Alert: ಸ್ಮಾರ್ಟ್ಫೋನ್ ಜೊತೆಗೆ ಮಲಗುವುದು ಅಪಾಯಕಾರಿ!
ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದಾಗಿ ನಮ್ಮ ಮನಸ್ಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ, ಈಗ ಜನರ ಲೈಂಗಿಕ ಜೀವನದ ಮೇಲೆ ಅದರ ಪ್ರಭಾವದ ಪರಿಣಾಮವೂ ಮುನ್ನೆಲೆಗೆ ಬಂದಿದೆ. ಹೊಸ ಅಧ್ಯಯನದ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಲಂಡನ್: ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದಾಗಿ ನಮ್ಮ ಮನಸ್ಸಿನ ಸ್ಥಿತಿ ಪರಿಣಾಮ ಬೀರುತ್ತಿದೆ. ಈಗ ಹೊಸ ಅಧ್ಯಯನವೊಂದು ಜನರ ಲೈಂಗಿಕ ಜೀವನದ ಮೇಲೆ ಅದರ ಪ್ರಭಾವದ ಪರಿಣಾಮದ ಬಗ್ಗೆ ಪ್ರಸ್ತಾಪಿಸಿದೆ. ಮೊರೊಕ್ಕೊದ ಕಾಸಾಬ್ಲಾಂಕಾದಲ್ಲಿರುವ ಶೇಖ್ ಖಲೀಫಾ ಬೆನ್ ಜಾಯೆದ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಯ ಲೈಂಗಿಕ ಆರೋಗ್ಯ ಇಲಾಖೆಯು ಅಧ್ಯಯನದ ವ್ಯಾಪ್ತಿಯಲ್ಲಿ ಸೇರ್ಪಡೆಯಾದ ಸುಮಾರು 60 ಪ್ರತಿಶತದಷ್ಟು ಜನರು ಸ್ಮಾರ್ಟ್ಫೋನ್ಗಳಿಂದಾಗಿ ತಮ್ಮ ಲೈಂಗಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಮೊರಾಕೊ ವರ್ಲ್ಡ್ ನ್ಯೂಸ್ ವೈಜ್ಞಾನಿಕ ಅಧ್ಯಯನವನ್ನು ಉಲ್ಲೇಖಿಸಿ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾಗವಹಿಸಿದ ಎಲ್ಲ 600 ಮಂದಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದರು. ಅವರಲ್ಲಿ 92 ಪ್ರತಿಶತ ಜನರು ರಾತ್ರಿ ಮಲಗುವ ವೇಳೆ ಸ್ಮಾರ್ಟ್‌ಫೋನ್(Smart phone) ಬಳಸುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರಲ್ಲಿ ಕೇವಲ 18 ಪ್ರತಿಶತದಷ್ಟು ಜನರು ತಮ್ಮ ಫೋನ್‌ಗಳನ್ನು ಮಲಗುವ ಕೋಣೆಯಲ್ಲಿ ಫ್ಲೈಟ್ ಮೋಡ್‌ನಲ್ಲಿ ಇಡುವುದಾಗಿ ಹೇಳಿದರು. ಸ್ಮಾರ್ಟ್ಫೋನ್ 20 ರಿಂದ 45 ವರ್ಷದೊಳಗಿನ ವಯಸ್ಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. 60 ಪ್ರತಿಶತದಷ್ಟು ಜನರು ಫೋನ್ ತಮ್ಮ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಸುಮಾರು 50 ಪ್ರತಿಶತದಷ್ಟು ಜನರು ತಾವು ದೀರ್ಘಕಾಲದವರೆಗೆ ಸ್ಮಾರ್ಟ್‌ಫೋನ್ ಬಳಸುವುದಾಗಿಯೂ ಅದರಿಂದಾಗಿ ತಮ್ಮ ಲೈಂಗಿಕ ಜೀವನ ಉತ್ತಮವಾಗಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯುಎಸ್ ಕಂಪನಿಯಾದ ಶ್ಯೂರ್‌ಕಾಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಮುಕ್ಕಾಲು ಭಾಗದಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು ತಮ್ಮ ಹಾಸಿಗೆಯ ಮೇಲೆ ಅಥವಾ ಅದರ ಪಕ್ಕದಲ್ಲಿ ಇಟ್ಟು ರಾತ್ರಿಯಲ್ಲಿ ಮಲಗುತ್ತಾರೆ. ಫೋನ್ ಅನ್ನು ತಮ್ಮೊಂದಿಗೆ ಇಟ್ಟುಕೊಂಡು ಮಲಗುವವರು, ಅವರು ಸಾಧನದಿಂದ ದೂರವಿರುವ ಸಂದರ್ಭದಲ್ಲಿ ಭಯ ಅಥವಾ ಆತಂಕವನ್ನು ಅನುಭವಿಸುತ್ತಾರೆ ಎಂದು ತಿಳಿಸಿದ್ದಾರೆ. ಒಳಬರುವ ಕರೆಗಳಿಗೆ ಉತ್ತರಿಸುವ ಅಸಹಾಯಕತೆಯು ಲೈಂಗಿಕತೆಗೆ ಅಡ್ಡಿಯಾಗುತ್ತದೆ ಎಂದು ಅಧ್ಯಯನದಲ್ಲಿ ಭಾಗವಹಿಸಿದ ಮೂರನೇ ಒಂದು ಭಾಗದಷ್ಟು ಜನರು ನಂಬಿದ್ದರು ಎಂದು ಹೇಳಲಾಗಿದೆ.