ದಂಪತಿಗಳಿಗೆ ಪಿತೃತ್ವದ ಖುಷಿ ನೀಡುವ IVF ಆದರೆ, ದಂಪತಿಯು ಈ ಸಂತೋಷವನ್ನು ಹೊಂದುವಂತೆ ಮಾಡುವಲ್ಲಿ ವೈದ್ಯರು ಹಾಗೂ ತಂಡದ ಸಮರ್ಪಣಾ ಭಾವ, ಕಠಿಣ ಪರಿಶ್ರಮವು ಈ ಪ್ರಕ್ರಿಯೆಯಲ್ಲಿ ಅದೃಶ್ಯವಾಗಿಯೇ ಉಳಿಯುತ್ತದೆ. ಗರ್ಭಧರಿಸಲು ಅಸಮರ್ಥತೆಯು ನಿರಾಶೆ, ಅಪರಾಧಿ ಭಾವ ಮತ್ತು ಕೆಲವೊಮ್ಮೆ ಕೋಪದ ಭಾವನೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಫಲವಂತಿಕೆಯ ಸಮಸ್ಯೆಯನ್ನು ನಿಭಾಯಿಸಲು ದಂಪತಿಗಳಿಗೆ ಅಗತ್ಯವಾದ ಚಿಕಿತ್ಸೆ ಮತ್ತು ಭಾವನಾತ್ಮಕ ಮಾರ್ಗದರ್ಶನವನ್ನು ನೀಡುವ ಉತ್ತಮ, ಅರ್ಹ ಹಾಗೂ ತಜ್ಞರ ತಂಡದ ಬೆಂಬಲ ಅಗತ್ಯವಿರುತ್ತದೆ. IVF ಜೋಡಿಯ ಪ್ರಯಾಣ ಹಾಗೂ ಬದುಕಿನಲ್ಲಿ ಅದ್ಭುತವಾದ ಪವಾಡವನ್ನೇ ಸೃಷ್ಟಿಸಲು ವಿಜ್ಞಾನಕ್ಕೆ ಮಾನವೀಯ ಸ್ಪರ್ಶ ನೀಡುವ ಈ ಚಮತ್ಕಾರವನ್ನೊಮ್ಮೆ ಅವಲೋಕಿಸೋಣ


COMMERCIAL BREAK
SCROLL TO CONTINUE READING

ದಂಪತಿಗಳ IVF ಪ್ರಯಾಣ:


ಫಲವಂತಿಕೆ ಚಿಕಿತ್ಸಾಲಯಕ್ಕೆ ಆಗಮಿಸುವ ಪೂರ್ವದಲ್ಲಿ, ದಂಪತಿಗಳು ಹಲವಾರು ಅಡೆತಡೆಗಳನ್ನು ಎದುರಿಸಿರುತ್ತಾರೆ. ಸ್ವಾಭಾವಿಕ ಗರ್ಭಧಾರಣೆಯ ಅಸಮರ್ಥ ಪರಿಸ್ಥಿತಿ ನಿಜವಾಗಿಯೂ ತುಂಬ ಕಷ್ಟಕರ ಸನ್ನಿವೇಶ. ಈ ಎಲ್ಲ ಸಂದಿಗ್ಧಗಳ ನಡುವೆ, IVF ಗೆ ಹೋಗಲು ನಿರ್ಧರಿಸುವುದು ಭಾವನಾತ್ಮಕ ತುಮುಲವನ್ನು ಉಂಟುಮಾಡಬಹುದು. ಒಂದೆಡೆ ಇದು ದಂಪತಿಗಳಿಗೆ ಭರವಸೆಯನ್ನು ಹುಟ್ಟುಹಾಕುತ್ತದೆ ಮತ್ತು ಅದೇ ಸಮಯದಲ್ಲಿ ಭವಿಷ್ಯದ ಫಲಿತಾಂಶದ ಊಹೆಯು ಆತಂಕವನ್ನೂ ಉಂಟುಮಾಡುತ್ತದೆ. 


ಇದನ್ನೂ ಓದಿ:ಮೈದುಂಬಿ ಹರಿಯುತ್ತಿರುವ ಭರಚುಕ್ಕಿ ಜಲಪಾತ.. ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಪ್ರಕೃತಿಯ ಸೊಬಗು


