For Longer Life: ವಾರಕ್ಕೆ ಐದು ದಿನ ಹೀಗೆ ಮಾಡಿ ನೋಡಿ..! ದೀರ್ಘಾಯುಷಿಗಳಾಗುತ್ತೀರಿ..!

ದಿನಕ್ಕೆ ಕನಿಷ್ಠ 160 ಗ್ರಾಮ್ ಆಗುವಷ್ಟು ಹಣ್ಣು  240 ಗ್ರಾಂ ಆಗುಷ್ಟು ತರಕಾರಿ  ವಾರಕ್ಕೆ ಕನಿಷ್ಟ ಐದು ದಿನ ತಿನ್ನಿ. ಇದು ಬುರುಡೆ ವಿಜ್ಞಾನ ಅಲ್ಲ. ಅಮೆರಿಕ ವಿಜ್ಞಾನಿಗಳು ನಿರಂತರ ಸಂಶೋಧನೆಯ ಮೇಲೆ ಕಂಡು ಹಿಡಿದ ಸತ್ಯ.

Written by - Ranjitha R K | Last Updated : Mar 2, 2021, 09:38 AM IST
  • ದೀರ್ಘಾಯುಷ್ಯ ಯಾರಿಗೆ ತಾನೆ ಬೇಡ ಹೇಳಿ.
  • ಅಮೆರಿಕದ ವಿಜ್ಞಾನಿಗಳು ದೀರ್ಘಾಯುಷ್ಯದ ಗುಟ್ಟು ಪತ್ತೆ ಮಾಡಿದ್ದಾರೆ.
  • ಅದೇನು ಅಂಥಾ ಕಷ್ಟ ಏನಲ್ಲ. ತುಂಬಾ ಸಿಂಪಲ್. ಈ ವರದಿ ಓದಿ.
For Longer Life: ವಾರಕ್ಕೆ ಐದು ದಿನ ಹೀಗೆ ಮಾಡಿ ನೋಡಿ..! ದೀರ್ಘಾಯುಷಿಗಳಾಗುತ್ತೀರಿ..! title=
ಅಮೆರಿಕದ ವಿಜ್ಞಾನಿಗಳು ದೀರ್ಘಾಯುಷ್ಯದ ಗುಟ್ಟು ಪತ್ತೆ ಮಾಡಿದ್ದಾರೆ. (file photo)

ಬೆಂಗಳೂರು : ದೀರ್ಘಾಯುಷ್ಯ ಯಾರಿಗೆ ತಾನೆ ಬೇಡ ಹೇಳಿ. ಅಮೆರಿಕದ ವಿಜ್ಞಾನಿಗಳು ದೀರ್ಘಾಯುಷ್ಯದ ಗುಟ್ಟು ಪತ್ತೆ ಮಾಡಿದ್ದಾರೆ. ಅದೇನು ಅಂಥಾ ಕಷ್ಟ ಏನಲ್ಲ. ತುಂಬಾ ಸಿಂಪಲ್. ಮುಂದೆ ಓದಿ.

ದೀರ್ಘಾಯುಷ್ಯದ ರಹಸ್ಯ ತುಂಬಾ ಸಿಂಪಲ್..!
ನೀವು ಇಷ್ಟು ಮಾಡಿ. ದಿನಕ್ಕೆ ಕನಿಷ್ಠ 160 ಗ್ರಾಮ್ ಆಗುವಷ್ಟು ಹಣ್ಣು (Fruits), 240 ಗ್ರಾಂ ಆಗುಷ್ಟು ತರಕಾರಿ (Vegitable) ವಾರಕ್ಕೆ ಕನಿಷ್ಟ ಐದು ದಿನ ತಿನ್ನಿ. ಇದು ಬುರುಡೆ ವಿಜ್ಞಾನ ಅಲ್ಲ. ಅಮೆರಿಕ ವಿಜ್ಞಾನಿಗಳು ನಿರಂತರ ಸಂಶೋಧನೆಯ ಮೇಲೆ ಕಂಡು ಹಿಡಿದ ಸತ್ಯ. ಜಗತ್ತಿನಾದ್ಯಂತ 20 ಲಕ್ಷ ಜನರ ಮೇಲೆ ಸಂಶೋಧನೆ (Research) ನಡೆಸಿ ಬಳಿಕ ಈ ತರ್ಕಕ್ಕೆ ಬಂದಿದ್ದಾರೆ. ಅವರ ಸಂಶೋಧನೆಯಲ್ಲಿ ಇನ್ನೂ ಒಂದು ಸತ್ಯ ಹೊರಬಿದ್ದಿದೆ. ಏನಪ್ಪಾ ಅಂದ್ರೆ, ಹಣ್ಣು-ತರಕಾರಿ ಸಾಕಷ್ಟು ಪ್ರಮಾಣದಲ್ಲಿ ತಿಂದರೆ, ಹೃದ್ರೋಗ (Heart Decease) , ಕ್ಯಾನ್ಸರ್ (Cancer) ಮುಂತಾದ ಮಾರಕ ರೋಗಗಳಿಂದಲೂ ನೀವು ದೂರ ಇರಬಹುದಂತೆ..! ಅಮೆರಿಕದ ಹಾರ್ಟ್ ಅಸೋಶಿಯೇಶನ್ನಿನ ಪ್ಲಾಗ್ ಶಿಪ್  ಸರ್ಕುಲೇಶನ್ ನಲ್ಲಿ ಈ ಸಂಶೋಧನಾ ಪ್ರಬಂಧ ಬರೆಯಲಾಗಿದೆ. 

