Peanuts Benefits : ಶೇಂಗಾದಲ್ಲಿದೆ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಗುಟ್ಟು : ಹೇಗೆ ಇಲ್ಲಿದೆ ನೋಡಿ 

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

Last Updated : May 8, 2021, 12:52 PM IST
  • ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಶೇಂಗಾ
  • ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
  • ಯಾವ ಸಮಯದಲ್ಲಿ ಶೇಂಗಾ ಸೇವಿಸಬೇಕು
Peanuts Benefits : ಶೇಂಗಾದಲ್ಲಿದೆ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಗುಟ್ಟು : ಹೇಗೆ ಇಲ್ಲಿದೆ ನೋಡಿ  title=

ನೆನೆಸಿದ ಶೇಂಗಾ ಮತ್ತು ಬೆಲ್ಲದ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗಾಗಿ ತಂದಿದ್ದೇವೆ. ಏಕೆಂದರೆ ಬೆಲ್ಲ ಜೊತೆ ನೆನೆಸಿದ ಶೇಂಗಾ ಸೇವಿಸುವುದರಿಂದ ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ವಾಸ್ತವವಾಗಿ, ಶೇಂಗಾ ಮತ್ತು ಬೆಲ್ಲ ಎರಡೂ ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ಹೊಟ್ಟೆಯ ಕಾಯಿಲೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದರೊಂದಿಗೆ, ಚಯಾಪಚಯ ಕ್ರಿಯೆಯನ್ನು ಸುಲಭವಾಗಿ ವೇಗಗೊಳಿಸುವಂತಹ ಗುಣಲಕ್ಷಣಗಳನ್ನು ಹೊಂದಿವೆ. ಇದರೊಂದಿಗೆ ನೀವು ಶಕ್ತಿಯನ್ನು ಪಡೆಯುತ್ತೀರಿ ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಲೆಕಾಯಿಯಲ್ಲಿ ಏನು ಕಂಡುಬರುತ್ತದೆ : 

ಮೊದಲನೆಯದಾಗಿ, ಶೇಂಗಾ(Peanuts)ದಲ್ಲಿ  ಏನಿದೆ ಎಂದು ನೋಡೋಣ. ದೇಹಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾದ ಪ್ರೋಟೀನ್, ಕೊಬ್ಬು, ಜೀವಸತ್ವಗಳು, ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಖನಿಜಗಳಲ್ಲಿ ಕಡಲೆಕಾಯಿಗಳು ಕಂಡುಬರುತ್ತವೆ.

ಇದನ್ನೂ ಓದಿ : Center Releases List Of Immunity Boosters - ಇಮ್ಯೂನಿಟಿ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ

ಕಡಲೆಕಾಯಿ ತಿನ್ನುವುದರ ಪ್ರಯೋಜನಗಳು : 

1. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ:

ಶೇಂಗಾ ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತವೆ, ಇದು ಇನ್ಸುಲಿನ್(Insulin) ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಸುಲಭವಾಗುತ್ತದೆ.

ಇದನ್ನೂ ಓದಿ : Pumpkin Seeds Benefits : ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜ : ಇಲ್ಲಿದೆ ನೋಡಿ ಅದರ ಪ್ರಯೋಜನ!

2. ರಕ್ತಹೀನತೆ ನಿವಾರಣೆಗೆ :

ನೆನೆಸಿದ ಶೇಂಗಾ ಬೇಸಿಗೆಯಲ್ಲಿಯೂ ತಿನ್ನಬೇಕು. ನೆನೆಸಿದ ಶೇಂಗಾ ಸೇವಿಸುವುದರಿಂದ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ, ಇದು ದೇಹದಲ್ಲಿನ ರಕ್ತ(Blood)ದ ಕೊರತೆಯನ್ನು ತೆಗೆದುಹಾಕುತ್ತದೆ ಮತ್ತು ರಕ್ತ ಪರಿಚಲನೆ ಚೆನ್ನಾಗಿರುತ್ತದೆ.

