ದಿನಕ್ಕೆ 9 ಗಂಟೆಗಿಂತ ಹೆಚ್ಚು ಮಲಗುವವರಿಗೆ ಬರುತ್ತಾ ಈ ತೊಂದರೆ?

ಶಾಂತಿಯುತವಾಗಿ ಮಲಗಲು ಸಾಧ್ಯವಾಗದ ಜನರು ಸಾಮಾನ್ಯವಾಗಿ ಮಲಗುವವರಿಗಿಂತ 29 ಪ್ರತಿಶತದಷ್ಟು ಆಘಾತಕ್ಕೊಳಗಾಗುತ್ತಾರೆ ಎಂದು ಸಂಶೋಧನೆ ತೋರಿಸಿದೆ.

Updated: Dec 14, 2019 , 11:01 AM IST
ದಿನಕ್ಕೆ 9 ಗಂಟೆಗಿಂತ ಹೆಚ್ಚು ಮಲಗುವವರಿಗೆ ಬರುತ್ತಾ ಈ ತೊಂದರೆ?

ಬೀಜಿಂಗ್: ದಿನಕ್ಕೆ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವ ಜನರಿಗೆ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಅಧ್ಯಯನವು ಬಹಿರಂಗಪಡಿಸಿದೆ. ವಾಸ್ತವವಾಗಿ, ರಾತ್ರಿಯಲ್ಲಿ ಒಂಬತ್ತು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಲಗುವ ಮತ್ತು ಹಗಲಿನಲ್ಲಿ ದೀರ್ಘ ನಿದ್ದೆ ಮಾಡುವ ಜನರು ಕಡಿಮೆ ನಿದ್ರೆ ಮಾಡುವವರಿಗಿಂತ 85 ಪ್ರತಿಶತದಷ್ಟು ಪಾರ್ಶ್ವವಾಯು(stroke)ವಿಗೆ ಒಳಗಾಗುತ್ತಾರೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಸಂಶೋಧಕರು ಚೀನಾದ ಹುಜೊಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಸರಾಸರಿ 62 ವರ್ಷ ವಯಸ್ಸಿನ 31,750 ಜನರನ್ನು ಅಧ್ಯಯನ ಮಾಡಿದ್ದು, ಆರು ವರ್ಷಗಳ ಕಾಲ ಅವರ ರೊಟೀನ್ ಫಾಲೋ ಅಪ್ ಮಾಡಿದ್ದಾರೆ. ಅಧ್ಯಯನದ ಆರಂಭದಲ್ಲಿ ಈ ಜನರಿಗೆ ಆಘಾತ ಅಥವಾ ಇತರ ಪ್ರಮುಖ ಆರೋಗ್ಯ ಸಮಸ್ಯೆಗಳ ಇತಿಹಾಸವಿರಲಿಲ್ಲ. ಆದರೆ ಸಂಶೋಧನೆಯ ಅವಧಿಯಲ್ಲಿ ಅವರು 1,557 ಆಘಾತ ಪ್ರಕರಣಗಳನ್ನು ಕಂಡುಕೊಂಡಿದ್ದಾರೆ  ಎಂದು ಸಂಶೋಧಕರು ಹೇಳಿದ್ದಾರೆ.

ಈ ಸಂಶೋಧನೆಯಲ್ಲಿ ಭಾಗವಹಿಸುವವರಿಗೆ ಅವರ ನಿದ್ರೆ ಮತ್ತು ಚಿಕ್ಕನಿದ್ರೆ(ಹೆಚ್ಚು ಸಮಯ ನಿದ್ರೆ ಮಾಡದಿರುವುದು) ಅಭ್ಯಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು ಮತ್ತು ಅವರು ಯಾವ ರೀತಿಯ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ ಎಂದು ಸಹ ಕೇಳಲಾಯಿತು. ನ್ಯೂರಾಲಜಿ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಎಂಟು ಪ್ರತಿಶತದಷ್ಟು ಜನರು 90 ನಿಮಿಷಗಳಿಗಿಂತ ಹೆಚ್ಚು ಕಾಲ ಮಧ್ಯಾಹ್ನ ನಿದ್ದೆ ಮಾಡುತ್ತಿರುವುದಾಗಿಯೂ ಮತ್ತು 24 ಪ್ರತಿಶತದಷ್ಟು ಜನರು ಪ್ರತಿ ರಾತ್ರಿ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚಿನ ಗಂಟೆಗಳ ಕಾಲ ಮಲಗುತ್ತಾರೆ ಎಂದು ತಿಳಿದುಬಂದಿದೆ.