IVF ಚಿಕಿತ್ಸೆಯನ್ನು ಪ್ರಾರಂಭಿಸುವಾಗ ಗಣನೀಯ ಪ್ರಮಾಣದ ಮಾಹಿತಿಯನ್ನು ಸಂಸ್ಕರಿಸುವ ಅಗತ್ಯವಿದೆ. ಇದು ಹಾರ್ಮೋನ್ ಕಟ್ಟುಪಾಡುಗಳು, ಚುಚ್ಚುಮದ್ದುಗಳ ವೇಳಾಪಟ್ಟಿ, ಅಲ್ಟ್ರಾಸೌಂಡ್ ಭೇಟಿಗಳು ಮತ್ತು ಗೊಂದಲಮಯ ವೈದ್ಯಕೀಯ ಭಾಷೆ ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ. ಯಾವ ಕ್ಲಿನಿಕ್ ಸೂಕ್ತ, ಯಾವ ತಜ್ಞರನ್ನು ನೋಡಬೇಕು, ಕೆಲಸದ ಸಮಯವನ್ನೇ ವ್ಯಯಿಸಬೇಕೇ, ಯಾರಿಗೆ ತಿಳಿಸಬೇಕು ಮತ್ತು ಎಷ್ಟು ಭ್ರೂಣಗಳನ್ನು ವರ್ಗಾಯಿಸಬೇಕು ಎಂಬಿತ್ಯಾದಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. IVF ನ ಒತ್ತಡವು ಸುಲಭವಾಗಿ ಗೊಂದಲಕ್ಕೊಳಗಾಗುವ ಮತ್ತು ಅತಿಯಾದ ಹೊರೆಯ ಭಾವನೆಯನ್ನು ಮೂಡಿಸಬಹುದು. ಅದಕ್ಕಾಗಿಯೇ ವೈದ್ಯರು ಮತ್ತು ಸಲಹೆಗಾರರ ಪಾತ್ರ ಬಹಳ ನಿರ್ಣಾಯಕವಾಗಿದೆ.


ದಂಪತಿಗಳು ಫಲವಂತಿಕೆ ಚಿಕಿತ್ಸಾಲಯಕ್ಕೆ ಬಂದಾಗ, ಅವರು ತಮ್ಮ ನಿರ್ಧಾರದಲ್ಲಿ ಸ್ಪಷ್ಟವಾಗಿದ್ದಾರೆ ಎನ್ನುವುದನ್ನು ತಿಳಿಯುವುದು ಮೊದಲ ಮೈಲಿಗಲ್ಲು. ಅಲ್ಲಿ, ಫಲವಂತಿಕೆ ತಜ್ಞರು ಅವರಿಗೆ ಕೆಲವು ಅಗತ್ಯ ಫಲವಂತಿಕೆ ಪರೀಕ್ಷೆಗಳನ್ನು ಮಾಡಿಸುವಂತೆ ಹಾಗೂ ದಂಪತಿಗಳಿಗೆ ಲಭ್ಯವಿರುವ ಸಮರ್ಪಕ ರೀತಿಯ ಫಲವಂತಿಕೆ ಚಿಕಿತ್ಸೆಯ ಆಯ್ಕೆಗಳ ಕುರಿತು ಸಲಹೆ ನೀಡುತ್ತಾರೆ.


ಅವರು IVF ಅನ್ನು ಶಿಫಾರಸು ಮಾಡಿದರೆ, ಸಲಹೆಗಾರರು ಅವರಿಗೆ ಕೆಲವು ಚುಚ್ಚುಮದ್ದುಗಳನ್ನು ನೀಡುತ್ತಾರೆ ಮತ್ತು ಮಹಿಳೆಯ ದೇಹದಿಂದ ಅಂಡಗಳನ್ನು ಮತ್ತು ಪತಿಯಿಂದ ವೀರ್ಯವನ್ನು ತೆಗೆದುಕೊಳ್ಳುತ್ತಾರೆ. ಭ್ರೂಣಶಾಸ್ತ್ರಜ್ಞರು ಅಂಡ ಮತ್ತು ವೀರ್ಯವನ್ನು ರಕ್ಷಿಸುತ್ತಾರೆ ಮತ್ತು ಗರ್ಭಾಶಯವನ್ನು ಅನುಕರಿಸುವ ಅತ್ಯುತ್ತಮ ಕೃತಕ ವಾತಾವರಣವನ್ನು ಸೃಷ್ಟಿಸುವ ಮೂಲಕ ಪ್ರಯೋಗಾಲಯದಲ್ಲಿ ಅವುಗಳನ್ನು ಫಲವತ್ತಾಗಿಸುತ್ತಾರೆ. ಭ್ರೂಣಗಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಏಕೆಂದರೆ, ಅವು 200-300 ಮೈಕ್ರಾನ್ ಗಾತ್ರದಲ್ಲಿರುತ್ತವೆ ಮತ್ತು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಭ್ರೂಣಗಳು ತಮ್ಮ ಕಾರ್ಯಸಾಧ್ಯತೆಯನ್ನು ಕಳೆದುಕೊಳ್ಳುತ್ತವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸದಿದ್ದಲ್ಲಿ ಗರ್ಭಧಾರಣೆ ಸಾಧ್ಯವಾಗುವುದಿಲ್ಲ.


