ನವದೆಹಲಿ  : ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ (Breakfast) ರಾತ್ರಿ  ಪೂರ್ತಿ  ಖಾಲಿ ಹೊಟ್ಟೆಯಲ್ಲಿದ್ದು,  ನಂತರ ಸೇವಿಸುವ ಆಹಾರವಾಗಿರುತ್ತದೆ. ಹಾಗಿ ಬೆಳಗಿನ ಉಪಹಾರದಲ್ಲಿ ಯಾವಾಗಲೂ ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು.  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಾಹಾರದಲ್ಲಿ ಹುಳಿ ವಸ್ತುಗಳನ್ನು ತಪ್ಪಿಸಬೇಕು.  ಏಕೆಂದರೆ ಅವುಗಳ ಸೇವನೆಯು ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. 


COMMERCIAL BREAK
SCROLL TO CONTINUE READING

ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸಬೇಡಿ: 
1. ಟೀ-ಕಾಫಿ: 
ಹೆಚ್ಚಿನವರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ (Tea coffee) ಆರಂಭಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸುವುದು ಹಾನಿಕಾರಕ. ಹಾಗಾಯಿ ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯುವಾಗ ಬಿಸ್ಕೆಟ್  ಆದರೂ ಜೊತೆಗಿರುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿಯನ್ನು ಸೇವಿಸುವುದರಿಂದ ಆಸಿಡಿಟಿ (acidity) ಉಂಟಾಗುತ್ತದೆ.


ಇದನ್ನೂ ಓದಿ  :  Honey Real Or Fake: ಅಸಲಿ ಜೇನು ತುಪ್ಪವನ್ನು ಗುರುತಿಸುವುದು ಹೇಗೆ ತಿಳಿಯಿರಿ


2. . ಪೇರಳೆ ಹಣ್ಣು : ಪೇರಳೆ ಹಣ್ಣು ಜೀರ್ಣಕ್ರಿಯೆಗೆ (digestion) ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ  ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಹಣ್ಣು  (gauva) ಸೇವಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು. 


3.  ಸೇಬುಹಣ್ಣು : ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸೇಬಿನಲ್ಲಿ ಹೇರಳವಾಗಿ ಕಂಡುಬರುತ್ತವೆ.  ಇವು ಆರೋಗ್ಯಕ್ಕೆ ಪ್ರಯೋಜನಕಾರಿ (health benefits of apple) ಎಂದು ಪರಿಗಣಿಸಲಾಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಸೇವಿಸುವುದು ಹಾನಿಕಾರಕವಾಗಿದೆ. 


4. ಸಲಾಡ್: ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಲಾಡ್ (benefits of salad) ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಲಾಡ್ ಸೇವಿಸುವುದರಿಂದ ಆಸಿಡಿಟಿ  ಮತ್ತು ಎದೆಯುರಿ ಉಂಟಾಗುತ್ತದೆ.


ಇದನ್ನೂ ಓದಿ  : Benefits of Cloves : ಪುರುಷರ ಆರೋಗ್ಯಕ್ಕಾಗಿ 2 ಲವಂಗ : ಈ ಸಮಯದಲ್ಲಿ ಸೇವಿಸಿ ಪಡೆಯಿರಿ ಅದ್ಭುತ ಪ್ರಯೋಜನಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.