Natural Way to Condition Your Hair : ಹವಾಮಾನ ಬದಲಾವಣೆಯೊಂದಿಗೆ, ಕೂದಲು ಉದುರುವಿಕೆಯ ಸಮಸ್ಯೆ ಕೂಡಾ ಕಾಡಲು ಆರಂಭವಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ದುಬಾರಿ ಶಾಂಪೂ, ಹೇರ್ ಮಾಸ್ಕ್ ಅಥವಾ ಚಿಕಿತ್ಸೆಗಳ ಮೊರೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಈ ಎಲ್ಲಾ ವಿಧಾನಗಳು ದುಬಾರಿಯಾಗಿದ್ದು, ರಾಸಾಯನಿಕಗಳ ಬಳಕೆ ಕೂಡಾ ಇಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿ ಕೂದಲಿನ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗಾಗಿ ಹೇರ್ ಕಂಡಿಷನರ್ ಮಾಡುವ ವಿಧಾನವನ್ನು ತಂದಿದ್ದೇವೆ. 


COMMERCIAL BREAK
SCROLL TO CONTINUE READING

ಅಡುಗೆ ಮನೆಯಲ್ಲಿಯೇ ಲಭ್ಯವಿರುವ ಮೊಸರು, ಸಾಸಿವೆ ಎಣ್ಣೆ ಮತ್ತು ನಿಂಬೆ ರಸದ ಸಹಾಯದಿಂದ ಈ ಕಂಡೀಷನರ್ ಅನ್ನು ತಯಾರಿಸಲಾಗುತ್ತದೆ. ಈ ಮೂರು ವಸ್ತುಗಳು ನಿಮ್ಮ ಕೂದಲನ್ನು ಆಳವಾಗಿ ಪೋಷಿಸುವ ಅನೇಕ ಗುಣಗಳಿಂದ ತುಂಬಿವೆ. ಇದು ನಿಮ್ಮ ಕೂದಲನ್ನು ಸ್ಟ್ರಾಂಗ್, ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.   ಹಾಗಿದ್ದರೆ ಮನೆಯಲ್ಲಿ ಹೇರ್ ಕಂಡೀಷನರ್ ಅನ್ನು ಹೇಗೆ ತಯಾರಿಸುವುದು  ನೋಡೋಣ. 


ಇದನ್ನೂ ಓದಿ : ಸಾಬೂನು ಬಳಸದೆ ಅಡುಗೆ ಮನೆಯ ಪಾತ್ರೆ ಫಳ ಫಳ ಹೊಳೆಯುವಂತೆ ಮಾಡುವ ಸರಳ ವಿಧಾನ


ಮನೆಯಲ್ಲಿ ಹೇರ್ ಕಂಡೀಷನರ್ ಮಾಡಲು ಬೇಕಾಗುವ ಸಾಮಗ್ರಿಗಳು : 
ಮೊಸರು
ಸಾಸಿವೆ ಎಣ್ಣೆ ಎರಡು ಚಮಚ 
ನಿಂಬೆ ರಸ ಒಂದು ಅಥವಾ ಅರ್ಧ ಚಮಚ


ಮನೆಯಲ್ಲಿ ಹೇರ್ ಕಂಡೀಷನರ್ ಅನ್ನು ಹೇಗೆ ತಯಾರಿಸುವುದು? 
ಮನೆಯಲ್ಲಿ ಹೇರ್ ಕಂಡೀಷನರ್ ತಯಾರಿಸಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ. 


ಅದರಲ್ಲಿ ಮೊಸರು, ಎರಡು ಚಮಚ ಸಾಸಿವೆ ಎಣ್ಣೆ ಮತ್ತು ಒಂದು ಅಥವಾ ಅರ್ಧ ಚಮಚ ನಿಂಬೆ ರಸವನ್ನು ಸೇರಿಸಿ.
ನಂತರ, ಈ ಮೂರು ವಸ್ತುಗಳನ್ನು ಚೆನ್ನಾಗಿ  ಬೀಟ್ ಮಾಡುವ ಮೂಲಕ ಮೃದುವಾದ ಕೆನೆ ಪೇಸ್ಟ್ ಮಾಡಿಕೊಳ್ಳಿ.
ಈಗ ಮನೆಯಲ್ಲಿಯೇ ತಯಾರಿಸಿದ ಹೇರ್ ಕಂಡಿಷನರ್ ಸಿದ್ಧವಾಗುತ್ತದೆ. 


ಇದನ್ನೂ ಓದಿ : ತೂಕ ಕಳೆದುಕೊಳ್ಳಬೇಕಾದರೆ ಗೋಧಿ ಹಿಟ್ಟು ಅಲ್ಲ ಈ ಹಿಟ್ಟಿನ ಚಪಾತಿ ಸೇವಿಸಿ !


ಮನೆಯಲ್ಲಿ ತಯಾರಿಸಿದ ಹೇರ್ ಕಂಡಿಷನರ್ ಅನ್ನು ಹೇಗೆ ಬಳಸುವುದು?  
ಮನೆಯಲ್ಲಿ ತಯಾರಿಸಿದ ಹೇರ್ ಕಂಡೀಷನರ್ ಅನ್ನು  ಕೂದಲಿಗೆ ಹಚ್ಚುವ ಮುನ್ನ ಕೂದಲನ್ನು ಚೆನ್ನಾಗಿ ಬಾಚಿಕೊಂಡು ಬಿಡಿಸಿಕೊಳ್ಳಿ. 
ನಂತರ ಸಿದ್ಧಪಡಿಸಿದ ಪೇಸ್ಟ್ ಅನ್ನು ಬೇರುಗಳಿಂದ ಕೂದಲಿನ ತುದಿಯವರೆಗೆ ಚೆನ್ನಾಗಿ ಹಚ್ಚಿ.  
ನಂತರ, ಕೂದಲನ್ನು ಚೆನ್ನಾಗಿ ಕಟ್ಟಿಕೊಳ್ಳಿ ಅಥವಾ ಅದನ್ನು ಕ್ಯಾಪ್ನಿಂದ ಮುಚ್ಚಿ. 
ಈ ಪೇಸ್ಟ್ ಅನ್ನು ನಿಮ್ಮ ಕೂದಲಿನ ಮೇಲೆ ಕನಿಷ್ಠ ಅರ್ಧ ಘಂಟೆಯವರೆಗೆ ಬಿಡಿ. 
 ಅರ್ಧ ಗಂಟೆಯ ನಂತರ ಕೂದಲನ್ನು ಮೊದಲು ನೀರಿನಿಂದ ತೊಳೆಯಿರಿ ಮತ್ತು ನಂತರ ಸೌಮ್ಯವಾದ ಶಾಂಪೂ ಬಳಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.