ಇದನ್ನೂ ಓದಿ : Kidney Stone : ಕಿಡ್ನಿ ಸಮಸ್ಯೆ ಇದೆಯಾ..? ಈ ಐದು ವಸ್ತುಗಳಿಂದ ದೂರ ಇರಿ.!
 

ಅಲೂಗಡ್ಡೆ, ಕಾನ್ ಫ್ಲೋರ್ ನಿಷಿದ್ಧ.! 

ಈ ವರದಿಯ ಪ್ರಕಾರ ಅಲೂಗಡ್ಡೆ, ಕಾನ್ ಫ್ಲೋರ್ ಮುಂತಾದ ಸ್ಟಾರ್ಚ್ ಅಥವಾ ಗಂಜಿ ಅಧಿಕ ಇರುವ ತರಕಾರಿ ಸೇವನೆ ಮಾಡಬಾರದು. ನಿತ್ಯ ಆಹಾರದಲ್ಲಿ ಹಣ್ಣು, ತರಕಾರಿ ಸಾಕಷ್ಟು ಪ್ರಮಾಣದಲ್ಲಿ ಇದ್ದರೆ, ಬೊಜ್ಜು (Obesity) ಮತ್ತು ಶುಗರ್ (Sugar) ಕೂಡಾ ಕಡಿಮೆ ಆಗುತ್ತದೆಯಂತೆ. ಈ ಮಾತು ಹೇಳಿದ್ದು ಬ್ರಿಟನಿನ ನ್ಯಾಷನಲ್ ಹೆಲ್ತ್ ಸರ್ವಿಸಸ್.

ಹತ್ತರಲ್ಲಿ ಒಬ್ಬರು ಮಾತ್ರ..!
ವಿಜ್ಞಾನಿಗಳ ಸಂಶೋಧನೆಯನ್ನು ನಂಬುವುದಾದರೆ, ಸರಿ ಪ್ರಮಾಣದಲ್ಲಿ ಹಣ್ಣು, ತರ್ಕಾರಿ ತಿನ್ನುವವರು ಕೇವಲ ಹತ್ತರಲ್ಲಿ ಒಬ್ಬರು ಮಾತ್ರವಂತೆ. ನಮ್ಮ ನಿತ್ಯ ಆಹಾರದಲ್ಲಿ ಅಷ್ಟೊಂದು ಏರಿಳಿತಗಳಿವೆ.  ಕಾಯಿಲೆಗಳಿಂದ ದೂರ ಇರಬೇಕು ಹಾಗೂ ದೀರ್ಘಾಯುಷ್ಯ ಬೇಕೆಂದರೆ ಊಟದ ತಟ್ಟೆಯಲ್ಲಿ ಹಣ್ಣು, ತರ್ಕಾರಿ ಭರಪೂರ ಇರಬೇಕು.

ಇದನ್ನೂ ಓದಿ : ನಿಮಗೂ ಮರೆವಿನ ಸಮಸ್ಯೆ ಇದ್ದರೆ, ಈ Exercise ಮಾಡಿ

 ಯಾವುದನ್ನು ತಿನ್ನಬೇಕು..?
ಸಂಶೋಧನಾ ವರದಿ ಪ್ರಕಾರ, ನಿಮ್ಮ ಆಹಾರದಲ್ಲಿ ಪಾಲಕ್ , ಗೊಂಗುರಾ (ಪುಂಡಿಪಲ್ಯ) ಇತ್ಯಾದಿ ಸೊಪ್ಪುಗಳೂ ಇರಬೇಕು. ಕ್ಯಾರೇಟ್ (Carrot) ತಿನ್ನಬೇಕು. ಹಸಿರು ತರ್ಕಾರಿ ಹೆಚ್ಚಿಗೆ ತಿನ್ನಬೇಕು. ಹಣ್ಣುಗಳ ಪೈಕಿ ಕಿತ್ತಳೆ (Orange), ಮೋಸಂಬಿ ಹಣ್ಣುಗಳನ್ನು ಹೆಚ್ಚಿಗೆ ತಿನ್ನಿ. ಅದರಲ್ಲಿ ವಿಟಮಿನ್ ಸಿ ಇರುತ್ತದೆ. ಮುಖ್ಯ ವಿಷಯ ಒಂದು ಗೊತ್ತಿರಲಿ. ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವುದನ್ನು ಕಡಿಮೆ ಮಾಡಿ. ಹಾಗೆ ತಿಂದರೆ, ದೇಹಕ್ಕೆ ಹಣ್ಣಿನ ರಸದ ಜೊತೆ ಅಗತ್ಯ ಫೈಬರ್ (fiber) ಕೂಡಾ ಸಿಗುತ್ತದೆ. ಹಣ್ಣಿನ ರಸ ಎಷ್ಟು ಮುಖ್ಯವೋ ದೇಹಕ್ಕೆ ಫೈಬರ್ ಕೂಡಾ ಅಷ್ಟೇ ಮುಖ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News