ಎಳನೀರಿನ ಗಂಜಿ/ಕಾಯಿಯ ಪ್ರಯೋಜನಗಳು: ಎಳನೀರಿಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಎಳನೀರಿನ ರುಚಿಯು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಮಾತ್ರವಲ್ಲ, ಆರೋಗ್ಯಕ್ಕೂ ಸಹ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಆದರೆ, ಸಾಮಾನ್ಯವಾಗಿ ನಾವು ಎಳನೀರನ್ನು ಸವಿದು ಅದರ ಗಂಜಿ ಅಥವಾ ಕಾಯನ್ನು ಹಾಗೆಯೇ ಎಸೆಯುತ್ತೇವೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದಾರೆ,  ಅದರಲ್ಲಿರುವ ಅನೇಕ ಪ್ರಮುಖ ಪೋಷಕಾಂಶಗಳಿಂದ ನೀವು ವಂಚಿತರಾಗುತ್ತಿದ್ದೀರಿ ಎಂದರ್ಥ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಎಳನೀರು ಮಾತ್ರವಲ್ಲ ಅದರಲ್ಲಿರುವ ಗಂಜಿ ಅಥವಾ ಕಾಯಿಯೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಎಳನೀರಿನ ಗಂಜಿ ಅಥವಾ ಕಾಯಿಯಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ತಿಳಿಯಿರಿ...


* ತೂಕ ನಷ್ಟ:
ತೆಂಗಿನ ಕಾಯಿ ತಿನ್ನುವುದರಿಂದ ಕ್ಯಾಲೊರಿಗಳು ಹೆಚ್ಚಾಗುತ್ತವೆ, ಇದು ಬೊಜ್ಜಿನ ಅಪಾಯವನ್ನು ಸಹ ಹೆಚ್ಚಿಸುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ಪೌಷ್ಠಿಕ ತಜ್ಞರ ಪ್ರಕಾರ ಇದು ತಪ್ಪು ತಿಳುವಳಿಕೆ. ನೀವು ಸೀಮಿತ ಪ್ರಮಾಣದಲ್ಲಿ ತೆಂಗಿನಕಾಯಿಯನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕ್ರಮೇಣ ಕರಗಿಸಬಹುದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಅಡುಗೆ ಮನೆಯಲ್ಲಿರುವ ಈ ಒಂದು ಮಸಾಲೆ ಸಾಕು


* ಜೀರ್ಣಕ್ರಿಯೆ:
ಅಜೀರ್ಣ ಸಮಸ್ಯೆ ಇರುವವರು ಎಳನೀರಿನ ಗಂಜಿ/ಕಾಯಿ ತಿನ್ನಬೇಕು.  ಏಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸೂಪರ್‌ಫುಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ನಮ್ಮ ಕರುಳನ್ನು ಸಹ ಆರೋಗ್ಯವಾಗಿಡುತ್ತದೆ. 


* ರೋಗನಿರೋಧಕ ಶಕ್ತಿ ಹೆಚ್ಚಳ:
ಕರೋನಾ ಅವಧಿಯ ನಂತರ, ಜನರು ತಮ್ಮ ರೋಗನಿರೋಧಕ ಶಕ್ತಿಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಳನೀರಿನ ಗಂಜಿ/ಕಾಯಿಯನ್ನು ತಿನ್ನುವುದರಿಂದ ಅದರಲ್ಲಿ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.


* ಮುಖದ ಕಾಂತಿ ಹೆಚ್ಚಳ:
ಬೇಸಿಗೆಯಲ್ಲಿ ಮತ್ತು ತೇವಾಂಶದ ತಾಪಮಾನದಲ್ಲಿ ನಮ್ಮ ಮುಖದ ಚರ್ಮವು ಹವಾಮಾನದಿಂದ ಕೆಟ್ಟದಾಗಿ ಹೊಡೆಯುತ್ತದೆ.  ಅಂತಹ ಪರಿಸ್ಥಿತಿಯಲ್ಲಿ ನಾವು ಎಳನೀರಿನ ಗಂಜಿ ಅಥವಾ ಕಾಯಿಯನ್ನು ಸವಿಯುವುದರಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಜೊತೆಗೆ ಆಂಟಿ ಏಜಿಂಗ್ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Overhydration : ಹೆಚ್ಚು ನೀರು ಕುಡಿಯುವುದು ಕಿಡ್ನಿಗೆ ಹಾನಿಕಾರಕ! ಯಾಕೆ ಗೊತ್ತಾ?


* ಶಕ್ತಿಯ ಮೂಲ:
ಬೇಸಿಗೆ ಕಾಲದಲ್ಲಿ, ಸುಡುವ ಬಿಸಿಲು, ಆರ್ದ್ರತೆ ಮತ್ತು ಬೆವರಿನಿಂದ ದಣಿದ ಭಾವ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಎಳನೀರು, ಅದರ ಗಂಜಿ/ ಕಾಯಿಯನ್ನು ಸವಿಯುವುದರಿಂದ ನಿಮ್ಮ ದೇಹದಲ್ಲಿ ಶಕ್ತಿಯು ಹರಡುತ್ತದೆ. ಹಾಗಾಗಿ ಇದನ್ನು ಇನ್ಸ್ಟಾ ಎನರ್ಜಿ ಬೂಸ್ಟರ್ ಎಂತಲೂ ಕರೆಯುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.