food to avoid with milk : ಹಾಲಿನ ಜೊತೆ ಈ ಕಾಂಬಿನೇಷನ್ ಒಳ್ಳೆಯದಲ್ಲ..ಗೊತ್ತಿರಲಿ
ಹಾಲು ಕುಡಿಯುವಾಗ ಎಚ್ಚರವಾಗಿರಿ. ಹಾಲಿನ ಜೊತೆಗೆ ಯಾವತ್ತಿಗೂ ಈ ಆಹಾರಗಳನ್ನು (food to avoid with milk) ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ..
ನವದೆಹಲಿ : ಆಯುರ್ವೇದದಲ್ಲಿ ಹಾಲಿಗೆ (Milk) ಸಾಕಷ್ಟು ಮಹತ್ವ ಇದೆ. ಹಾಲಿನಲ್ಲಿ ಪ್ರೊಟೀನ್ ಮಾತ್ರ ಅಲ್ಲ. ವಿಟಮಿನ್ ಎ, ಬಿ೧, ಬಿ ೧೨ ಮತ್ತು ಡಿ, ಪೊಟ್ಯಾಶಿಯಂ, ಮೆಗ್ನೇಶಿಯಂ ಮುಂತಾದ ಪೋಷಕಾಂಶಗಳಿರುತ್ತವೆ. ಶಾಖಾಹಾರಿಗಳಿಗೆ ಹಾಲು ಪ್ರೊಟೀನ್‌ನ ಬಲು ದೊಡ್ಡ ಮೂಲವಾಗಿದೆ. ಆದರೆ, ಹಾಲು ಕುಡಿಯುವಾಗ ಎಚ್ಚರವಾಗಿರಿ. ಹಾಲಿನ ಜೊತೆಗೆ ಯಾವತ್ತಿಗೂ ಈ ಆಹಾರಗಳನ್ನು (food to avoid with milk) ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ತಜ್ಞರ ಮಾಹಿತಿಯನ್ನು ಒಳಗೊಂಡು ನಾವು ಈ ವಿಷಯವನ್ನು ನಾವು ಇಂದು ಹೇಳುತ್ತಿದ್ದೇವೆ.
೧. ಹಾಲಿನ ಜೊತೆ ಹಣ್ಣು :
ಆಯುರ್ವೇದದ (Ayurveda) ಪ್ರಕಾರ ಹಾಲಿನ ಜೊತೆ ಬಾಳೆಹಣ್ಣು, ಸ್ಟ್ರಾಬರಿ, ಪೈನಾಪಲ್ , ಕಿತ್ತಳೆ ಮುಂತಾದ ಹಣ್ಣುಗಳನ್ನು ತಿನ್ನಬಾರದು. ಹಾಲಿನ ಪ್ರಕೃತಿ ತಂಪು. ಇಂಥ ಹಾಲಿನ ಜೊತೆ ಉಷ್ಣ ಪ್ರಕೃತಿಯ ಹಣ್ಣುಗಳನ್ನು ತಿಂದರೆ ಶೀತ, ಕೆಮ್ಮು, ತಲೆನೋವು, ಅಲರ್ಜಿ ಉಂಟಾಗಬಹುದು.
ಇದನ್ನೂ ಓದಿ : ಹೆಲ್ತಿ ಹೃದಯಕ್ಕಾಗಿ ಊಟ-ತಿಂಡಿಯಲ್ಲಿ ಈ ನಾಲ್ಕು ತಪ್ಪು ಮಾಡಲೇಬೇಡಿ.
೨. ಕಲ್ಲಂಗಡಿ ಮತ್ತು ಹಾಲು:
ಕಲ್ಲಂಗಡಿ (water melon) ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಇದರಲ್ಲಿ ಶೇ. ೯೬ ರಷ್ಟು ನೀರು ಇರುತ್ತದೆ. ಬೇಸಿಗೆಗೆ (Summer) ಅತ್ಯಂತ ಸೂಕ್ತ ಹಣ್ಣು. ಪೊಟ್ಯಾಶಿಯಂ, ಫೈಬರ್ ಸೇರಿ ಸಾಕಷ್ಟು ಪೋಷಕಾಂಶಗಳು ಇದರಲ್ಲಿವೆ. ಆದರೆ, ಇದನ್ನು ಹಾಲಿನ (Milk) ಜೊತೆ ತಿನ್ನಬಾರದು. ಕಲ್ಲಂಗಡಿ ಜೊತೆ ಇತರ ಯಾವುದೇ ವಸ್ತುಗಳನ್ನು ತಿನ್ನಬಾರದು. ಹಾಲು ಕೂಡಾ ಇದಕ್ಕೆ ಹೊರತಲ್ಲ.
೩. ಹಾಲು ಮತ್ತು ಮೀನು :
ಆಯುರ್ವೇದ ತಜ್ಞರ ಪ್ರಕಾರ ಮೀನು (Fish) ಮತ್ತು ಹಾಲು ಒಟ್ಟಿಗೆ ತಿನ್ನಬಾರದು. ಹಾಲಿನಲ್ಲಿ ಸಾಕಷ್ಟು ಪ್ರೊಟೀನ್ ಇರುತ್ತದೆ. ಹಾಗಾಗಿ, ಅದು ಜೀರ್ಣವಾಗಲು ಸ್ವಲ್ಪ ಸಮಯ ಬೇಕು. ಅದೇ ರೀತಿ ಮೀನು, ಮಾಂಸದಲ್ಲೂ ಪ್ರೊಟೀನ್ ಸಾಕಷ್ಟು ಇರುತ್ತದೆ. ಇದು ಪಚನವಾಗಲೂ ಸಮಯ ಬೇಕು. ಹಾಗಾಗಿ, ಹಾಲು ಮತ್ತು ಮೀನು (Milk and fish) ಒಟ್ಟಿಗೆ ತಿಂದರೆ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು.
ಇದನ್ನೂ ಓದಿ : Side Effects : ಮೊಟ್ಟೆಯ ಜೊತೆಗೆ ಈ ಆಹಾರಗಳನ್ನ ಅಪ್ಪಿತಪ್ಪಿಯೂ ಸೇವಿಸಬೇಡಿ! ಯಾಕೆ ಇಲ್ಲಿ ಓದಿ
ಸರಿ ಹಾಗಾದರೆ ಹಾಲು ಯಾವಾಗ ಕುಡಿಯಬೇಕು.?
ಆಯುರ್ವೇದ ತಜ್ಞರ ಪ್ರಕಾರ ಹಾಲು ಕುಡಿಯಲು ಕೂಡಾ ಸಮಯ ಇದೆ. ನಿಮಗೆ ದಷ್ಟಪುಷ್ಟ ದೇಹ ಬೇಕಾದರೆ ಹಾಲು ಬೆಳಗ್ಗೆ ಅಥವಾ ರಾತ್ರಿ ಕುಡಿಯಬೇಕು. ಅಶ್ವಗಂಧದ ಜೊತೆ ಸೇರಿಸಿ ಹಾಲನ್ನು ಟಾನಿಕ್ ರೂಪದಲ್ಲೂ ಕುಡಿಯಬಹುದು. ಇದರಿಂದ ಒಳ್ಳೆಯ ನಿದ್ರೆ ಬರುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