ಇದನ್ನೂ ಓದಿ : Covid-19: Oximeter ಬಗ್ಗೆ ಈ ಪ್ರಮುಖ ವಿಷಯಗಳನ್ನು ತಪ್ಪದೇ ತಿಳಿಯಿರಿ

3. ಚರ್ಮವನ್ನು ಆರೋಗ್ಯಕ್ಕೆ ಶೇಂಗಾ : 

ಚರ್ಮ(Skin)ವನ್ನು ಹೊಳೆಯುವಂತೆ ಮಾಡಲು ಕಡಲೆಕಾಯಿ ಸಹಕಾರಿಯಾಗಿದೆ. ಇದು ಒಮೆಗಾ 6 ಕೊಬ್ಬನ್ನು ಹೊಂದಿರುತ್ತದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Corona: ನೀವು ಕರೋನಾ ಸೋಂಕಿಗೆ ಒಳಗಾಗಿದ್ದರೆ ಅಪ್ಪಿ-ತಪ್ಪಿಯೂ ಇವುಗಳನ್ನು ತಿನ್ನಬೇಡಿ

4. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಶೇಂಗಾ :

ನಿಮಗೆ ಮಲಬದ್ಧತೆ(Loose Motion) ಸಮಸ್ಯೆ ಇದ್ದರೆ ವಾರಕ್ಕೆ 100 ಗ್ರಾಂ ಶೇಂಗಾ ತಿನ್ನಿರಿ. ಹೀಗೆ ಮಾಡುವುದರಿಂದ, ಶೇಂಗಾದಲ್ಲಿರುವ ಅಂಶಗಳು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ : WHO ALERT : ಊಟದ ಉಪ್ಪಿಗೊಂದು ಮಿತಿ ಇರಲಿ. ಅತಿ ಆದರೆ ಬರುತ್ತೆ ಗಂಭೀರ ಕಾಯಿಲೆ ಗೊತ್ತಿರಲಿ

5. ದೇಹಕ್ಕೆ ಶಕ್ತಿ ಪಡೆಯಲು ಶೇಂಗಾ :  

ಬಾದಾಮಿ(Badami) ಮತ್ತು ಮೊಟ್ಟೆ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುವಂತೆ. ಅದೇ ರೀತಿ ಶೇಂಗಾ ತಿನ್ನುವುದರಿಂದ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ : Garlic Tea : ಕೊರೋನಾ ಕಾಲದಲ್ಲಿ ಸೇವಿಸಿ ಬೆಳ್ಳುಳ್ಳಿ ಚಹಾ ; ಇದರಿಂದ ಪಡೆಯಿರಿ ಅದ್ಭುತ ಪ್ರಯೋಜನ!

ಪುರುಷರು ಮತ್ತು ಮಹಿಳೆಯರ ಆರೋಗ್ಯಕ್ಕೆ ಶೇಂಗಾ : 

ಪುರುಷರು(Men) ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳು ಪ್ರತಿದಿನ ಕಡಲೆಕಾಯಿಯನ್ನು ತಿನ್ನುವುದರಿಂದ ಸಮತೋಲನಗೊಳ್ಳುತ್ತದೆ. ಇದು ನಿಮ್ಮ ಲೈಂಗಿಕ ಜೀವನವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ.

ಇದನ್ನೂ ಓದಿ : Covid-19: ದೇಹದಲ್ಲಿ ಆಮ್ಲಜನಕದ ಮಟ್ಟ ಎಷ್ಟಿರಬೇಕು? ಕಡಿಮೆ Oxygen level ಗುರುತಿಸುವುದು ಹೇಗೆ?

ಯಾವ ಸಮಯದಲ್ಲಿ ಶೇಂಗಾ ಸೇವಿಸಬೇಕು : 

ನೀವು ದಿನ ರಾತ್ರಿ(Night) ಮಲಗುವ ಮೊದಲು ಶೇಂಗಾವನ್ನ ನೀರಿನಲ್ಲಿ ನೆನೆಯಲು ಇಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಇದರಿಂದ ಅದರಲ್ಲಿರುವ ಪಿತ್ತರಸವನ್ನು ಬಿಡುತ್ತದೆ. ಅವುಗಳನ್ನ  ಬೆಳಿಗ್ಗೆ ನೀವು ಉಪಾಹಾರಕ್ಕೆ ಮೊದಲು ಅಥವಾ ಅದರೊಂದಿಗೆ ತಿನ್ನಬಹುದು. ರಾತ್ರಿ ಶೇಂಗಾ ಸೇವಿಸಬಾರದು. ಏಕೆಂದರೆ ಕಡಲೆಕಾಯಿ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News