Peanut Side Effects: ಈ ಆರೋಗ್ಯ ಸಮಸ್ಯೆ ಇರುವವರು ಮರೆತೂ ಸಹ ಕಡಲೆಕಾಯಿ ತಿನ್ನಬಾರದು

Peanut Side Effects:ಕಡಲೆಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಅಪ್ಪಿತಪ್ಪಿಯೂ ಸಹ ಕಡಲೆಕಾಯಿಯನ್ನು ತಿನ್ನಬಾರದು. ಇವರು ಕಡಲೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ಜನರು ಕಡಲೆಕಾಯಿಯನ್ನು ಸೇವಿಸಬಾರದು ಎಂದು ತಿಳಿಯೋಣ.

Written by - Yashaswini V | Last Updated : Nov 2, 2022, 02:12 PM IST
  • ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಡಲೆಕಾಯಿಯ ರುಚಿಯನ್ನು ಹೆಚ್ಚಿಸಲು ಉಪ್ಪಿನೊಂದಿಗೆ ಹಲವಾರು ರೀತಿಯ ಮಸಾಲೆಗಳನ್ನು ಸೇರಿಸಲಾಗುತ್ತದೆ.
  • ಆದ್ದರಿಂದ, ಇದನ್ನು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸಬಹುದು.
  • ದೇಹದಲ್ಲಿ ಹೆಚ್ಚಿದ ಸೋಡಿಯಂ ಬಿಪಿ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
Peanut Side Effects: ಈ ಆರೋಗ್ಯ ಸಮಸ್ಯೆ ಇರುವವರು ಮರೆತೂ ಸಹ ಕಡಲೆಕಾಯಿ ತಿನ್ನಬಾರದು  title=
Peanut Side Effects

Peanut Side Effects: ಬಡವರ ಬಾದಾಮಿ ಕಡಲೆಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಿನ ಜನರು ಇದನ್ನು ಸೇವಿಸುತ್ತಾರೆ. ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಶೇಂಗಾ ತಿನ್ನುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಇದಲ್ಲದೆ ಇದನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಕಡಲೆಕಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಇದು ಹಾನಿಕಾರಕ ಎಂದು ಸಾಬೀತುಪಡಿಸಬಹುದು.   ಹಾಗಾದರೆ ಕಡಲೆಕಾಯಿಯನ್ನು ತಿನ್ನುವುದರಿಂದಾಗುವ ಅನನುಕೂಲಗಳೇನು ಮತ್ತು ಯಾವ ಜನರು ಅದನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿಯೋಣ.

ಕಡಲೆಕಾಯಿ ಸೇವನೆಯಿಂದ  ಸೋಡಿಯಂ ಪ್ರಮಾಣ ಹೆಚ್ಚುತ್ತದೆ:
ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಡಲೆಕಾಯಿಯ ರುಚಿಯನ್ನು ಹೆಚ್ಚಿಸಲು ಉಪ್ಪಿನೊಂದಿಗೆ ಹಲವಾರು ರೀತಿಯ ಮಸಾಲೆಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ, ಇದನ್ನು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸಬಹುದು. ದೇಹದಲ್ಲಿ ಹೆಚ್ಚಿದ ಸೋಡಿಯಂ ಬಿಪಿ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕಡಲೆಯನ್ನು ಸೇವಿಸಬಾರದು.

ಇದನ್ನೂ ಓದಿ- ಉತ್ತಮ ಆರೋಗ್ಯಕ್ಕಾಗಿ ಸವಿಯಿರಿ ಈ ಚಹಾ

ತೂಕ ಹೆಚ್ಚಳ:
ಕೆಲವರಿಗೆ ಕಡಲೆಕಾಯಿ ಎಂದರೆ ಎಷ್ಟು ಪ್ರಿಯ ಎಂದರೆ, ಅವರು ನಿತ್ಯ ಅದನ್ನು ಸೇವಿಸುತ್ತಾರೆ. ಕಡಲೆಕಾಯಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ, ಆದ್ದರಿಂದ ಇದನ್ನು ಪ್ರತಿದಿನ ತಿನ್ನುವುದರಿಂದ ತ್ವರಿತ ತೂಕ ಹೆಚ್ಚಾಗುತ್ತದೆ. ನೀವು ಈಗಾಗಲೇ ಅಧಿಕ ತೂಕ ಹೊಂದಿದ್ದರೆ ಮತ್ತು ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಂತರ ಕಡಲೆಕಾಯಿ ತಿನ್ನುವುದನ್ನು ತಪ್ಪಿಸಿ.

ಇದನ್ನೂ ಓದಿ- Betel Benefits: ಅಲ್ಸರ್ ವಿರುದ್ಧ ರಾಮಬಾಣ ಔಷಧಿ ವಿಳ್ಯದೆಲೆ, ರಕ್ತದಲ್ಲಿನ ಸಕ್ಕರೆಗೂ ಕಡಿವಾಣ

ಅಸಿಡಿಟಿ ಸಮಸ್ಯೆ ಇರುವವರಿಗೆ ಹಾನಿಕಾರಕ:
ಅಸಿಡಿಟಿ ಸಮಸ್ಯೆ ಇರುವವರು ಕಡಲೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಶೇಂಗಾ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣ ಇತ್ಯಾದಿ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ನಿಮಗೂ ಈ ಆರೋಗ್ಯ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಕಡಲೆಕಾಯಿಯನ್ನು ಸೇವಿಸಬೇಡಿ, ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News