Sleeping Tips: ರಾತ್ರಿ ಮಲಗುವಾಗ ನೀವೂ ಈ ರೀತಿಯ ಒಳಉಡುಪು ಧರಿಸುತ್ತಿದ್ದರೆ ಎಚ್ಚರ!
ಬಿಗಿಯಾದ ಒಳ ಉಡುಪುಗಳನ್ನು ಧರಿಸಿ ಮಲಗುವುದು ಪುರುಷರ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ಬೆಂಗಳೂರು: ಯಾವುದೇ ವ್ಯಕ್ತಿ ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ಬದಲಾಗುತ್ತಿರುವ ಜೀವನ ಶೈಲಿ, ಕೆಲಸದ ಒತ್ತಡ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಯಾವುದೇ ಯೋಚನೆಯಿಲ್ಲದೆ ನಿದ್ರೆ ಮಾಡುವುದು ಒಂದು ಸವಾಲಿನ ಸಂಗತಿ ಎಂದರೆ ತಪ್ಪಾಗಲಾರದು. ನಿದ್ರಾಹೀನತೆಯು ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ಹಾಗಾಗಿ ಉತ್ತಮ ಆರೋಗ್ಯ ನಿಮ್ಮದಾಗಬೇಕೆಂದರೆ ದಿನಕ್ಕೆ ಕನಿಷ್ಠ 7-8 ಗಂಟೆಗಳು ನಿದ್ರೆ ಮಾಡುವುದು ಅತ್ಯಗತ್ಯ. ಇದರ ಜೊತೆಗೆ ನಾವು ಮಲಗುವಾಗ ಎಂತಹ ಉಡುಪು ಧರಿಸುತ್ತೇವೆ ಎಂಬುದು ಕೂಡ ಮುಖ್ಯವಾಗಿದೆ.
ಹೌದು, ಕೆಲವರು ಸಡಿಲವಾದ ಉಡುಪುಗಳನ್ನು ಧರಿಸಿ ಮಲಗುತ್ತಾರೆ. ಇನ್ನೂ ಕೆಲವರು ಬಿಗಿಯಾದ ಉಡುಪು ಧರಿಸುವ ಅಭ್ಯಾಸ ಹೊಂದಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಪುರುಷರು ಬಿಗಿಯಾದ ಒಳ ಉಡುಪುಗಳನ್ನು ಧರಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಮಲಗುವಾಗ ಬಿಗಿಯಾದ ಒಳ ಉಡುಪು ಧರಿಸುವುದು ನಿಮ್ಮ ಆರೋಗ್ಯಕ್ಕೆ (Health) ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಹಲವು ಸಂಶೋಧನೆಗಳು ಇದನ್ನು ಬಹಿರಂಗಪಡಿಸಿವೆ. ಅಂತಹ ಪರಿಸ್ಥಿತಿಯಲ್ಲಿ ಪುರುಷರು ರಾತ್ರಿ ಮಲಗುವ ವೇಳೆ ಬಿಗಿಯಾದ ಒಳ ಉಡುಪುಗಳನ್ನು ಏಕೆ ಧರಿಸಬಾರದು ಎಂದು ತಿಳಿಯೋಣ...
ಇದನ್ನೂ ಓದಿ - ನಿದ್ರಾಹೀನತೆಯ ಸಮಸ್ಯೆಯನ್ನು ಒಂದು ವೇಳೆ ನೀವೂ ಎದುರಿಸುತ್ತಿದ್ದರೆ, ಈ ವರದಿಯನ್ನು ತಪ್ಪದೆ ಓದಿ
- ಇದಕ್ಕೆ ಮೊದಲ ಬಹುಮುಖ್ಯ ಕಾರಣವೆಂದರೆ ಅಧಿಕ ಬೆವರು. ಹೆಚ್ಚಾಗಿ ಬೆವರುವಿಕೆಯಿಂದ ಪುರುಷರ (Men) ಆಂತರಿಕ ಭಾಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಆ ಜಾಗದಲ್ಲಿ ಗಾಳಿಯಾಡುವುದು ಕೂಡ ಅತ್ಯಗತ್ಯ. ಇಲ್ಲದಿದ್ದರೆ ಆ ಜಾಗಗಳಲ್ಲಿ ಬ್ಯಾಕ್ಟೀರಿಯ ಉತ್ಪತ್ತಿಯಾಗುತ್ತದೆ.
- ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ದೇಹದ ಖಾಸಗಿ ಭಾಗಗಳಲ್ಲಿ ವಾಸನೆ ಬರುವುದರ ಜೊತೆಗೆ ಅಲರ್ಜಿ ಕೂಡ ಉಂಟಾಗಬಹುದು.
ಇದನ್ನೂ ಓದಿ - Home Remedies For Good Sleep: ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ನಿಮ್ಮ ಅಡುಗೆಮನೆಯಲ್ಲಿಯೇ ಇದೆ ಪರಿಹಾರ
- ಇನ್ನೊಂದು ಕಾರಣವೆಂದರೆ, ದಿನವಿಡೀ ಬಿಗಿಯಾದ ಒಳ ಉಡುಪು ಧರಿಸುವ ಪುರುಷರ ವೀರ್ಯದ ಗುಣಮಟ್ಟ ನಿರಂತರ ಒತ್ತಡ ಮತ್ತು ಹೆಚ್ಚಿನ ಉಷ್ಣತೆಯಿಂದಾಗಿ ಅಪಾಯಕ್ಕೆ ಒಳಗಾಗಬಹುದು.
- ಇದಕ್ಕೆ ಮತ್ತೊಂದು ಕಾರಣವೆಂದರೆ ಮಲಗುವಾಗ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಅದು ನಿಮಗೆ ಹಿತ ಎಂದೆನಿಸುವುದಿಲ್ಲ. ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.