ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ರೋಗದಲ್ಲಿ, ದೇಹದೊಳಗಿನ ಇನ್ಸುಲಿನ್ ಪ್ರಮಾಣವು ಸಾಕಾಗುವುದಿಲ್ಲ, ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಆರಂಭವಾಗುತ್ತದೆ. ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ರೋಗವು ದೀರ್ಘಕಾಲದವರೆಗೆ ಮುಂದುವರಿದರೆ ದೇಹದಲ್ಲಿನ  ಹೃದಯ, ಮೂತ್ರಪಿಂಡಗಳು ಮತ್ತು ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡಬಹುದು.


COMMERCIAL BREAK
SCROLL TO CONTINUE READING

ಆದರೆ ಮಧುಮೇಹ(Diabetes)ದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ತ್ರಿಫಲ(Triphala Powder)ವು ಸಹಾಯಕವಾಗಿದೆ ಎಂಬುವುದು ನಿಮಗೆ ಗೊತ್ತಾ?. ಎನ್‌ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಯಮಿತವಾಗಿ 45 ದಿನಗಳವರೆಗೆ 5 ಗ್ರಾಂ ತ್ರಿಫಲ ಚೂರ್ಣವನ್ನು ಸೇವಿಸುವುದರಿಂದ  ರಕ್ತದಲ್ಲಿನ ಸಕ್ಕರೆಯ ಮಟ್ಟವು ಗಮನಾರ್ಹವಾಗಿ ನಿಯಂತ್ರಣದಲ್ಲಿರುವುದು ಕಂಡುಬರುತ್ತದೆ.


ಇದನ್ನೂ ಓದಿ : Ragi Health Benefits : ತೂಕ ಇಳಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ 'ರಾಗಿ', ಈ 5 ಪ್ರಚಂಡ ಪ್ರಯೋಜನಗಳ ಬಗ್ಗೆ ತಿಳಿಯಿರಿ!


ಮಧುಮೇಹವನ್ನು ನಿಯಂತ್ರಿಸಲು ತ್ರಿಫಲ ಪರಿಹಾರ


ಈಸಿ ಆಯುರ್ವೇದದ ಪ್ರಕಾರ, ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ(Sugar Control)ವನ್ನು ನಿಯಂತ್ರಿಸಲು ತ್ರಿಫಲವನ್ನು ಈ 3 ವಿಧಾನಗಳಲ್ಲಿ ಸೇವಿಸಬಹುದು. 


ಪರಿಹಾರ 1


ಮಧುಮೇಹಿ ರೋಗಿಗಳು ಪ್ರತಿದಿನ ಮಧ್ಯಾಹ್ನ ಮಜ್ಜಿಗೆಯೊಂದಿಗೆ ತ್ರಿಫಲ ಪುಡಿಯನ್ನು ಸೇವಿಸಬೇಕು. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರ ಜೊತೆಗೆ, ಜೀರ್ಣಕ್ರಿಯೆಯೂ ಸರಿಯಾಗಿರುತ್ತದೆ.


ಪರಿಹಾರ 2


ಪ್ರತಿ ರಾತ್ರಿ ಒಂದೂವರೆ ಚಮಚ ತ್ರಿಫಲ ಪುಡಿಯನ್ನು ಕಬ್ಬಿಣದ ಪಾತ್ರೆಯಲ್ಲಿ ಒಂದು ಕಪ್ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆ(Empty Stomach)ಯಲ್ಲಿ, ಈ ಪೇಸ್ಟ್‌ನಲ್ಲಿ ಜೇನುತುಪ್ಪವನ್ನು ಬೆರೆಸಿ ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.


ಇದನ್ನೂ ಓದಿ : 


ಪರಿಹಾರ 3Adulteration in Turmeric Powder: ನೀವು ಕಲಬೆರಕೆ ಅರಿಶಿನ ತಿನ್ನುತ್ತಿದ್ದೀರಾ? ನೈಜ ಮತ್ತು ನಕಲಿ ಅರಿಶಿನವನ್ನು ಗುರುತಿಸುವುದು ಹೇಗೆ?


ತ್ರಿಫಲ ಪುಡಿಯನ್ನು ದೇಸಿ ತುಪ್ಪದೊಂದಿಗೆ ಬೆರೆಸಿ ಪ್ರತಿ ರಾತ್ರಿ ಮಲಗುವ ಮುನ್ನ ತಿನ್ನಬಹುದು. ಇದರ ನಂತರ ನೀವು ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ. ಮಧುಮೇಹ ರೋಗಿಗೆ ಈ ಪರಿಹಾರವು ತುಂಬಾ ಸಹಾಯಕವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.