ನವದೆಹಲಿ : ರಾಗಿ (Ragi) ಬಗ್ಗೆ ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಾಗಿಯ ಆರೋಗ್ಯ (Health) ರಹಸ್ಯ ತಿಳಿದೋ ಏನೋ, ಭಕ್ತ ಕನಕದಾಸರು ರಾಗಿಯನ್ನು `ರಾಮಧಾನ್ಯ' ಎಂದೇ ಕರೆದಿದ್ದಾರೆ. ಆದರೆ, ಪಟ್ಟಣ ಪ್ರದೇಶದ ಜನರಲ್ಲಿ ಹಾಗೂ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಜನರಿಗೆ ರಾಗಿ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಜೊತೆಗೆ ರಾಗಿಯ ಬಳಕೆ ಹೇಗೆ ಅನ್ನೋದು ಅರಿವು ಕೂಡಾ ಇಲ್ಲ. ಆದರೆ, ದಕ್ಷಿಣ ಕರ್ನಾಟದವರಿಗೆ ರಾಗಿಯ ಬಗ್ಗೆ ಹೇಳಬೇಕಿಲ್ಲ.  ಇವತ್ತು ನಾವು ಹೇಳೋದು ರಾಗಿ ಮುದ್ದೆ ಅಲ್ಲ. ರಾಗಿ ರೊಟ್ಟಿಯ (Ragi Roti) ಬಗ್ಗೆ. ರಾಗಿ ರೊಟ್ಟಿ ಆರೋಗ್ಯಕ್ಕೆ ಯಾಕೆ ಒಳ್ಳೆಯದು ಹಾಗೂ ಮಾಡುವುದು ಹೇಗೆ ತಿಳಿದುಕೊಳ್ಳೋಣ. ರಾಗಿ ರೊಟ್ಟಿ ಆರೋಗ್ಯಕ್ಕೆ (Ragi Health Benefits) ಯಾಕೆ ಒಳ್ಳೆಯದು ತಿಳಿದುಕೊಳ್ಳಿ.


COMMERCIAL BREAK
SCROLL TO CONTINUE READING

1. ಮೂಳೆ ಕೀಲು ಸಮಸ್ಯೆ ದೂರ ಮಾಡುತ್ತದೆ :
ರಾಗಿಯಲ್ಲಿ (Ragi) ಪ್ರೊಟೀನ್, ಡಯಟರಿ ಫೈಬರ್, ವಿಟಮಿನ್ ಸಹಿತ ಇನ್ನೂ ಹಲವು ಅಗತ್ಯ ಪೋಷಕ ತತ್ವ ಇರುತ್ತದೆ. ಇದು ಕೀಲುನೋವು ಸಮಸ್ಯೆಯನ್ನು ದೂರಮಾಡುತ್ತದೆ. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯಕ್ಕೆ (Health) ಇದು ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆಗೂ (Digestion) ನೆರವಾಗುತ್ತದೆ.


ಇದನ್ನೂ ಓದಿ : Milk Benefits: ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಉತ್ತಮ ಆರೋಗ್ಯ ನಿಮ್ಮದಾಗಿಸಿ


2. ಅರ್ಥರೈಟಿಸ್ ಇರುವವರು ತಿನ್ನಲೇಬೇಕು.!
ರಾಗಿಯಲ್ಲಿ ಆಂಟಿ ಇನ್ ಫ್ಲೆಮೇಟರಿ ಗುಣ ಇರುತ್ತದೆ. ನಿಮಗೆ ಗೊತ್ತಿದೆ. ಇದು ಹೊಟ್ಟೆಯನ್ನು (Stomach) ತಣ್ಣಗೆ ಇಡುತ್ತದೆ. ರಾಗಿ ರೊಟ್ಟಿ ತಿನ್ನುವುದರಿಂದ ಅರ್ಥರೈಟಿಸ್ ಸಮಸ್ಯೆ ದೂರವಾಗುತ್ತದೆ. ಅರ್ಥರೈಟಿಸ್ (Arthritis) ಇರುವವರು ತಮ್ಮ ಡಯಟ್ ನಲ್ಲಿ (Diet) ರಾಗಿ ರೊಟ್ಟಿ ಇಟ್ಟಿರಲೇ ಬೇಕು. 


3. ಮೂಳೆ ಬಲಿಷ್ಠವಾಗುತ್ತದೆ : 
ರಾಗಿ ರೊಟ್ಟಿಯಲ್ಲಿ ಸಾಕಷ್ಟು ಭರ್ಜರಿ ಕ್ಯಾಲ್ಸಿಯಂ (Calcium) ಮತ್ತು ಪಾಸ್ಪರಸ್ ಅಂಶ ಇರುತ್ತದೆ. ರಾಗಿ ರೊಟ್ಟಿಯನ್ನು ನಿಯಮಿತವಾಗಿ ತಿಂದರೆ, ಮೂಳೆ ಬಲಿಷ್ಠವಾಗುತ್ತದೆ. ವೀಕ್ ನೆಸ್ (Weakness) ಇರುವವರಿಗೆ ರಾಗಿ ರೊಟ್ಟಿ ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ.


