Kidney Stone Symptoms: ಕಿಡ್ನಿಯು ನಮ್ಮ ದೇಹದಲ್ಲಿರುವ ಎಲ್ಲಾ ಟಾಕ್ಸಿನ್‌ಗಳನ್ನು ತೆಗೆದುಹಾಕುವ ಮೂಲಕ ರಕ್ತವನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಸಾಮಾನ್ಯವಾಗಿದೆ. ಈ ಬಗ್ಗೆ ನಿರ್ಲಕ್ಷವಹಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಇದನ್ನು ತಪ್ಪಿಸಲು ಕಿಡ್ನಿ ಸ್ಟೋನ್ ಲಕ್ಷಣಗಳೇನು? ಅದನ್ನು ತಪ್ಪಿಸಲು ಯಾವ ರೀತಿಯ ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಯುವುದು ಸಹ ಬಹಳ ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ನಮ್ಮ ದೇಹವು ಈ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತದೆ. ಮೂತ್ರಪಿಂಡದಲ್ಲಿ ಕಲ್ಲಿದ್ದಾಗ ದೇಹ ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ, ಈ ಸಮಸ್ಯೆಯಿಂದ ಪಾರಾಗುವುದು ಹೇಗೆ ಎಂದು ತಿಳಿಯಿರಿ...


ಮೂತ್ರ ವಿಸರ್ಜನೆಗೆ ತೊಂದರೆ:
ನಿಮಗೆ ಮೂತ್ರ ವಿಸರ್ಜಿಸಲು ತೊಂದರೆಯಾಗುತ್ತಿದ್ದರೆ, ನೀವು ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ಹೊಂದಿರಬಹುದು. ಕಿಡ್ನಿಯಲ್ಲಿ ಸ್ಟೋನ್ ಇದ್ದರೆ ಮೂತ್ರ ವಿಸರ್ನಜೆ ಸಂದರ್ಭದಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡದ ಕಲ್ಲಿನಲ್ಲಿ ಪರಿಸ್ಥಿತಿಯು ತೀವ್ರವಾಗಿದ್ದರೆ, ಮೂತ್ರದಿಂದ ರಕ್ತವು ಹೊರಬರುತ್ತದೆ. ಈ ಸಂದರ್ಭದಲ್ಲಿ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 


ಇದನ್ನೂ ಓದಿ- High Blood Pressure: ಔಷಧಿ ಇಲ್ಲದೆ ಈ ರೀತಿ ಅಧಿಕ ರಕ್ತದೊತ್ತಡ ನಿಯಂತ್ರಿಸಿರಿ


ಬೆನ್ನು ಮತ್ತು ಹೊಟ್ಟೆಯಲ್ಲಿ ನೋವು:
ನಿಮಗೆ ನಿರಂತರ ಹೊಟ್ಟೆ ಮತ್ತು ಬೆನ್ನು ನೋವು ಇದ್ದರೆ, ನಂತರ ಎಚ್ಚರದಿಂದಿರಿ. ಇದು ಕಿಡ್ನಿ ಸ್ಟೋನ್‌ನ ಲಕ್ಷಣವೂ ಹೌದು. ಕಲ್ಲು ಮೂತ್ರನಾಳಕ್ಕೆ ಹೋದಾಗ, ಮೂತ್ರ ವಿಸರ್ಜನೆಯಲ್ಲಿ ಆಗಾಗ್ಗೆ ಅಡಚಣೆ ಉಂಟಾಗುತ್ತದೆ ಮತ್ತು ಮೂತ್ರವು ಸರಿಯಾಗಿ ಹಾದುಹೋಗದ ಕಾರಣ ಹೊಟ್ಟೆ ಮತ್ತು ಬೆನ್ನು ಎರಡರಲ್ಲೂ ನೋವು ಉಂಟಾಗುತ್ತದೆ. ಇದಲ್ಲದೆ, ನಿಮ್ಮ ಮೂತ್ರದಲ್ಲಿ ಅಹಿತಕರ ವಾಸನೆ ಅಥವಾ ಯಾವುದೇ ಕಟುವಾದ ವಾಸನೆ ಇದ್ದರೆ, ಇದು ಕಿಡ್ನಿ ಸ್ಟೋನ್ ಸಂಕೇತವಾಗಿದೆ.


ಇದನ್ನೂ ಓದಿ- Healthy Drinks: ಮಧುಮೇಹಕ್ಕೆ ರಾಮಬಾಣ ಈ ಪಾನೀಯಗಳು


ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ:
ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕಿಡ್ನಿ ಬೀನ್ಸ್, ಕಲ್ಲಂಗಡಿ, ತುಳಸಿ, ದಾಳಿಂಬೆ, ಎಳನೀರು, ಹಾಗಲಕಾಯಿ, ಮಜ್ಜಿಗೆ, ಮೂಲಂಗಿ, ಜಾಮೂನ್ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಮೂತ್ರ ಪಿಂಡದಲ್ಲಿ ಕಲ್ಲುಗಳನ್ನು ತೆಗೆಯಲು ಮೂಲಂಗಿ ತುಂಬಾ ಪ್ರಯೋಜನಕಾರಿ. ಕ್ಯಾರೆಟ್ ಕ್ಯಾಲ್ಸಿಯಂ ಆಕ್ಸಲೇಟ್ ಅನ್ನು ಹೊಂದಿರುತ್ತದೆ, ಇದು ಕಲ್ಲುಗಳನ್ನು ಒಡೆಯಲು ಕೆಲಸ ಮಾಡುತ್ತದೆ. ತುಳಸಿ ಸೇವನೆಯಿಂದ ಮೂತ್ರಪಿಂಡದ ಕಲ್ಲು ಮೂತ್ರದ ಮೂಲಕ ದೇಹದಿಂದ ಹೊರಬರುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.