ಬೆಂಗಳೂರು : ತೂಕ ಇಳಿಸಿಕೊಳ್ಳಲು ಬಯಸುವವರು, ತಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆಶ್ಚರ್ಯಕರ ಫಲಿತಾಂಶಗಳನ್ನು ಕಾಣಬಹುದು. ಸಾಮಾನ್ಯವಾಗಿ ತೂಕ ಕಳೆದುಕೊಳ್ಳಬೇಕು ಎಂದು ಪ್ರಯತ್ನಿಸುವವರು ಅನ್ನದ ಬದಲು ಚಪಾತಿ ಸೇವಿಸಲು ಆರಂಭಿಸುತ್ತಾರೆ. ದೇಹ ತೂಕ ಕಳೆದುಕೊಳ್ಳಲು ಚಪಾತಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ತೂಕ ಕಳೆದುಕೊಳ್ಳುವ ಕಾರಣಕ್ಕೆ ಚಪಾತಿ ಸೇವಿಸುವವರು ನೆನಪಿಡಬೇಕಾದ ಅಂಶ ಎಂದರೆ, ಅವರು ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಯನ್ನು ಸೇವಿಸಿದರೆ ನಿರೀಕ್ಷಿತ ಫಲಿತಾಂಶ ಸಿಗದೇ ಹೋಗಬಹುದು. ಯಾಕೆಂದರೆ ಗೋಧಿ ಹಿಟ್ಟು ಕಾರ್ಬೋಹೈಡ್ರೇಟ್ಗಳು ಮತ್ತು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ.
ಹಾಗಿದ್ದರೆ ತೂಕ ನಷ್ಟ ಪ್ರಯತ್ನಕ್ಕೆ ಕೈ ಹಾಕಿದವರು ಯಾವ ಹಿಟ್ಟಿನ ಚಪಾತಿಯನ್ನು ಸೇವಿಸಬೇಕು. ಯಾವ ಹಿಟ್ಟಿನ ಚಪಾತಿ ಸೇವಿಸಿದರೆ ದೇಹ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು ನೋಡೋಣ.
ಇದನ್ನೂ ಓದಿ : ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!
ರಾಗಿ ಹಿಟ್ಟು :
ಅಕ್ಕಿ, ಮೈದಾ ಮತ್ತು ಗೋಧಿಗೆ ಹೋಲಿಸಿದರೆ ರಾಗಿಯ ಹೊರ ಚರ್ಮದಲ್ಲಿ ಪಾಲಿಫಿನಾಲ್ಗಳ ಪ್ರಮಾಣವು ಹೆಚ್ಚಿನ ಸಾಂದ್ರತೆಯಲ್ಲಿ ಕಂಡುಬರುತ್ತದೆ. ರಾಗಿಯಲ್ಲಿನ ಪ್ರೋಟೀನ್ ಅಂಶವನ್ನು ಅಕ್ಕಿಯೊಂದಿಗೆ ಹೋಲಿಸಿದರೆ, ರಾಗಿಯಲ್ಲಿನ ಪ್ರೋಟೀನ್ ಅಂಶವು ಅಕ್ಕಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ರಾಗಿ ಹಿಟ್ಟಿನಲ್ಲಿ ಫೈಬರ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ರಾಗಿ ಹಿಟ್ಟಿನಲ್ಲಿ ಗ್ಲುಟನ್ ಇರುವುದಿಲ್ಲ. ಈ ಹಿಟ್ಟು ಬೊಜ್ಜು ಮಾತ್ರವಲ್ಲ ಮಧುಮೇಹ ರೋಗಿಗಳಿಗೂ ತುಂಬಾ ಉಪಯುಕ್ತವಾಗಿದೆ.
ಅಮರಂಥ ಹಿಟ್ಟು :
ರಾಜ್ ಗೀರಾ ಅಥವಾ ಅಮರಂಥ ಹಿಟ್ಟು ಈಗ ಬಹಳ ಜನಪ್ರಿಯವಾಗಿದೆ. ಅಮರಂಥ ಧಾನ್ಯದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಇದರಲ್ಲಿ ಗೋಧಿಗಿಂತ ಅಧಿಕ ಪ್ರಮಾಣದ ಪ್ರೋಟೀನ್ ಇದೆ. ತೂಕ ನಷ್ಟಕ್ಕೆ ಪ್ರೋಟೀನ್ ಬಹಳ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರೊಂದಿಗೆ, ಈ ಹಿಟ್ಟಿನಲ್ಲಿ ಫೈಬರ್ ಅಧಿಕವಾಗಿದೆ. ಈ ಹಿಟ್ಟಿನಲ್ಲಿ ವಿಟಮಿನ್ ಗಳು, ಖನಿಜಗಳು ಮತ್ತು ಪಿಲಿಡ್ ಗಳಿವೆ. ಅಮರಂಥ್ ಹಿಟ್ಟಿನ ಚಪಾತಿ ಸೇವಿಸುವುದರಿಂದ ಬೊಜ್ಜು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಅಂಶವೂ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಅಮರಂಥ ಧಾನ್ಯವು 6-10 ಪ್ರತಿಶತದಷ್ಟು ಅಗತ್ಯವಾದ ಕೊಬ್ಬಿನಾಮ್ಲ ತೈಲಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ : ಅಲೋವೆರಾವನ್ನು ಈ ರೀತಿ ಉಪಯೋಗಿಸಿದರೆ ಸುಲಭವಾಗಿ ಕರಾಗುತ್ತೆ ಬೆಲ್ಲಿ ಫ್ಯಾಟ್
ರಾಗಿ ಹಿಟ್ಟು :
ರಾಗಿ ಹಿಟ್ಟಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಫೈಬರ್ ಮತ್ತು ಇತರ ಪೋಷಕಾಂಶಗಳಿವೆ. ರಾಗಿ ಹಿಟ್ಟು ಅಧಿಕ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಕಾರ್ಬೋಹೈಡ್ರೇಟ್ ಗಳು ಅಥವಾ ಗ್ಲುಟನ್ ಅನ್ನು ಹೊಂದಿರುವುದಿಲ್ಲ. ಇದು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ತೂಕವನ್ನು ಕಳೆದುಕೊಳ್ಳುತ್ತದೆ.
ಓಟ್ಸ್ ಹಿಟ್ಟು :
ಓಟ್ಸ್ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡಾ ನಿಯಂತ್ರಣದಲ್ಲಿಡುತ್ತದೆ. ಓಟ್ ಮೀಲ್ ಅನ್ನು ಬೆಳಿಗ್ಗೆ ತಿನ್ನುವುದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ಆಹಾರದಲ್ಲಿ ಓಟ್ಸ್ ಅನ್ನು ಸೇರಿಸುವುದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Women Health: ಋತುಚಕ್ರದ ದಿನಾಂಕ ಸ್ಕಿಪ್ ಆಗಿದೆಯೇ? ಈ ಮನೆ ಉಪಾಯ ಅನುಸರಿಸಿ ನೋಡಿ!
ಕ್ವಿನೋವಾ ಹಿಟ್ಟು :
ಅಕ್ಕಿ ಮತ್ತು ಗೋಧಿ ಹಿಟ್ಟಿನಂತೆ, ಕ್ವಿನೋವಾ ಹಿಟ್ಟು ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಕ್ವಿನೋವಾ ಹಿಟ್ಟು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕ್ವಿನೋವಾ ಹಿಟ್ಟು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಅಂಶದಿಂದ ಸಮೃದ್ಧವಾಗಿದೆ. ಇದು ಅನಾರೋಗ್ಯಕರ ಕ್ಯಾಲೊರಿಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ನಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.