4. ಹೃದಯಾರೋಗ್ಯಕ್ಕೆ ಬೆಸ್ಟ್ :
ಕೊಲೆಸ್ಟರಾಲ್ (Cholesterol)  ಲೆವೆಲ್ ನಿಯಂತ್ರಿಸುವಲ್ಲಿ ರಾಗಿ ಸಾಕಷ್ಟು ನೆರವಾಗುತ್ತದೆ. ಹಾಗಾಗಿ ಇದು ಹೃದಯಕ್ಕೆ ಒಳ್ಳೆಯದು. ಜೊತೆಗೆ ಇದರಲ್ಲಿ ಮೆಗ್ನೇಶಿಯಂ ಮತ್ತು ಪೊಟಾಶಿಯಂ ಅಂಶವೂ ಭರ್ಜರಿಯಾಗುತ್ತದೆ. ಹಾಗಾಗಿ ಇದು ರಕ್ತದೊತ್ತಡ (Blood pressure) ನಿಯಂತ್ರಣದಲ್ಲಿರುತ್ತದೆ. 


ಇದನ್ನೂ ಓದಿ : For Longer Life: ವಾರಕ್ಕೆ ಐದು ದಿನ ಹೀಗೆ ಮಾಡಿ ನೋಡಿ..! ದೀರ್ಘಾಯುಷಿಗಳಾಗುತ್ತೀರಿ..!


5. ಮೂಳೆ ಪ್ರ್ಯಾಕ್ಚರ್ ಆಗುವ ಸಮಸ್ಯೆ ಇಲ್ಲ :
ರಾಗಿಯಲ್ಲಿ ಕ್ಯಾಲ್ಸಿಯಂ ಅಂಶ ಚೆನ್ನಾಗಿರುತ್ತದೆ. ರಾಗಿಯಲ್ಲಿ ಅಸ್ಟಿಯೋಪೆರೋಸಿಸ್ ಅಂಶವೂ ಭರ್ಜರಿಯಾಗಿರುತ್ತದೆ. ಇದು ಮೂಳೆ ಫ್ರ್ಯಾಕ್ಚರ್ (Fracture) ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ. 


6. ಮಧುಮೇಹಿಗಳ ಸ್ನೇಹಿತ : 
ನಿಮಗೆ ಗೊತ್ತೇ ಇದೆ. ಮಧುಮೇಹಿಗಳು ರಾಗಿ ತಿಂದರೆ ತುಂಬಾ ಒಳ್ಳೆಯದು. ಇದು ಶುಗರ್ ಲೆವೆಲ್ ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ನಿಮ್ಮನ್ನು ದಿನವಿಡಿ ಉಲ್ಲಸಿತವಾಗಿಡುತ್ತದೆ.


ರಾಗಿ ರೊಟ್ಟಿ ಮಾಡುವುದು ಹೇಗೆ..?
1. ಮೊದಲು ರಾಗಿ ಹಿಟ್ಟಿನಲ್ಲಿ ನಿಮಗೆ ಇಷ್ಟವಿರುವ ತರಕಾರಿಯನ್ನು (Vegetables)ತುರಿದು ಮಿಕ್ಸ್ ಮಾಡಿ
2. ನೀವು ಈರುಳ್ಳಿ (ONION), ಕ್ಯಾರೇಟ್ (Carrot), ಬಿಟ್ ರೂಟ್ ಇತ್ಯಾದಿ ಕೂಡಾ ತುರಿದು ಮಿಕ್ಸ್ ಮಾಡಬಹುದು
3. ಇದಾದ ಮೇಲೆ ಹಿಟ್ಟಿಗೆ ಸ್ವಲ್ಪ ಮಸಾಲೆ ಮತ್ತು ಉಪ್ಪು ಸೇರಿಸಿ (ರುಚಿಗೆ ತಕ್ಕಂತೆ)
4. ಬಳಿಕ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ನಾದಿ. ಗೋಧಿ ಹಿಟ್ಟು ನಾದಿದ ಹಾಗೆ.
5. ಹಿಟ್ಟು ನಾದಿದ ಮೇಲೆ ಒಂದು 15 ನಿಮಿಷ ಹಾಗೆ ಇಡಿ.
6. ಬಳಿಕ ಅದನ್ನು ರೊಟ್ಟಿಯ ರೂಪದಲ್ಲಿ ಲಟ್ಟಣಿಗೆಯಲ್ಲಿ ಒತ್ತಿ.
7. ತವಾ ಬಿಸಿಯಾದ ಮೇಲೆ ಅದನ್ನು ತವಾ ಮೇಲೆ ಹಾಕಿ, ಬೇಯಿಸಿ.
8. ಚೆನ್ನಾಗಿ ಬೆಂದ ರಾಗಿ ರೊಟ್ಟಿಗೆ ತುಪ್ಪ (Ghee) ಸೇರಿಸಿ ತಿಂದರೆ ಬ್ರಹ್ಮಾಂಡ ರುಚಿ ಅನುಭವಿಸುತ್ತೀರಿ. 
9. ಬೆಳಗ್ಗಿನ ಉಪಹಾರಕ್ಕೆ ಅಥವಾ ಸಂಜೆಯ ಸ್ನ್ಯಾಕ್ಸ್ ಗೆ ಟ್ರೈಮಾಡಿ ನೋಡಿ.


ಇದನ್ನೂ ಓದಿ : 2050 ರ ವೇಳೆಗೆ ವಿಶ್ವದ ನಾಲ್ಕರಲ್ಲಿ ಒಬ್ಬರಿಗೆ ಶ್ರವಣ ದೋಷ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.