Neem Leaves Health Benefits: ಬೇವನ್ನು ಹಲವು ಬಗೆಯ ಔಷಧಗಳನ್ನು ತಯಾರಿಸಲು ಬಳಸುತ್ತಾರೆ. ಇದು ಆ್ಯಂಟಿಬಯೋಟಿಕ್ ಗುಣಗಳಿಂದ ಸಮೃದ್ಧವಾಗಿದೆ. ಪ್ರತಿಯೊಬ್ಬರಿಗೂ ಬೇವಿನ ಸೊಪ್ಪಿನ ರುಚಿ ಗೊತ್ತಿರಬೇಕು. ಸಹಜವಾಗಿ, ಇದು ರುಚಿಯಲ್ಲಿ ಕಹಿಯಾಗಿದೆ. ಇದೇ ವೇಳೆ, ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಿಗಳ ಹೊರತಾಗಿ, ಅನೇಕ ಸಂಶೋಧನೆಗಳ ಸಮಯದಲ್ಲಿ, ವಿಜ್ಞಾನಿಗಳು ಈ ಔಷಧಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ವೇದಗಳಲ್ಲಿ ಬೇವಿಗೆ ಸರ್ವ ರೋಗ ನಿವಾರಣಿ ಎಂದು ಹೆಸರಿಸಲಾಗಿದೆ, ಇದರರ್ಥ ಎಲ್ಲಾ ರೋಗಗಳನ್ನು ಗುಣಪಡಿಸುವ ಎಲೆ ಎಂದಾಗುತ್ತದೆ. ಬೇವಿನ ಮರ ಎಲ್ಲೆಲ್ಲಿ ನೆಲೆಸಿದೆಯೋ ಅಲ್ಲೆಲ್ಲ ಅದು ತನ್ನ ಸುತ್ತಲಿನ ಪರಿಸರವನ್ನು ಪರಿಶುದ್ಧವಾಗಿ ಇಡುತ್ತದೆ. ಇದರ ಎಲೆಗಳು, ಕೊಂಬೆಗಳು, ತೊಗಟೆ ಹಲವಾರು ರೋಗಗಳನ್ನು ಗುಣಪಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ. ಹಾಗಾದರೆ ಇದರ ಇತರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...


1. ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ- ಬೇವಿನ ಎಲೆಗಳು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ, ಇದು ಚರ್ಮವನ್ನು ಅಲರ್ಜಿಯಿಂದ ರಕ್ಷಿಸುತ್ತದೆ. ಬೇವಿನ ಎಲೆಗಳು ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ, ಇದು ನಿಮ್ಮ ಚರ್ಮದ ಮೇಲಿನ ದದ್ದುಗಳು ಮತ್ತು ತುರಿಕೆಗಳನ್ನು ತೊಡೆದುಹಾಕಲು ಪರಿಣಾಮಕಾರಿಯಾಗಿದೆ. ಇದರ ಬಳಕೆಯು ಮೊಡವೆಗಳನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತವೆ. 


2. ಬೇವು ದೇಹವನ್ನು ನಿರ್ವಿಷಗೊಳಿಸುತ್ತದೆ- ಉರಿಯೂತ ನಿವಾರಕ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬೇವಿನಲ್ಲಿ ಕಂಡುಬರುತ್ತವೆ. ಇದಲ್ಲದೆ, ಇದು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಇದರ ಬಳಕೆಯು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ದೇಹವನ್ನು ನಿರ್ವಿಷಗೊಳಿಸಿದಾಗ, ಅದರ ಪರಿಣಾಮವು ಚರ್ಮದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.


3. ಬೇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ- ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತವೆ ಮತ್ತು ವೈರಲ್ ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ದೇಹವನ್ನು ಸಿದ್ಧಗೊಳಿಸುತ್ತದೆ. ಬೇವಿನ ಎಲೆಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.


4. ಬೇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ- ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಬೇವಿನ ಎಲೆಗಳು ತುಂಬಾ ಪ್ರಯೋಜನಕಾರಿಯಾಗಿವೆ. ಬೇವು ತಂಪು ಗುಣಧರ್ಮವನ್ನು ಹೊಂದಿವೆ ಮತ್ತು ಇದು ಆಮ್ಲೀಯತೆ, ಎದೆಯುರಿ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಅತ್ಯಂತ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗಿದೆ. ಬೇವಿನ ಎಲೆಗಳು ಜೀರ್ಣಾಂಗ ವ್ಯವಸ್ಥೆಯಿಂದ ಹಾನಿಕಾರಕ ವಿಷವನ್ನು ಹೊರಹಾಕುವ ಮೂಲಕ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Bad Cholesterol: ಹಳಸಿದ ಬಾಯಿ ನೆನೆಹಾಕಿದ 5 ರೀತಿಯ ಡ್ರೈಫ್ರೂಟ್ ಸೇವಿಸಿ, ಕೊಲೆಸ್ಟ್ರಾಲ್ ಗೆ ಗುಡ್ ಬೈ ಹೇಳಿ!


5. ಪೆಟ್ಟು ಅಥವಾ ಗಾಯಗಳನ್ನು ಗುಣಪಡಿಸಲು ಸಹಾಯಕ- ಬೇವು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಹುಣ್ಣುಗಳು ಮತ್ತು ಮೊಡವೆಗಳ ಸಮಸ್ಯೆಯನ್ನು ನೀವು ತಪ್ಪಿಸಲು ಬಯಸಿದರೆ, ಬೇವಿನ ಎಲೆಗಳು, ತೊಗಟೆ ಮತ್ತು ಹಣ್ಣುಗಳನ್ನು ಸಮಪ್ರಮಾಣದಲ್ಲಿ ಪುಡಿಮಾಡಿ ಮತ್ತು ಈ ಪೇಸ್ಟ್ ಅನ್ನು ಚರ್ಮಕ್ಕೆ ಹಚ್ಚಿ, ಇದು ಕುರುಗಳು ಮತ್ತು ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ.


ಇದನ್ನೂ ಓದಿ-Side Effects Of Sugar Cane Juice: ಈ ಜನರು ಮರೆತೂ ಕೂಡ ಕಬ್ಬಿನ ರಸ ಸೇವಿಸಬಾರದು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.