ಚಳಿಗಾಲಕ್ಕೆ ಬೆಸ್ಟ್ ಉಪಹಾರ : ಬಾಯಲ್ಲಿ ನೀರೂರಿಸುವ ಪೌಷ್ಟಿಕ ಉಪಹಾರಗಳಿವು .!

ಬೆಳಗ್ಗಿನ ಉಪಹಾರದಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸುವಂತೆ ಸೂಚಿಸಲಾಗುತ್ತದೆ. ಬೆಳಗಿನ ಉಪಹಾರದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವ ಆಹಾರವನ್ನೇ ಸೇವಿಸಬೇಕು.

Written by - Ranjitha R K | Last Updated : Jan 12, 2023, 07:41 PM IST
  • ಬೆಳಗಿನ ಉಪಹಾರ ಅತ್ಯಂತ ಪ್ರಮುಖ ಆಹಾರವಾಗಿದೆ.
  • ಬೆಳಗ್ಗಿನ ಉಪಹಾರದಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವಿಸಬೇಕು
  • ಶೀತ ಋತುವಿಗೆ ಸೂಕ್ತವಾದ ಆಹಾರಗಳ ಲಿಸ್ಟ್ ಇಲ್ಲಿದೆ
ಚಳಿಗಾಲಕ್ಕೆ ಬೆಸ್ಟ್ ಉಪಹಾರ : ಬಾಯಲ್ಲಿ ನೀರೂರಿಸುವ ಪೌಷ್ಟಿಕ ಉಪಹಾರಗಳಿವು .! title=

ಬೆಂಗಳೂರು : Winter Breakfast : ಬೆಳಗಿನ ಉಪಹಾರ ಅತ್ಯಂತ ಪ್ರಮುಖ ಆಹಾರವಾಗಿದೆ. ಯಾಕೆಂದರೆ ರಾತ್ರಿ ಊಟದ ನಂತರ ಬಹಳ ಹೊತ್ತಿನ ವಿರಾಮದ ಬಳಿಕ ಬೆಳಿಗ್ಗೆ ಉಪಹಾರ ಮಾಡಲಾಗುತ್ತದೆ. ಈ ಮೂಲಕ ದೀರ್ಘ ಕಾಲದ ಉಪವಾಸಕ್ಕೆ ಬ್ರೇಕ್ ಹಾಕಲಾಗುತ್ತದೆ. ಇದೇ ಕಾರಣಕ್ಕೆ ಬೆಳಗ್ಗಿನ ಉಪಹಾರವನ್ನು ಇಂಗ್ಲಿಷ್ ನಲ್ಲಿ ಬ್ರೇಕ್ ಫಾಸ್ಟ್ ಎಂದು ಕರೆಯಲಾಗುತ್ತದೆ. ಬೆಳಗ್ಗಿನ ಉಪಹಾರದಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸುವಂತೆ ಸೂಚಿಸಲಾಗುತ್ತದೆ.  ಬೆಳಗಿನ ಉಪಹಾರದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವ ಆಹಾರವನ್ನೇ ಸೇವಿಸಬೇಕು.

ಶೀತ ಋತುವಿಗೆ ಸೂಕ್ತವಾದ ಆಹಾರ :
ಸಾಮಾನ್ಯವಾಗಿ ಚಳಿಗಾಲದಲ್ಲಿ ಅನೇಕ ಸೋಂಕುಗಳ ಸಮಸ್ಯೆ ಎದುರಾಗುತ್ತದೆ. ಚಳಿಗಾಲದಲ್ಲಿ ಶೀತ ಮತ್ತು ಜ್ವರದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇದಕ್ಕಾಗಿ ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. 

ಇದನ್ನೂ ಓದಿ : Health Tips : ಈ ಆರೋಗ್ಯ ಸಮಸ್ಯೆ ಇದ್ದರೆ ಉದ್ದಿನ ಬೇಳೆ ಹಾಕಿದ ಇಡ್ಲಿ- ದೋಸೆ ತಿನ್ನಲೇ ಬಾರದು!

