ಬೆಂಗಳೂರು : ಹೃದಯವು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೃದಯ ಬಡಿತದಲ್ಲಿ ಸ್ವಲ್ಪ ಏರಿಳಿತವಾದರೂ,  ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆರಂಭದಲ್ಲಿ, ರೋಗಿಯು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾನೆ. ನಂತರ ಈ ಸಮಸ್ಯೆಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ. ನೀವು ಕೂಡಾ ಹೃದ್ರೋಗದಿಂದ ಬಳಲುತ್ತಿದ್ದರೆ ಹೃದಯಾಘಾತದ ಈ ಲಕ್ಷಣಗಳ ಬಗ್ಗೆ  ತಿಳಿದುಕೊಂಡಿರಬೇಕು. 


COMMERCIAL BREAK
SCROLL TO CONTINUE READING

ಹೃದಯಾಘಾತ ಎಂದರೇನು?
ಹೃದಯಕ್ಕೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ನಿರ್ಬಂಧಿಸಿದಾಗ ವ್ಯಕ್ತಿಗೆ  ಹೃದಯಾಘಾತವಾಗುತ್ತದೆ. ಪರಿಧಮನಿಯ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಶೇಖರಣೆಯಿಂದಾಗಿ ಕೆಲವೊಮ್ಮೆ ಹೀಗಾಗುತ್ತದೆ. ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳನ್ನು ಪರಿಧಮನಿಯ ಅಪಧಮನಿಗಳು ಎಂದು ಕರೆಯಲಾಗುತ್ತದೆ. ಹೃದಯಾಘಾತದ ಯಾವುದೇ ಲಕ್ಷಣಗಳು ಕಂಡುಬಂದರೆ, ಅವುಗಳನ್ನು ನಿರ್ಲಕ್ಷಿಸದೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.  


ಇದನ್ನೂ ಓದಿ : Breakfast, ಲಂಚ್ ಹಾಗೂ ಡಿನ್ನರ್ ನ ಈ ವೇಳಾಪಟ್ಟಿ ಪಾಲಿಸಿದರೆ ತೂಕ ಎಂದಿಗೂ ಹೆಚ್ಚಾಗುವುದಿಲ್ಲ


ಹೃದಯಾಘಾತದ ಲಕ್ಷಣಗಳೇನು?
ಹೃದಯಾಘಾತಕ್ಕೂ ಮೊದಲು, ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಈ ಚಿಹ್ನೆಗಳು ಕಂಡುಬಂದ ತಕ್ಷಣ, ಎಚ್ಚರವಹಿಸಬೇಕು. ವೈದ್ಯರನ್ನು ಸಂಪರ್ಕಿಸಬೇಕು. ಹೃದಯಾಘಾತದ ಮೊದಲು, ಎದೆ ನೋವು ಕಾಣಿಸಿಕೊಳ್ಳುವುದು, ದವಡೆ ಅಥವಾ ಹಲ್ಲುಗಳಲ್ಲಿ ನೋವು, ಉಸಿರಾಟದ ತೊಂದರೆ, ಬೆವರುವುದು, ಗ್ಯಾಸ್ ಆಗುವುದು, ತಲೆಸುತ್ತುವುದು, ವಾಕರಿಕೆ ಮುಂತಾದ  ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 


ಯಾವ ವಯಸ್ಸಿನಲ್ಲಿ ಜನರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು : 
ಹೃದಯಾಘಾತವು ಯಾವುದೇ ವಯಸ್ಸಿನ ವ್ಯಕ್ತಿಗೆ ಬರಬಹುದು. ಆದರೂ 45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 55 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು  ಹೇಳಲಾಗುತ್ತದೆ. 


ಇದನ್ನೂ ಓದಿ : Green Tea ಅಷ್ಟೇ ಅಲ್ಲ Green Coffee ಕೂಡ ಮೇಣದಂತೆ ಬೊಜ್ಜು ಕರಗಿಸುತ್ತದೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.