ಮೊಸರಿನ ಜೊತೆ ಯಾವ ಕಾರಣಕ್ಕೂ ಈ ಐದು ವಸ್ತುಗಳನ್ನು ಸೇವಿಸಲೇ ಬಾರದು

ಮೊಸರಿಗೆ ಈರುಳ್ಳಿಯನ್ನು ಸೇರಿಸಿದರೆ ತಿನ್ನಲು ಬಹಳ ರುಚಿಯಾಗಿರುತ್ತದೆ.  ಆದರೆ ಅದು  ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.  ಮೊಸರು ಮತ್ತು ಈರುಳ್ಳಿ ಎರಡರ ಪ್ರವೃತಿ ವಿಭಿನ್ನವಾಗಿರುತ್ತದೆ. 

Written by - Ranjitha R K | Last Updated : Mar 21, 2022, 01:43 PM IST
  • ಮೊಸರಿನೊಂದಿಗೆ ಕೆಲವು ವಸ್ತುಗಳನ್ನು ಸೇವಿಸಬಾರದು
  • ಇದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು
  • ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ಹಾನಿಕಾರಕ
ಮೊಸರಿನ ಜೊತೆ ಯಾವ ಕಾರಣಕ್ಕೂ ಈ ಐದು ವಸ್ತುಗಳನ್ನು ಸೇವಿಸಲೇ ಬಾರದು  title=
ಮೊಸರಿನೊಂದಿಗೆ ಕೆಲವು ವಸ್ತುಗಳನ್ನು ಸೇವಿಸಬಾರದು (file photo)

ಬೆಂಗಳೂರು : ಅನೇಕರು ಮೊಸರಿನೊಂದಿಗೆ ಎಲ್ಲಾ ಆಹಾರವನ್ನು ಬೆರೆಸಿ ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಆಹಾರದ ರುಚಿ ಹೆಚ್ಚುತ್ತದೆ (Curd Benefits). ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.  ಕೆಲವು ಪದಾರ್ಥಗಳನ್ನು ಮೊಸರಿನೊಂದಿಗೆ ಸೇವಿಸಲೇ ಬಾರದು (Food to avoid with curd). 
 
ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ಹಾನಿಕಾರಕ :
ಮೊಸರಿಗೆ ಈರುಳ್ಳಿಯನ್ನು (Onion) ಸೇರಿಸಿದರೆ ತಿನ್ನಲು ಬಹಳ ರುಚಿಯಾಗಿರುತ್ತದೆ.  ಆದರೆ ಅದು  ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.  ಮೊಸರು ಮತ್ತು ಈರುಳ್ಳಿ ಎರಡರ ಪ್ರವೃತಿ ವಿಭಿನ್ನವಾಗಿರುತ್ತದೆ.  ಈರುಳ್ಳಿ ಬಿಸಿ ಪ್ರವೃತಿಯದ್ದಾಗಿದ್ದರೆ, ಮೊಸರು (Curd) ತಂಪು.   ಹೀಗಾಗಿ ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ತುರಿಕೆ, ಎಸ್ಜಿಮಾ, ಸೋರಿಯಾಸಿಸ್, ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ಕಾಣಿಸಿಕೊಳ್ಳಬಹುದು. 

ಇದನ್ನೂ ಓದಿ :  Diabetes ರೋಗಿಗಳಿಗೆ ಭಾರೀ ಪ್ರಯೋಜನಕಾರಿ ಮನೆಯಲ್ಲಿಯೇ ಮಾಡಬಹುದಾದ ಈ ಖಾದ್ಯ !

ಮೊಸರಿನ ಜೊತೆ ಇವುಗಳನ್ನು ತಿನ್ನಬೇಡಿ :
ಮಾವು (Mango) ಮತ್ತು ಮೊಸರನ್ನು ಯಾವುದೇ ಕಾರಣಕ್ಕೂ ತಿನ್ನಬಾರದು.  ಮೊಸರು ಮತ್ತು ಮಾವು ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ವಿಷವಾಗಿ ಪರಿಣಮಿಸಬಹುದು. 

ಉದ್ದಿನಬೇಳೆ ಮತ್ತು ಮೊಸರು : 
ಉದ್ದಿನಬೇಳೆ ಮತ್ತು ಮೊಸರನ್ನು ಜೊತೆಯಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು  ಎದುರಿಸಬೇಕಾಗುತ್ತದೆ. ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ (Bad combination of food). 

ಇದನ್ನೂ ಓದಿ : ಉತ್ತಮ ನಿದ್ದೆಗೆ ಈ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ..!

ಹಾಲು ಮತ್ತು ಮೊಸರು : 
ಹಾಲು (milk) ಮತ್ತು ಮೊಸರು ಎರಡನ್ನೂ ಒಟ್ಟಿಗೆ ಸೇವಿಸಬಾರದು. ಹೀಗೆ ಮಾಡುವುದರಿಂದ ಅಸಿಡಿಟಿ, ಗ್ಯಾಸ್, ವಾಂತಿ ಸಮಸ್ಯೆ ಶುರುವಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಯ ಸಮಸ್ಯೆ ಕೂಡಾ ಕಾಡುತ್ತದೆ . 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News