಂಗಿ(Radish)ಯಲ್ಲಿ ರಾಸಾಯನಿಕ ಸಂಯುಕ್ತಗಳಿವೆ. ಅವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು. ಗಣನೀಯವಾಗಿ ಮೂಲಂಗಿಯನ್ನು ಸೇವಿಸುವುದರಿಂದ ನೈಸರ್ಗಿಕ ಅಡಿಪೋನೆಕ್ಟಿನ್ ಅನ್ನು ಉತ್ಪಾದಿಸುವುದು. ಇದು ಇನ್ಸುಲಿನ್‍ಅನ್ನು ಪ್ರಚೋದಿಸುವುದರ ಮೂಲಕ ಮಧುಮೇಹದ ರಚನೆಯನ್ನು ನಿಯಂತ್ರಿಸುವುದು.

ಈ ಮನೆಮದ್ದು ಬಳಸಿ Kidney Stone ಸಮಸ್ಯೆಯನ್ನು ನಿವಾರಿಸಿ

ಹೃದಯದ ಆರೋಗ್ಯವನ್ನು ಸುಧಾರಿಸುವುದು: ಮೂಲಂಗಿಯಲ್ಲಿ ಆಂಟಿಆಕ್ಸಿಡೆಂಟ್‍ಗಳು, ಕ್ಯಾಲ್ಸಿಯಮ್, ಪೊಟ್ಯಾಸಿಯಮ್ ಸೇರಿದಂತೆ ಇನ್ನಿತರ ಖನಿಜಾಂಶಗಳು ಸಮೃದ್ಧವಾಗಿರುತ್ತವೆ. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಮೂಲಂಗಿ ರಕ್ತದ ಹರಿವನ್ನು ಸುಧಾರಿಸುವ ನೈಸರ್ಗಿಕ ನೈಟ್ರೇಟ್‍ಗಳ ಉತ್ತಮ ಮೂಲವಾಗಿದೆ.

ಹಲವು ರೋಗಗಳಿಗೆ ರಾಮಬಾಣ ಚಿಕಿತ್ಸೆ Marigold Flower, ಇಲ್ಲಿವೆ 10 ಲಾಭಗಳು

ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ: ಮೂಲಂಗಿಯಲ್ಲಿ ಸಾಕಷ್ಟು ಪ್ರಮಾಣದ ಗ್ಲುಕೋಸಿನೊಲೇಟ್‍ಗಳು ಮತ್ತು ಸಲ್ಫರ್ ಸಂಯುಕ್ತಗಳಿವೆ. ಇದು ಕ್ಯಾನ್ಸರ್ ಉಂಟುಮಾಡುವ ಆನುವಂಶಿಕ ರೂಪಾಂತರಗಳಿಂದ ಕೋಶಗಳನ್ನು ರಕ್ಷಿಸುವ ಸಾಮಥ್ರ್ಯವನ್ನು ಪಡೆದಿದೆ. ಇದು ಕ್ಯಾನ್ಸರ್ ಗಡ್ಡೆ ಬೆಳೆಯಲು ಪ್ರಚೋದಿಸುವ ಕೋಶಗಳ ಬೆಳವಣಿಗೆಯನ್ನು ತಡೆಯುವುದು. ಕ್ಯಾನ್ಸರ್‍ಗೆ ಕಾರಣವಾಗುವ ಅಂಶಗಳನ್ನು ದೇಹದಿಂದ ತೆಗೆದುಹಾಕಲು ಸಹಾಯ ಮಾಡುವುದು.

Breastfeeding ಮಾಡುವ ತಾಯಿಗೆ ಈ ಆಹಾರಗಳು ಅತ್ಯಗತ್ಯ, ಮಗುವಿಗೆ ಸಹ ಪ್ರಯೋಜನಕಾರಿ

ಜೀರ್ಣಕ್ರಿಯೆಗೆ ಸಹಾಯ ಮಾಡುವುದು: ಮೂಲಂಗಿಯಲ್ಲಿ ನೈಸರ್ಗಿಕವಾಗಿಯೇ ಅಧಿಕ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುವುದು. ಜೊತೆಗೆ ದೇಹದಲ್ಲಿ ಇರುವ ತ್ಯಾಜ್ಯವನ್ನು ಕರುಳಿನ ಮೂಲಕ ಹೊರ ಹಾಕಲು ಸಹಾಯ ಮಾಡುವುದು. ಇದರ ಸೇವನೆಯು ಮಲಬದ್ಧತೆಯನ್ನು ನಿವಾರಿಸುವುದು. ಪಿತ್ತಕೋಶದಿಂದ ಪಿತ್ತರಸವನ್ನು ಸಮತೋಲನದಲ್ಲಿ ಸ್ರವಿಸುವಂತೆ ಮಾಡುವುದು. ಹಕೃತ್‍ನ ರೋಗ್ಯವನ್ನು ಕಾಪಾಡುವುದು.

ನೀವು Weight ಕಡಿಮೆ ಮಾಡಲು ಬಯಸಿದರೆ ಈ ತರಕಾರಿಗಳಿಂದ ದೂರವಿರಿ

ಆಹಾರದಲ್ಲಿ ಮೂಲಂಗಿಯನ್ನು ಸೇರಿಸಿಕೊಳ್ಳುವುದು ಹೇಗೆ?

1. ಮೂಲಂಗಿಯನ್ನು ವಿವಿಧ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಬಹುದು. ಮೂಲಂಗಿಯನ್ನು ಬಿಳಿ ವಿನೆಗರ್, ಬೆಳ್ಳುಳ್ಳಿ, ಲವಂಗ, ಕರಿಮೆಣಸು, ಸೋಂಪು, ಕೊತ್ತಂಬರಿ ಬೀಜ ಮೆಣಸಿನಕಾಳು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಬೆರೆಸಿ ಉಪ್ಪಿನಕಾಯನ್ನು ತಯಾರಿಸಿಕೊಳ್ಳಬಹುದು.

2. ಮೂಲಂಗಿಯ ಸೊಪ್ಪು ಮತ್ತು ಮೂಲಂಗಿಯನ್ನು ತಾಜಾ ಸಲಾಡ್‍ಗಳ ರೂಪದಲ್ಲಿ ಸವಿಯಬಹುದು.

3. ಲೆಟಿಸ್ ಮತ್ತು ಮೂಲಂಗಿಯ ತೆಳುವಾದ ಸ್ಲೈಸ್‍ಗಳನ್ನು ಬರ್ಗರ್‍ಗಳಲ್ಲಿ ಸೇರಿಸಿ ಸವಿಯಬಹುದು.

4. ಮೂಲಂಗಿಯ ಸಾಂಬಾರ್, ಪರೋಟಾ, ಪಲ್ಯ ಸೇರಿದಂತೆ ಇನ್ನಿತರ ಖಾದ್ಯಗಳ ರೂಪದಲ್ಲಿ ಸವಿಯಬಹುದು.

5. ಮೂಲಂಗಿಯ ರಸವನ್ನು ಸಹ ಕುಡಿಯಬಹುದು

6. ಮೂಲಂಗಿ ಹೋಳುಗಳನ್ನು ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯೊಂದಿಗೆ ಹುರಿದುಕೊಂಡು ತಿನ್ನಬಹುದು.

Trending News