ತೂಕ ಇಳಿಕೆಗೆ ಸಲಹೆ: ಬಿಡುವಿಲ್ಲದ ಕೆಲಸ ಮತ್ತು ಕಳಪೆ ಜೀವನಶೈಲಿಯಿಂದಾಗಿ ಬೊಜ್ಜು ಪ್ರಪಂಚದಲ್ಲಿ ದೊಡ್ಡ ಕಾಯಿಲೆಯಾಗಿ ಹೊರಹೊಮ್ಮುತ್ತಿದೆ. ಹೆಚ್ಚಾಗುತ್ತಿರುವ ತೂಕವನ್ನು ಇಳಿಸಲು ಜನರು ಜಿಮ್‌ಗೆ ಹೋಗುವುದರಿಂದ ಹಿಡಿದು ಜಾಗಿಂಗ್‌ವರೆಗೆ ಹಲವು ಪ್ರಯತ್ನ ಮಾಡುತ್ತಾರೆ. ಆದಾಗ್ಯೂ, ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಎಂದು ಪರಿತಪಿಸುವವರೇ ಹೆಚ್ಚು. ನೀವೂ ಸಹ ಇಂತಹವರಲ್ಲಿ ಒಬ್ಬರಾಗಿದ್ದರೆ ಚಿಂತೆಬಿಡಿ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಅದರಲ್ಲೂ ಮುಖ್ಯವಾಗಿ ಸೊಂಟದ ಸುತ್ತಲಿನ ಕೊಬ್ಬನ್ನು ಆರೋಗ್ಯಕರವಾಗಿ ಕರಗಿಸಲು ಸಹಾಯಕವಾಗುವ ಮನೆಮದ್ದನ್ನು ನಾವು ತಿಳಿಸಲಿದ್ದೇವೆ.
ವಾಸ್ತವವಾಗಿ, ಅಡುಗೆಮನೆಯಲ್ಲಿರುವ ಒಂದು ಮಸಾಲೆ ಪದಾರ್ಥವು ನಿಮ್ಮ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಮಾತ್ರವಲ್ಲದೆ ದೈಹಿಕವಾಗಿಯೂ ಸಹ ನಿಮ್ಮನ್ನು ಸದೃಢಗೊಳಿಸುತ್ತದೆ. ಅದುವೇ ದಾಲ್ಚಿನ್ನಿ.
ಹೌದು, ಅಡುಗೆಯಲ್ಲಿ ದಾಲ್ಚಿನ್ನಿ ಬಳಸಿದರೆ ಅದರ ರುಚಿಯೇ ಬೇರೆ. ಮಾತ್ರವಲ್ಲ, ಅದರ ಪರಿಮಳ ಖಾದ್ಯದ ಸ್ವಾದವನ್ನು ಹೆಚ್ಚಿಸುತ್ತದೆ. ಇಂತಹ ಮಸಾಲೆ ಪದಾರ್ಥ ನಮ್ಮ ತೂಕ ಇಳಿಕೆಗೂ ಸಹಾಯಕ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಪ್ರತಿ ಅಡುಗೆ ಮನೆಯಲ್ಲಿಯೂ ಸಾಮಾನ್ಯವಾಗಿ ಕಂಡು ಬರುವ ಮಸಾಲೆ ಪದಾರ್ಥ ದಾಲ್ಚಿನ್ನಿಯನ್ನು ಯಾವ ರೀತಿ ಬಳಸುವುದರಿಂದ ತೂಕ ಕಡಿಮೆ ಆಗುತ್ತದೆ. ಇದರ ಇತರ ಪ್ರಯೋಜನಗಳೇನು ಎಂದು ತಿಳಿಯೋಣ...
ಇದನ್ನೂ ಓದಿ- ತೂಕ ನಷ್ಟಕ್ಕೆ ನಿಜವಾಗಿಯೂ ಸಹಕಾರಿ ಆಗಿದೆಯೇ ಮೊಟ್ಟೆ!
ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ದಾಲ್ಚಿನ್ನಿಯನ್ನು ಈ ರೀತಿ ಬಳಸಿ:
ನೀವು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಬಯಸಿದರೆ, ಇದಕ್ಕಾಗಿ ದಾಲ್ಚಿನ್ನಿಯನ್ನು ಪುಡಿಮಾಡಿ ಚಹಾದಲ್ಲಿ ತುಳಸಿ ಎಲೆಗಳು, ಕರಿಮೆಣಸು ಮತ್ತು ಶುಂಠಿಯೊಂದಿಗೆ ಬೆರೆಸಿ ಕುಡಿಯಿರಿ. ಈ ಬಲವಾದ ಚಹಾವನ್ನು ಕುಡಿಯುವುದರಿಂದ, ನಿಮ್ಮ ಹೊಟ್ಟೆಯ ಕೊಬ್ಬು ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತದೆ.
ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು, ದಾಲ್ಚಿನ್ನಿಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಆ ನೀರನ್ನು ಕುಡಿಯುವ ಮೊದಲು ಅದರಲ್ಲಿ ನಿಂಬೆ ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದು ಅದರ ಪರಿಣಾಮವನ್ನು ದ್ವಿಗುಣಗೊಳಿಸುತ್ತದೆ, ಇದರಿಂದಾಗಿ ನಿಮ್ಮ ಕೊಬ್ಬು ನಿಧಾನವಾಗಿ ಕರಗಲು ಪ್ರಾರಂಭಿಸುತ್ತದೆ ಮತ್ತು ನಿಮ್ಮ ದೇಹವು ಉತ್ತಮ ಆಕಾರಕ್ಕೆ ಬರುತ್ತದೆ.
12 ವಾರಗಳ ನಿರಂತರ ಪ್ರಯತ್ನದಿಂದ ನಿರೀಕ್ಷಿತ ಫಲ:
ದಾಲ್ಚಿನ್ನಿ ಸೇವನೆಯಿಂದ ಚಯಾಪಚಯ ಬಲಗೊಳ್ಳುತ್ತದೆ. ಇದು ಹೊಟ್ಟೆ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ದಾಲ್ಚಿನ್ನಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ನಾವು 12 ವಾರಗಳವರೆಗೆ ನಿರಂತರವಾಗಿ ಮಾಡಬೇಕು. ಅದರ ನಂತರ ಅದರ ಅದ್ಭುತ ಫಲಿತಾಂಶಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಆಹಾರಗಳನ್ನು ತಿನ್ನಲೇಬಾರದು
ದಾಲ್ಚಿನ್ನಿಯ ಇತರ ಪ್ರಯೋಜನಗಳು:
>> ನಿಮಗೆ ಶೀತ, ಜ್ವರ ಅಥವಾ ತಲೆನೋವಿನ ಸಮಸ್ಯೆ ಇದ್ದರೆ ಒಂದು ಲೋಟ ನೀರಿಗೆ ದಾಲ್ಚಿನ್ನಿ ಹಾಕಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ ಮತ್ತು ಸಿಪ್ ಬೈ ಸಿಪ್ ಕುಡಿಯಿರಿ.
>> ಈ ಪರಿಹಾರವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಕಾಲೋಚಿತ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
>> ನಿಮ್ಮ ಸ್ತನಗಳು ಸಡಿಲವಾಗಿದ್ದರೆ, ಅವುಗಳನ್ನು ಬಿಗಿಯಾಗಿ ತರಲು ಈ ಪರಿಹಾರವು ಉತ್ತಮವಾಗಿದೆ.
ಆದರೆ, ನೆನಪಿಡಿ, ದಾಲ್ಚಿನ್ನಿ ಸ್ವಭಾವತಃ ಬಿಸಿಯಾಗಿರುತ್ತದೆ. ಆದ್ದರಿಂದ ವಾರಕ್ಕೊಮ್ಮೆಯಷ್ಟೇ ಈ ಪರಿಹಾರವನ್ನು ಮಾಡುವುದು ಉತ್ತಮ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.