ಬೆಂಗಳೂರು : ಚಳಿ ಹೆಚ್ಚಾಗುತ್ತಿದ್ದಂತೆ ಹೃದಯಾಘಾತ ಪ್ರಕರಣಗಳು ಕೂಡಾ  ಹೆಚ್ಚಾಗುತ್ತವೆ. ತಜ್ಞರ ಪ್ರಕಾರ, ಅಪಧಮನಿಗಳಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಹೃದಯಾಘಾತಕ್ಕೆ ಪ್ರಮುಖ ಕಾರಣ. ಕೊಲೆಸ್ಟ್ರಾಲ್ ಹೆಚ್ಚಳದಿಂದ ಅಪಧಮನಿಗಳು ಕಿರಿದಾಗಿದ್ದರೆ, ಹೊಟ್ಟೆಯಲ್ಲಿರುವ ಅಂಗಗಳಿಗೆ ರಕ್ತ ಪೂರೈಕೆ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಈ ಹಣ್ಣು ಸಹಾಯಮಾಡುತ್ತದೆ.


COMMERCIAL BREAK
SCROLL TO CONTINUE READING

ದಾಳಿಂಬೆಯಂತೆ ಸೇಬು ಕೂಡಾ ಹಲವು ರೋಗಗಳಿಗೆ ರಾಮಬಾಣ : 
ದೇಹದ ಅಪಧಮನಿಗಳನ್ನು ಕಿರಿದಾಗಿಸಲು ಅಥವಾ  ಬ್ಲಾಕ್ ಮಾಡಲು ಕೆಟ್ಟ ಕೊಲೆಸ್ಟ್ರಾಲ್ ಕಾರಣವಾಗಬಹುದು. ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಹಾಗಾಗಿ ಆಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಜೊತೆಗೆ, ಲಿಪಿಡ್ ಪ್ರೊಫೈಲ್ ಮಟ್ಟವನ್ನು ಕಾಯ್ದುಕೊಳ್ಳುವ ವಸ್ತುಗಳ ಸೇವನೆಯನ್ನು ಹೆಚ್ಚಿಸಬೇಕು. ಅಧಿಕ ಕೊಲೆಸ್ಟ್ರಾಲ್ ಇದ್ದಾಗ ಸೇಬು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ. 


ಇದನ್ನೂ ಓದಿ : ಈ ಮೂರು ಸೊಪ್ಪು ಸೇವಿಸಿದರೆ ಸಾಕು ನಿಯಂತ್ರಣಕ್ಕೆ ಬರುತ್ತದೆ ಡಯಾಬಿಟೀಸ್


ಅಧಿಕ ಕೊಲೆಸ್ಟ್ರಾಲ್ ಇದ್ದಾಗ ಸೇಬು ತಿನ್ನುವ ಪ್ರಯೋಜನಗಳು :
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಮತ್ತು ಇತರ ವಿಜ್ಞಾನ ಜರ್ನಲ್‌ಗಳಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯ ಸಮಯದಲ್ಲಿ ಸೇಬುಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ ಎಂದು ಹೇಳಲಾಗಿದೆ.  ಈ ಸಂಶೋಧನೆಯಲ್ಲಿ, 46 ಸ್ಥೂಲಕಾಯದ ರೋಗಿಗಳ ಮೇಲೆ ಎರಡು ತಿಂಗಳವರೆಗೆ ಸಂಶೋಧ ನಡೆಸಲಾಯಿತು. ಮಾತ್ರವಲ್ಲ ಅವರ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಸೇಬಿನ ಪಾಲಿಫಿನಾಲ್ ಗಳು ಮತ್ತು ಫೈಬರ್ ಹೇಗೆ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಕಂಡುಹಿಡಿಯಲಾಯಿತು. 


ತಾಜಾ ಸೇಬಿನಲ್ಲಿ 485 ಮಿಗ್ರಾಂ ಪಾಲಿಫಿನಾಲ್ ಮತ್ತು 4.03 ಗ್ರಾಂ/100 ಗ್ರಾಂ ಫೈಬರ್ ಇದೆ ಎನ್ನುವುದನ್ನು ಈ  ಸಂಶೋಧನೆಯಲ್ಲಿ ಹೇಳಲಾಗಿದೆ. 2 ತಿಂಗಳ ಕಾಲ ಸೇಬನ್ನು ನಿರಂತರವಾಗಿ ಸೇವಿಸುವುದರಿಂದ, ಬೊಜ್ಜು ಹೊಂದಿರುವ ಹೈಪರ್ಲಿಪಿಡೆಮಿಕ್ ಜನರ ಲಿಪಿಡ್ ಪ್ರೊಫೈಲ್ ಅನ್ನು ಸರಿಪಡಿಸಲಾಯಿತು. ಅದೇ ರೀತಿ, ಇನ್ನೊಂದು ವರದಿಯ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 2 ಸೇಬುಗಳನ್ನು ತಿನ್ನುವ ಮೂಲಕ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂದರೆ, ಪ್ರತಿದಿನ ಒಂದರಿಂದ ಎರಡು ಸೇಬುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಯಾಗಲು  ಸಹಾಯವಾಗುತ್ತದೆ.


 ಇದನ್ನೂ ಓದಿ : Milk In Cholesterol: ಹೃದ್ರೋಗಿಗಳು ಈ ಪ್ರಾಣಿಯ ಹಾಲನ್ನು ಸೇವಿಸಬೇಕಂತೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತಂತೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.