ನವದೆಹಲಿ : ಕರೋನಾ (Coronavirus) ರಕ್ಕಸಾಕಾರದಲ್ಲಿ ಹರಡುತ್ತಿರುವ  ಈ ಹೊತ್ತಿನಲ್ಲಿ ಎಲ್ಲರೂ ಅದರಿಂದ ಪಾರಾಗುವ ಎಲ್ಲಾ ಮಾರ್ಗಗಳನ್ನು ಹುಡುಕುತಿದ್ದಾರೆ.  ಈ ಹೊತ್ತಿನಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಕರೋನಾ ಕಾಲದಲ್ಲಿ ದೇಹದ ರೋಗ ನಿರೋಧಕತೆಯನ್ನು (Immunity) ಹೆಚ್ಚಿಸಿಕೊಳ್ಳುವುದು ಕೂಡಾ ಅತ್ಯಂತ ಮುಖ್ಯ. 


COMMERCIAL BREAK
SCROLL TO CONTINUE READING

ಕರೋನಾ (Coronavirus) ಕಾಲದಲ್ಲಿ ನಮ್ಮ ಇಮ್ಯೂನಿಟಿ ಅತ್ಯಂತ ಸ್ಟ್ರಾಂಗ್ ಆಗಿಡಬೇಕಾಗುತ್ತದೆ.  ಈ ಹೊತ್ತಿನಲ್ಲಿ ನಾವೊಂದು ವಿಶೇಷ ಆಯುರ್ವೇದಿಕ್ ಕಷಾಯದ (Ayurvedic Kashaya) ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.  ಆಯುರ್ವೇದಿಕ್ ಕಷಾಯ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ (Immunity)ಹೆಚ್ಚಾಗುತ್ತದೆ.  ಹಾಗಾಗಿ, ಕಷಾಯ ಮಾಡುವುದು ಹೇಗೆ ತಿಳಿದುಕೊಳ್ಳಿ..


ಇದನ್ನೂ ಓದಿ : Cucumber: ಸೌತೆಕಾಯಿ ತಿಂದ ನಂತರ ನೀವೂ ಈ ತಪ್ಪುಗಳನ್ನು ಮಾಡುತ್ತಿದ್ದರೆ ಎಚ್ಚರ!


ಕಷಾಯ ಮಾಡಲು ಬೇಕಾಗುವ ಸಾಮಾಗ್ರಿ :
ಲವಂಗ 2
ನೀರು 2 ಕಪ್
ಶುಂಠಿ ರಸ (Ginger) - 2 ಸಣ್ಣ ಚಮಚ
ಕರಿಮೆಣಸು (Pepper)– 1 ಸಣ್ಣ ಚಮಚ
ತುಳಸಿ ದಳ  - 3 – 4 ದಳ
ದಾಲ್ಚಿನಿ ಪೌಡರ್ -  ಒಂದು ಚಿಟಿಕೆ
ಕಷಾಯ ಮಾಡುವ ವಿಧಾನ ಹೇಗೆ..?


ಒಂದು ಪಾನ್ ನಲ್ಲಿ ಎರಡು ಕಪ್  ನೀರು (Water) ಹಾಕಿ ಕುದಿಸಲು ಬಿಡಿ. ಕುದಿಯಲು ಶುರುವಾದ ಮೇಲೆ ಶುಂಠಿ ರಸ, ತುಳಸೀ ದಳ  (Tulsi) ಸೇರಿಸಿ ಕುದಿಸಿ. ನಂತರ ಕರಿಮೆಣಸು, ಲವಂಗ ಸೇರಿಸಿ.  ಸಿಮ್ ನಲ್ಲಿಟ್ಟು 5 ನಿಮಿಷ ಮತ್ತೆ ಕುದಿಸಿ. . ಬಿಸಿ ಬಿಸಿ ಜಬರ್ ದಸ್ತ್ ಕಷಾಯ ಸೇವಿಸಲು ಸಿದ್ದವಾಗಿರುತ್ತದೆ.


ಇದನ್ನೂ ಓದಿ : Garlic Benefits: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ 'ಎರಡು ಪೀಸ್ ಬೆಳ್ಳುಳ್ಳಿ' ಮಿಸ್ ಮಾಡದೇ ಸೇವಿಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.