Thumbe Plant Benefits : ಶಿವನಿಗೆ ಶ್ರೇಷ್ಠವಾದ `ತುಂಬೆ ಹೂ`ವಿನಲ್ಲಿದೆ ನಾನಾ ರೋಗ ವಾಸಿ ಮಾಡುವ ಶಕ್ತಿ!
ಈ ತುಂಬೆ ಹೂನಲ್ಲಿ ಸಾಕಷ್ಟು ಕಾಯಿಲೆ ವಾಸಿ ಮಾಡುವ ಗುಣವು ಅಡಗಿದೆ
ತುಂಬೆ ಹೂ ಯಾರು ನೋಡಿಲ್ಲ ಹೇಳಿ? ಆ ಪುಟ್ಟ ಪುಟ್ಟ ಬಿಳಿಯ ಹೂಗಳನ್ನ ನೋಡಿದ್ರೆ ಅದೆಷ್ಟೋ ಖುಷಿ. ಜೊತೆಗೆ ಎಲ್ಲಾ ದೇವರಿಗೂ ಈ ಹೂಗಳಿಂದ ಪೂಜೆ ಮಾಡುತ್ತಾರೆ. ಜೊತೆಗೆ ತುಂಬೆ ಹೂ ಶಿವನಿಗೆ ತುಂಬಾ ಶ್ರೇಷ್ಠ. ಆದ್ರೆ ಈ ತುಂಬೆ ಹೂನಲ್ಲಿ ಸಾಕಷ್ಟು ಕಾಯಿಲೆ ವಾಸಿ ಮಾಡುವ ಗುಣವು ಅಡಗಿದೆ.
ಕೀಟನಾಶಕ ಮತ್ತು ಜ್ವರ(Fever) ನಿವಾರಣೆಗಾಗಿ ಇದರ ಎಲೆಯ ರಸವನ್ನು ಬಳಸಬಹುದಾಗಿದೆ. ಎಲೆಗಳನ್ನು ಬಹಳ ಕಾಲದವರೆಗೆ ಹಾವು ಕಡಿತಕ್ಕೆ ಔಷಧವಾಗಿ ಬಳಸುವುದೂ ವಾಡಿಕೆಯಲ್ಲಿತ್ತು.
ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನುವ ತಪ್ಪು ಎಂದೂ ಮಾಡಬೇಡಿ
ಸಂಧಿವಾತ, ಚರ್ಮರೋಗ(Skin Disease), ಕೆಮ್ಮು, ಗಂಟಲುಬೇನೆ, ನೆಗಡಿ ಮುಂತಾದವುಗಳಿಗೆ ಮನೆಮದ್ದಾಗಿ ಬಳಸುವ ವಾಡಿಕೆ ಇಂದಿಗೂ ಇದೆ.
ಇದನ್ನೂ ಓದಿ : Jeera To Increase Breast Milk: ಎದೆ ಹಾಲಿನ ಕೊರತೆ ನಿವಾರಣೆಗೆ ಸೇವಿಸಿ ಜೀರಿಗೆ ಹಾಲು
ಕೆಂಪು ಹಾಗೂ ಬಿಳಿ ಬಣ್ಣಗಳ ಹೂವುಗಳಿಂದ ಆಕರ್ಷಿಸುವ ತುಂಬೆಯ ಗಿಡ(Thumbe Tree), ಅದರ ಎಲೆ, ಕಾಂಡ ಎಲ್ಲವೂ ಅಪಾರ ಔಷಧ ಗುಣಗಳನ್ನು ಹೊಂದಿವೆ.
ಒಂದು ಭಾಗ ತುಂಬೆ ಗಿಡದ ಎಲೆಗೆ ಕಾಲು ಭಾಗ ಬೆಲ್ಲ ಸೇರಿಸಿ ಅರೆದು ಮಂಗನ ಬಾವು ಉಂಟಾದ ಸ್ಥಳದಲ್ಲಿ ಹಚ್ಚಿದರೆ ಅದು ಕಡಿಮೆಯಾಗುತ್ತದೆ.
ಇದನ್ನೂ ಓದಿ : ಈ ಐದು ಆಹಾರ ತಿಂದರೆ ನಿಮ್ಮ ಲಿವರ್ ಹೆಲ್ತಿಯಾಗಿರುತ್ತದೆ.
10-15 ಹನಿ ಹೂವಿನ ರಸಕ್ಕೆ 20-30 ಹನಿ ಜೇನುತುಪ್ಪ ಬೆರೆಸಿ 3-4 ಬಾರಿ ಆಹಾರ(Food)ಕ್ಕೆ ಮುಂಚೆ ಸೇವಿಸಿದರೆ ಶೀತ ಕಮ್ಮಿಯಾಗುತ್ತದೆ.
ಇದನ್ನೂ ಓದಿ : Drinking Milk : ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ರೆ, ತಪ್ಪದೆ ಇದನ್ನು ಓದಿ
ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ತಲೆನೋವು(Headache), ಭಾರ ಕಡಿಮೆಯಾಗುತ್ತದೆ. 10 ಮಿಲಿ ತುಂಬೆ ಗಿಡದ ರಸದ ಜತೆ 5ಗ್ರಾಂ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿದರೆ ವಿಷಮ ಜ್ವರವು ಕಡಿಮೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.