ಚಳಿಗಾಲಕ್ಕೆ ಬೆಸ್ಟ್ ಉಪಹಾರ : 
ರವೆ ಉಪ್ಪಿಟ್ಟು  : 
ಸಾಮಾನ್ಯವಾಗಿ ದೇಹದ ಮೂಳೆಗಳು ಮತ್ತು ನರಕ್ಕೆ ಇದು ಪ್ರಯೋಜನಕಾರಿಯಾಗಿದೆ. ರವೆ ಬೋನ್ ಡೆನ್ಸಿಟಿ ಹೆಚ್ಚಿಸುತ್ತದೆ. ರವೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿಯೂ ಸಹಾಯ ಮಾಡುತ್ತದೆ. ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಅಧಿಕ ಪೋಷಕಾಂಶಗಳಿಂದ ಕೂಡಿದ್ದು, ಇದರಲ್ಲಿ ಕೊಬ್ಬಿನ ಅಂಶ ಕೂಡಾ ಇರುವುದಿಲ್ಲ. ತೂಕ ನಿಯಂತ್ರಣಕ್ಕೂ ಇದು ಸಹಾಯ ಮಾಡುತ್ತದೆ.   

ಬೇಯಿಸಿದ ಕಡಲೆ ಕಾಳು : 
ಚಳಿಗಾಲದಲ್ಲಿ, ಬೆಳಗಿನ ಉಪಹಾರದಲ್ಲಿ ಬೇಯಿಸಿದ ಕಡಲೆ ಕಾಳನ್ನು  ತಿನ್ನುವುದರಿಂದ ದೇಹಕ್ಕೆ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ದೊರೆಯುತ್ತವೆ.

ಇದನ್ನೂ ಓದಿ : ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಈ 5 ಹಣ್ಣುಗಳನ್ನು ಸೇವಿಸಬಾರದು

ಬೆಳಗಿನ ಉಪಹಾರದಲ್ಲಿ ಸಿಹಿ ಗೆಣಸು : 
ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಬಿ, ಕಬ್ಬಿಣ, ಪೊಟ್ಯಾಸಿಯಮ್ ನಲ್ಲಿ ಸಮೃದ್ಧವಾಗಿವೆ. ಸಿಹಿ ಗೆಣಸಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ.  ಕಿರಿಯರಿಂದ ಹಿರಿಯರವರೆಗೂ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಮೂಳೆಗಳ ಆರೋಗ್ಯವನ್ನು ಇದು ಕಾಪಾಡುತ್ತದೆ.

ಬೆಳಗಿನ ಉಪಹಾರಕ್ಕೆ ದೋಸೆ :
ನಮ್ಮ ದೇಹಕ್ಕೆ ಶಕ್ತಿಗಾಗಿ ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ. ಕಾರ್ಬೋಹೈಡ್ರೇಟ್‌ಗಳು ದೋಸೆಯ ಮೂಲಕ ಲಭ್ಯವಾಗುತ್ತದೆ. ಅದೇ ರೀತಿ, ದೋಸೆ ಸೇವನೆ ಮೂಲಕ ಖನಿಜಗಳು ಮತ್ತು ವಿಟಮಿನ್ ಗಳು ಕೂಡಾ ದೇಹಕ್ಕೆ ಸಿಗುತ್ತದೆ. 

ಎರಡು ಮೊಟ್ಟೆ :
ಮೊಟ್ಟೆಯ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಬೆಳಗಿನ ಉಪಹಾರಕ್ಕಾಗಿ ಎರಡು ಮೊಟ್ಟೆಯ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ಸೇವಿಸಿದರೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಶಕ್ತಿ ಸಿಗುತ್ತದೆ. 

ರಾಗಿ ರೊಟ್ಟಿ :
ರಾಗಿಯು ಇತರ ಧಾನ್ಯಗಳಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಧಾನ್ಯವಾಗಿದೆ. ರಕ್ತಹೀನತೆ, ಅಧಿಕ ತೂಕ, ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಆರೋಗ್ಯಕರ ಆಹಾರವಾಗಿದೆ. ಹಾಗಾಗಿ ಬೆಳಗಿನ ಉಪಹಾರಕ್ಕೆ ರಾಗಿ ರೊಟ್ಟಿ ಅತ್ಯುತ್ತಮ ಆಯ್ಕೆಯಾಗಿದೆ.

 

(ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News