ಇಂದು ನಾವು ನಿಮಗಾಗಿ ಮನೆಯಲ್ಲಿ ತಯಾರಿಸುವ ಪಾಕವಿಧಾನ ತಂದಿದ್ದೇವೆ, ಇದನ್ನು ಮೊಸರು ಮತ್ತು ಒಣದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಈ ಪಾಕವಿಧಾನವು ಪುರುಷರ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ.  ನಾವು ನಿಮಗೆ ಈ ಪಾಕವಿಧಾನ ಮತ್ತು ಬಳಕೆಯ ವಿಧಾನವನ್ನು ಸಹ ಹೇಳುತ್ತಿದ್ದೇವೆ. ನೀವು ದೈಹಿಕ ದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಿದ್ರೆ, ಈ ಪಾಕವಿಧಾನವು ನಿಮಗೆ ಅದ್ಭುತ ಪ್ರಯೋಜನ ನೀಡುತ್ತದೆ.


COMMERCIAL BREAK
SCROLL TO CONTINUE READING

ಒಣದ್ರಾಕ್ಷಿ ಟೆಸ್ಟೋಸ್ಟೆರಾನ್ ವರ್ಧಿಸುವ ಆಹಾರಗಳ ವರ್ಗಕ್ಕೆ ಬರುತ್ತದೆ. ಇದರಲ್ಲಿರುವ ಹಾರ್ಮೋನ್(Hormone)  ಪುರುಷರ ಲೈಂಗಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಪುರುಷರಲ್ಲಿ ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಮೊಸರು ಸಹಾಯ ಮಾಡುತ್ತದೆ. ಆದ್ದರಿಂದ, ಈ ಪಾಕವಿಧಾನ ಪುರುಷರ ಆರೋಗ್ಯಕ್ಕೆ ಪರಿಣಾಮಕಾರಿಯಾಗಿದೆ.


ಇದನ್ನೂ ಓದಿ : ಅಡುಗೆ ಮನೆಯ ಪುದಿನದ ಆರೋಗ್ಯ ಲಾಭ ಅಷ್ಟಿಷ್ಟಲ್ಲ..! ಖಂಡಿತಾ ತಿಳಿಯಬೇಕು


ಒಣದ್ರಾಕ್ಷಿಯಲ್ಲಿ ಏನಿದೆ? 


ಒಣದ್ರಾಕ್ಷಿ(Raisins)ಯಲ್ಲಿ ಕಬ್ಬಿಣ ಪ್ರಮಾಣವು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಇದು ರಕ್ತಹೀನತೆಯಿಂದ ರಕ್ಷಿಸುತ್ತದೆ. ಇದಲ್ಲದೆ, ಇದು ತಾಮ್ರವನ್ನೂ ಸಹ ಹೊಂದಿರುತ್ತದೆ, ಈ ಕಾರಣದಿಂದಾಗಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯಕಾರಿಯಾಗಿದೆ. ಒಣದ್ರಾಕ್ಷಿಯಲ್ಲಿ ವಿಟಮಿನ್ ಎ, ಬಿ-ಕಾಂಪ್ಲೆಕ್ಸ್ ಮತ್ತು ಸೆಲೆನಿಯಮ್ ಕಂಡು ಬರುತ್ತದೆ, ಇದು ಯಕೃತ್ತು, ಸುಪ್ತ ರೋಗಗಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯನ್ನು ಉತಪಡಿಸಲು ತುಂಬಾ ಸಹಾಯಕಾರಿಯಾಗಿದೆ.


ಇದನ್ನೂ ಓದಿ : Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ


ಮೊಸರಿನಲ್ಲಿ ಏನಿದೆ? 


ಮೊಸರಿ(Curd)ನಲ್ಲಿ ರಂಜಕ, ಪ್ರೋಟೀನ್, ಲ್ಯಾಕ್ಟೋಸ್, ಕ್ಯಾಲ್ಸಿಯಂನಂತಹ ರಾಸಾಯನಿಕ ವಸ್ತುಗಳು ಅದರಲ್ಲಿ ಸಾಕಷ್ಟು ಕಂಡುಬರುತ್ತವೆ. ಬೇಸಿಗೆಯಲ್ಲಿ ದೇಹಕ್ಕೆ ಇದು ಅವಶ್ಯಕವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಮೊಸರು ತಿನ್ನುವುದು ಪುರುಷರಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ : Covid Vaccine ಪಡೆಯುವವರು ಎಷ್ಟು ದಿನ ಆಲ್ಕೋಹಾಲ್ ಕುಡಿಯಬಾರದು? ತಜ್ಞರು ಏನ್ ಹೇಳ್ತಾರೆ


ಯಾವ ಸಮಯದಲ್ಲಿ ಇವುಗಳನ್ನ ಸೇವಿಸಬೇಕು? 


ನೀವು ಬೆಳಿಗ್ಗೆ ಅಥವಾ ಮಧ್ಯಾಹ್ನ ಮೊಸರು ಮತ್ತು ಒಣದ್ರಾಕ್ಷಿ ಸೇವಿಸಬಹುದು.


ಇದನ್ನೂ ಓದಿ : Benefits of Dates : ವಿವಾಹಿತರೇ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ 3 ಆಹಾರ ಸೇವಿಸಿ!


ಇವುಗಳನ್ನ ತಯಾರಿಸುವ ವಿಧಾನ :


ಮೊದಲನೆಯದಾಗಿ, ಒಂದು ಬಟ್ಟಲಿನಲ್ಲಿ ಬಿಸಿ ಹಾಲನ್ನು ತೆಗೆದುಕೊಳ್ಳಿ.
ಈಗ ಹಾಲಿಗೆ ಒಣದ್ರಾಕ್ಷಿ ಸೇರಿಸಿ.
ಇದರ ನಂತರ ಒಂದು ಚಮಚ ಮೊಸರು ಸೇರಿಸಿ ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ
ಇದರ ನಂತರ, ಬೌಲ್ ಅನ್ನು ಹತ್ತು ಹನ್ನೆರಡು ಗಂಟೆಗಳ ಕಾಲ ಮುಚ್ಚಿಡಿ.
ಇದರ ನಂತರ, ಮೊಸರು ಚೆನ್ನಾಗಿ ಹೆಪ್ಪುಗಟ್ಟಿದಾಗ ಅದನ್ನು ಸೇವಿಸಿ


ಇದನ್ನೂ ಓದಿ : Peanuts Benefits : ಶೇಂಗಾದಲ್ಲಿದೆ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಗುಟ್ಟು : ಹೇಗೆ ಇಲ್ಲಿದೆ ನೋಡಿ 


ಈ ಪಾಕವಿಧಾನದ ಪ್ರಯೋಜನಗಳು: 


ಇದರಿಂದ ದೈಹಿಕ ದೌರ್ಬಲ್ಯ ಮತ್ತು ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ದೇಹದ ಮೂಳೆಗಳು ಸಹ ಬಲವಾಗಿರುತ್ತವೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.