ಅದರ ನಂತರ ಅಧ್ಯಯನದ ಫಲಿತಾಂಶಗಳು ಪ್ರತಿ ರಾತ್ರಿಯೂ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮಲಗಿದ್ದವರು ಆಘಾತಕ್ಕೆ ಒಳಗಾಗುವ ಸಾಧ್ಯತೆ ಶೇಕಡಾ 23 ರಷ್ಟು ಹೆಚ್ಚು ಎಂದು ಕಂಡುಬಂದಿದೆ. ಪ್ರತಿ ರಾತ್ರಿ ಏಳು ಅಥವಾ ಎಂಟು ಗಂಟೆಗಳಿಗಿಂತ ಕಡಿಮೆ ಮಲಗುವವರಿಗೆ ಹೋಲಿಸಿದರೆ, ಹಗಲಿನಲ್ಲಿ ಹೆಚ್ಚು ಸಮಯ ನಿದ್ದೆ ಮಾಡಿ ನಂತರ ರಾತ್ರಿ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವ ಜನರು ಆಘಾತಕ್ಕೆ ಒಳಗಾಗುವ ಸಾಧ್ಯತೆ 85 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶಾಂತಿಯುತವಾಗಿ ಮಲಗಲು ಸಾಧ್ಯವಾಗದ ಜನರು ಸಾಮಾನ್ಯವಾಗಿ ನಿದ್ರೆ ಮಾಡುವವರಿಗಿಂತ 29 ಪ್ರತಿಶತದಷ್ಟು ಆಘಾತಕ್ಕೊಳಗಾಗುತ್ತಾರೆ ಎಂದು ಸಂಶೋಧನೆ ತೋರಿಸಿದೆ. ಅಧ್ಯಯನದ ಸಹ-ಲೇಖಕ ಜಾಂಗ್ ಅಧ್ಯಯನವು ದೀರ್ಘ ಕಿರು ನಿದ್ದೆ, ನಿದ್ರೆ ಮತ್ತು ಆಘಾತದ ನಡುವಿನ ಸಂಪರ್ಕವನ್ನು ಸಾಬೀತುಪಡಿಸುವುದಿಲ್ಲ ಎಂದು ಒತ್ತಾಯಿಸಿದರೂ. ಹೌದು ಅವು ಖಂಡಿತವಾಗಿಯೂ ಪರಸ್ಪರ ಸಂಬಂಧ ಹೊಂದಿವೆ. ಇದಲ್ಲದೆ, ಈ ಅಧ್ಯಯನವು ಕೆಲವು ಮಿತಿಗಳನ್ನು ಸಹ ಹೊಂದಿದೆ ಎಂದು ಸಂಶೋಧಕರು ಹೇಳುತ್ತಾರೆ. ಭಾಗವಹಿಸುವವರ ನಿದ್ರೆ ಮತ್ತು ಕಿರು ನಿದ್ದೆ ಬಗ್ಗೆ ಮಾತ್ರ ಅವರು ಪ್ರಶ್ನೆಗಳನ್ನು ಕೇಳಿದಂತೆ, ಜನರು ನಿತ್ಯ ಎಷ್ಟು ಗಂಟೆಗಳ ವರೆಗೆ ನಿದ್ರೆ ಮಾಡುತ್ತಾರೆ ಎಂಬುದನ್ನು ದಾಖಲಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ನಿದ್ರೆಯ ಅಸ್ವಸ್ಥತೆಗಳಾದ ಗೊರಕೆ ಮತ್ತು ಸ್ಲೀಪ್ ಅಪ್ನಿಯಾಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿಲ್ಲ ಎಂದು ಅಧ್ಯಯನವು ತಿಳಿಸಿದೆ. ವಯಸ್ಸಾದ, ಆರೋಗ್ಯವಂತ ಚೀನೀ ವಯಸ್ಕರನ್ನು ಅಧ್ಯಯನದಲ್ಲಿ ಸೇರಿಸಲಾಗಿದೆ. ಹೀಗಾಗಿ ಈ ಫಲಿತಾಂಶಗಳು ಇತರ ವಯಸ್ಸಿನ ಜನರಿಗೆ ಅನ್ವಯಿಸುವುದಿಲ್ಲ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.