ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು ಈ ರೋಗದ ಸಂಕೇತವಾಗಿರಬಹುದು..!
ರಕ್ತದಲ್ಲಿನ ಸಕ್ಕರೆಯ ಮಟ್ಟವು ದಿನದಿಂದ ದಿನಕ್ಕೆ ಹೆಚ್ಚಾಗುವ ಸಮಸ್ಯೆ ಅನೇಕರಲ್ಲಿ ಕಾಣಿಸುತ್ತದೆ. ಲಕ್ಷಾಂತರ ಜನರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಔಷಧಿಗಳ ಮೊರೆ ಹೋಗುತ್ತಾರೆ.
ಬೆಂಗಳೂರು : ಬದಲಾಗುತ್ತಿರುವ ಜೀವನಶೈಲಿಯಿಂದಾಗಿ (Changing Lifestyle) ಅನೇಕ ರೋಗಗಳು ಕಾಡಲು ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಹೃದಯಾಘಾತ, ಪೌಷ್ಟಿಕಾಂಶದ ಕೊರತೆ, ಹೈ-ಬಿಪಿ ಅಥವಾ ಶುಗರ್ ಲೆವೆಲ್ ಹೆಚ್ಚಳ ಇಂಥ ರೋಗಗಳು ಕಾಡಲು ಆರಂಭವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಸಿಗುತ್ತದೆ ಈ ಸಂಕೇತ :
ರಕ್ತದಲ್ಲಿನ ಸಕ್ಕರೆಯ ಮಟ್ಟವು (Blood sugar level) ದಿನದಿಂದ ದಿನಕ್ಕೆ ಹೆಚ್ಚಾಗುವ ಸಮಸ್ಯೆ ಅನೇಕರಲ್ಲಿ ಕಾಣಿಸುತ್ತದೆ. ಲಕ್ಷಾಂತರ ಜನರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಔಷಧಿಗಳ ಮೊರೆ ಹೋಗುತ್ತಾರೆ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬಹುದು.
ಇದನ್ನೂ ಓದಿ : ಮೊಸರಿನ ಜೊತೆ ಯಾವ ಕಾರಣಕ್ಕೂ ಈ ಐದು ವಸ್ತುಗಳನ್ನು ಸೇವಿಸಲೇ ಬಾರದು
ಪಾದಗಳಲ್ಲಿ ಕಂಡುಬರುವ ಬದಲಾವಣೆ :
ಪಾದಗಳು ಅನೇಕ ಬಾರಿ ಬಲಹೀನಗೊಂಡಂತೆ ಅನ್ನಿಸಬಹುದು . ಕೆಲವೊಮ್ಮೆ ಪಾದಗಳು ನಿರ್ಜೀವವಾದಂತೆ ಭಾಸವಾಗುತ್ತದೆ. ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವ ಸಂಕೇತವೂ ಆಗಿರಬಹುದು (Diabetic Patients Alert).
ಎರಡನೆಯದು ಪಾದಗಳಲ್ಲಿ ಊತ. ನಿಮ್ಮ ಪಾದಗಳಲ್ಲಿ ಊತವನ್ನು ಗಮನಿಸಿದರೆ ಸ್ವಲ್ಪ ಎಚ್ಚರದಿಂದಿರಬೇಕು (Sugar Level Symptoms). ಪಾದಗಳಲ್ಲಿನ ಊತವು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಹೆಚ್ಚಳವನ್ನು ಸೂಚಿಸುತ್ತದೆ.
ಇದನ್ನೂ ಓದಿ : Diabetes ರೋಗಿಗಳಿಗೆ ಭಾರೀ ಪ್ರಯೋಜನಕಾರಿ ಮನೆಯಲ್ಲಿಯೇ ಮಾಡಬಹುದಾದ ಈ ಖಾದ್ಯ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.