ಭ್ರೂಣಗಳನ್ನು ಬ್ಲಾಸ್ಟೊಸಿಸ್ಟ್ ಹಂತವಾಗಿ ಅಭಿವೃದ್ಧಿಪಡಿಸಿದ ಬಳಿಕ, ಅವುಗಳನ್ನು ಅಳವಡಿಸಲು ಮತ್ತು ಗರ್ಭಾವಸ್ಥೆಯನ್ನು ಸ್ಥಾಪಿಸಲು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ನೋವಾ IVF ಫರ್ಟಿಲಿಟಿಯ ಭ್ರೂಣಶಾಸ್ತ್ರಜ್ಞರಾದ ಅನುಷಾ ಶೆಣೈ ಅವರು ರಚಿಸಿರುವ ವರ್ಣಚಿತ್ರವು, ಗರ್ಭಾಶಯವನ್ನು ಅನುಕರಿಸುವ ಅತ್ಯುತ್ತಮ ಕೃತಕ ವಾತಾವರಣವನ್ನು ಸೃಷ್ಟಿಸುವ ಮೂಲಕ ಅಂಡಾಣು ಮತ್ತು ವೀರ್ಯವನ್ನು ರಕ್ಷಿಸುವಲ್ಲಿ ಮತ್ತು ಪ್ರಯೋಗಾಲಯದಲ್ಲಿ ಫಲವತ್ತಾಗಿಸುವಲ್ಲಿ ಭ್ರೂಣಶಾಸ್ತ್ರಜ್ಞರ ಪಾತ್ರವನ್ನು ತೋರಿಸುತ್ತದೆ.


ಇದನ್ನೂ ಓದಿ:ಮಧುಮೇಹದಿಂದ ಮಂಡಿ ನೋವಿನವರೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನುಗ್ಗೆ ಸೊಪ್ಪು


ಎರಡು ವಾರಗಳ ಕಾಯುವಿಕೆ - ಭ್ರೂಣ ವರ್ಗಾವಣೆ ಮತ್ತು ಗರ್ಭಧಾರಣೆಯ ಪರೀಕ್ಷೆಯ ನಡುವಿನ 10-14 ದಿನಗಳ ಮಧ್ಯಂತರವು ಈ ಚಕ್ರದ ಅತ್ಯಂತ ಸವಾಲಿನ ಭಾಗವಾಗಿದೆ. ಈ ಸಮಯದಲ್ಲಿ ನಿಮ್ಮ ಆಶಾಕಿರಣಗಳಷ್ಟೇ ನಿಮ್ಮ ಆತಂಕಗಳೂ ದೊಡ್ಡದಾಗಿರುತ್ತವೆ. ನಿಯಮಿತ ಚುಚ್ಚುಮದ್ದು, ವೈದ್ಯರ ಭೇಟಿಗಳು ಮತ್ತು ಕಾರ್ಯವಿಧಾನಗಳ ಕಾರಣದಿಂದ ಹಲವಾರು ವಾರಗಳ ಅನಂತರ ಕಾಯುವಿಕೆಯು ಅಹಿತಕರವಾಗಬಹುದು. ಚಿಕಿತ್ಸೆಯ ಈ ಹಂತದಲ್ಲಿ, ಅನೇಕ ಜನರು ವ್ಯಾಪಕವಾದ ಭಾವನೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಗರ್ಭಾವಸ್ಥೆಯ ಲಕ್ಷಣಗಳಿಗೆ ನಿರಂತರ ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ವರದಿ ಮಾಡುತ್ತಾರೆ.


ಪ್ರಕ್ರಿಯೆಯ ಏರಿಳಿತಗಳನ್ನು ತಿಳಿಯಲು, ಚಿಕಿತ್ಸಾ ಆಯ್ಕೆಗಳೊಂದಿಗೆ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ನೀಡುವ ಫಲವಂತಿಕೆ ಕ್ಲಿನಿಕ್ ಅನ್ನು ನೀವು ಆಯ್ಕೆ ಮಾಡಲು ಶಿಫಾರಸು ಮಾಡಲಾಗಿದೆ.


ಭರವಸೆ ಮತ್ತು ಆತಂಕದಲ್ಲಿ ಸಮತೋಲನ- ನಿರಾಶೆಗಳೊಂದಿಗೆ ವ್ಯವಹರಿಸುವಾಗ ಆಶಾವಾದವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದು ಸಂಪೂರ್ಣ IVF ಪ್ರಕ್ರಿಯೆಯ ಕಠಿಣ ಭಾಗವಾಗಿದೆ ಎಂದು ಹಲವರು ಹೇಳುತ್ತಾರೆ. ಆದರೆ, ಬಹುಪಾಲು ಜನರಿಗೆ, ಭರವಸೆ ಮತ್ತು ಆತಂಕಗಳು IVF ಪ್ರಯಾಣದ ಸಾಮಾನ್ಯ ಅಂಶಗಳಾಗಿವೆ. ಆದರೂ, ಸಂಗಾತಿ ಅಂತಿಮವಾಗಿ ಗರ್ಭಿಣಿಯಾದಾಗ, IVF ಕಾರ್ಯವಿಧಾನದ ಎಲ್ಲಾ ತೊಂದರೆಗಳು ಸಹ್ಯವೆಂದೂ ಯೋಗ್ಯವೆಂದೂ ತೋರುತ್ತದೆ.


ಲೇಖಕರು: ಡಾ. ಮಹೇಶ್ ಕೋರೆಗೋಳ್, ಫರ್ಟಿಲಿಟಿ ಕನ್ಸಲ್ಟೆಂಟ್, ನೋವಾ IVF ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.